ಅಮೆಜಾನ್​​​ನಲ್ಲಿ ಬುಕ್ ಮಾಡಿದ್ದು 1.85 ಲಕ್ಷ ರೂ.ಮೊಬೈಲ್: ಪಾರ್ಸಲ್ ಬಂದಿದ್ದು ಟೈಲ್ಸ್ ಕಲ್ಲು

Updated on: Oct 30, 2025 | 4:36 PM

ಇತ್ತೀಚಿನ ದಿನಗಳಲ್ಲಿ ಸೈಬರ್ ವಂಚಕರು, ಆನ್ ಲೈನ್ ವಂಚಕರ ಹಾವಳಿ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು ಆನ್ ಲೈನ್ ಶಾಪಿಂಗ್ ಮಾಡುವಾಗ ಸಾಕಷ್ಟು ಎಚ್ಚರ ವಹಿಸಬೇಕು. ಹೌದು, ಇಲ್ಲೊಬ್ಬರು ವ್ಯಕ್ತಿ ಅಮೆಜಾನ್ ಆಪ್ ನಲ್ಲಿ 1.85 ಲಕ್ಷ ರೂಪಾಯಿಯ ಮೊಬೈಲ್ ಬುಕ್ ಮಾಡಿದ್ದರೆ ಪಾರ್ಸಲ್ ನಲ್ಲಿ ಬಂದಿದ್ದು ಮಾತ್ರ ಟೈಲ್ಸ್ ಕಲ್ಲು. ಹೌದು...ಇಂತಹದೊಂದು ಘಟನೆ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ನಡೆದಿದೆ. ಬೆಂಗಳೂರಿನ ಪ್ರೇಮಾನಂದ್ ಎಂಬುವವರೇ ಈ ರೀತಿ ಮೋಸ ಹೋದವರು.

ಬೆಂಗಳೂರು, (ಅಕ್ಟೋಬರ್ 30): ಇತ್ತೀಚಿನ ದಿನಗಳಲ್ಲಿ ಸೈಬರ್ ವಂಚಕರು, ಆನ್ ಲೈನ್ ವಂಚಕರ ಹಾವಳಿ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು ಆನ್ ಲೈನ್ ಶಾಪಿಂಗ್ ಮಾಡುವಾಗ ಸಾಕಷ್ಟು ಎಚ್ಚರ ವಹಿಸಬೇಕು. ಹೌದು, ಇಲ್ಲೊಬ್ಬರು ವ್ಯಕ್ತಿ ಅಮೆಜಾನ್ ಆಪ್ ನಲ್ಲಿ 1.85 ಲಕ್ಷ ರೂಪಾಯಿಯ ಮೊಬೈಲ್ ಬುಕ್ ಮಾಡಿದ್ದರೆ ಪಾರ್ಸಲ್ ನಲ್ಲಿ ಬಂದಿದ್ದು ಮಾತ್ರ ಟೈಲ್ಸ್ ಕಲ್ಲು. ಹೌದು…ಇಂತಹದೊಂದು ಘಟನೆ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ನಡೆದಿದೆ. ಬೆಂಗಳೂರಿನ ಪ್ರೇಮಾನಂದ್ ಎಂಬುವವರೇ ಈ ರೀತಿ ಮೋಸ ಹೋದವರು. ಇಂಜಿನಿಯರ್ ಪ್ರೇಮಾನಂದ್ ಕೆಲ ದಿನಗಳ ಹಿಂದೆ ಅಮೆಜಾನ್ ಆಪ್ ನಲ್ಲಿ 1 ಲಕ್ಷದ 85 ಸಾವಿರ ರೂಪಾಯಿ ಪೇ ಮಾಡಿ ಸ್ಯಾಮ್ಸಂಗ್ ಝಡ್ ಫೋಲ್ಡ್ ಮೊಬೈಲ್ ಬುಕ್ ಮಾಡಿದ್ದರು. ಆಪ್ ನಲ್ಲಿ ನಿಗದಿಯಾದ ಡೇಟ್ ನಂತೆ ಆರ್ಡರ್ ಡೆಲಿವರಿಯಾಗಿದೆ. ಆದ್ರೆ, ಪ್ರೇಮಾನಂದ್ ಬಂದ ಪಾರ್ಸಲ್ ತೆರೆದು ನೋಡಿದರೆ ಮೊಬೈಲ್ ಬದಲು ಬಾಕ್ಸ್ ನಲ್ಲಿ ಒಂದು ಟೈಲ್ಸ್ ಕಲ್ಲು ಇದೆ. ಇದನ್ನು ನೋಡಿ ಶಾಕ್ ಆದ ಪ್ರೇಮಾನಂದ್ ಡೆಲಿವರಿ ಬಾಯ್ ಗೆ ತಕ್ಷಣ ಕರೆ ಮಾಡಿದ್ದಾರೆ. ಆದರೆ ಯಾವುದೇ ಪ್ರತಿಕ್ರಿಯೆ ಸಿಕ್ಕಿಲ್ಲ . ಬಳಿಕ ಎನ್ ಸಿ ಆರ್ ಪಿ ಪೋರ್ಟ್ ನಲ್ಲಿ ದೂರು ನೀಡಿದ್ದಾರೆ. ಅಲ್ಲದೇ ಕುಮಾರಸ್ವಾಮಿ ಲೇಔಟ್ ಠಾಣೆಯಲ್ಲಿ ದೂರು ನೀಡಿದ್ದು, ಎಫ್ ಐ ಆರ್ ದಾಖಲಾಗಿದೆ.

Loading...
Unable to load recommendations.
Follow Us
ರಮೇಶ್ ಬಿ. ಜವಳಗೇರಾ

ಟಿವಿ9 ಕನ್ನಡದಲ್ಲಿ ಹಿರಿಯ ಉಪ ಸಂಪಾದಕ. ಕಳೆದ 07 ವರ್ಷಗಳಿಂದ ಮಾಧ್ಯಮ ಪ್ರಪಂಚದಲ್ಲಿದ್ದೇನೆ. ಹುಟ್ಟಿ ಬೆಳೆದದ್ದು, ರಾಯಚೂರು ಜಿಲ್ಲೆಯ ಸಿಂಧನೂರಿನ ಜವಳಗೇರಾದಲ್ಲಿ. ಗುಲ್ಬರ್ಗಾ ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮದಲ್ಲಿ ಪದವಿ ಪಡೆದಿದ್ದೇನೆ. ನನ್ನ ವೃತ್ತಿ ಆರಂಭವಾಗಿದ್ದೇ ಡಿಜಿಟಲ್​ ಮಾಧ್ಯಮದಿಂದ. ಒನ್​ ಇಂಡಿಯಾ ಕನ್ನಡ, ಏಷ್ಯಾನೆಟ್ ಸುವರ್ಣ ನ್ಯೂಸ್.ಕಾಂನಲ್ಲಿ ಕೆಲಸ ಮಾಡಿದ್ದೇನೆ. ಕ್ರೈಂ, ರಾಜಕೀಯ ಹಾಗೂ ಪ್ರಚಲಿತ ಸುದ್ದಿ ಬಗ್ಗೆ ಆಸಕ್ತಿ. ಪ್ರವಾಸ ಮಾಡುವುದು, ಸಂಗೀತ ಕೇಳುವುದು ನನ್ನ ಹವ್ಯಾಸಗಳು.

Read More