ಬೆಂಗಳೂರಿನಲ್ಲಿ ಟನಲ್ ರೋಡ್: ಜನರಿಂದ ಪೈಸಾ ವಸೂಲ್ ಬಗ್ಗೆ ಬಿಚ್ಚಿಟ್ಟ ತೇಜಸ್ವಿ ಸೂರ್ಯ
ಬೆಂಗಳೂರಿನ ಟನಲ್ ರೋಡ್ ವಿಚಾರ ಈಗ ಸಂಸದ ತೇಜಸ್ವಿ ಸೂರ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್ ನಡುವಿನ ಮೇಲಾಟಕ್ಕೆ ತಿರುಗಿದೆ. ತೇಜಸ್ವಿ ಸೂರ್ಯ ಕೊಟ್ಟಿದ್ದ ಪ್ರಸ್ತಾವನೆಯನ್ನು ಪರ್ಯಾಯವಲ್ಲ ಎಂದು ಒಂದೇ ಸಾಲಿನ ಉತ್ತರದಲ್ಲಿ ಡಿ.ಕೆ. ಶಿವಕುಮಾರ್ ಪಕ್ಕಕ್ಕಿಟ್ಟಂತಿದೆ. ಇದೇ ವಿಚಾರ ಮತ್ತೆ ಇಬ್ಬರ ನಡುವೆ ಸಮರ ಸಾರುವಂತೆ ಮಾಡಿದ್ದು, ಸುರಂಗ ಮಾರ್ಗದ ಸುತ್ತಲಿನ ಚರ್ಚೆಗಳು ಸದ್ಯಕ್ಕೆ ತಣ್ಣಗಾಗುವ ಲಕ್ಷಣಗಳು ಕಾಣುತ್ತಿಲ್ಲ.
ನವದೆಹಲಿ, (ಅಕ್ಟೋಬರ್ 31): ಬೆಂಗಳೂರಿನ ಟನಲ್ ರೋಡ್ ವಿಚಾರ ಈಗ ಸಂಸದ ತೇಜಸ್ವಿ ಸೂರ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್ ನಡುವಿನ ಮೇಲಾಟಕ್ಕೆ ತಿರುಗಿದೆ. ತೇಜಸ್ವಿ ಸೂರ್ಯ ಕೊಟ್ಟಿದ್ದ ಪ್ರಸ್ತಾವನೆಯನ್ನು ಪರ್ಯಾಯವಲ್ಲ ಎಂದು ಒಂದೇ ಸಾಲಿನ ಉತ್ತರದಲ್ಲಿ ಡಿ.ಕೆ. ಶಿವಕುಮಾರ್ ಪಕ್ಕಕ್ಕಿಟ್ಟಂತಿದೆ. ಇದೇ ವಿಚಾರ ಮತ್ತೆ ಇಬ್ಬರ ನಡುವೆ ಸಮರ ಸಾರುವಂತೆ ಮಾಡಿದ್ದು, ಸುರಂಗ ಮಾರ್ಗದ ಸುತ್ತಲಿನ ಚರ್ಚೆಗಳು ಸದ್ಯಕ್ಕೆ ತಣ್ಣಗಾಗುವ ಲಕ್ಷಣಗಳು ಕಾಣುತ್ತಿಲ್ಲ.
ಇನ್ನು ತಮ್ಮ ಸಲಹೆಯನ್ನು ಡಿಕೆ ಶಿವಕುಮಾರ್ ತಳ್ಳಿಹಾಕಿರುವ ಬಗ್ಗೆ ತೇಜಸ್ವಿ ಸೂರ್ಯ ನವದೆಹಲಿಯಲ್ಲಿಂದು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದು, ಡಿಸಿಎಂ ನನ್ನ ಬಗ್ಗೆ ವೈಯಕ್ತಿಕ ಟೀಕೆ ಮಾಡಿದ್ದಾರೆ. ನಾನು ಅವರಿಗೆ ಮನವಿ ಮಾಡುತ್ತಿದ್ದೇನೆ. ನೀವು ಒಳ್ಳೆ ಕೆಲಸ ಮಾಡಲು ಹೊರಟಿರಬಹುದು. ಆದರೆ ಟನಲ್ ರೋಡ್ ಪ್ರಾಜೆಕ್ಟ್ ಒಳ್ಳೆಯದಲ್ಲ. ಟನಲ್ ಪ್ರಾಜೆಕ್ಟ್ ಐಡಿಯಾ ಯಾರು ಕೊಟ್ಟರು ಗೊತ್ತಿಲ್ಲ. ಅವರು ಡಿಸಿಎಂ ಹಿತೈಷಿಗಳಲ್ಲ. ಟನಲ್ ರೋಡ್ ನಲ್ಲಿ ಹೋಗಿ ಬರಲು ಒಂದು ಸಲಕ್ಕೆ 650 ರೂಪಾಯಿ ಕಟ್ಟಬೇಕು. ತಿಂಗಳಿಗೆ 20 ರಿಂದ 25000 ರೂಪಾಯಿ ಕಟ್ಟಬೇಕು. ಇದನ್ನು ಪ್ರಶ್ನೆ ಮಾಡಿದರೆ ಎಳಸು ಅಂತೀರಾ ಎಂದು ಡಿಕೆ ಶಿವಕುಮಾರ್ಗೆ ಪ್ರಶ್ನಿಸಿದರು.
