ಸಿಎಂ ಮತ್ತು ಜಿಲ್ಲಾ ಉಸ್ತುವಾರಿ ಸಚಿವನಿಗೆ ಮಾತ್ರ ಜನತಾ ದರ್ಶನ ನಡೆಸುವ ಅವಕಾಶವಿರುತ್ತದೆ: ಸಿದ್ದರಾಮಯ್ಯ
ಅವರು ಹಿಂದೆ ಮಾಡಿರಲಿಲ್ಲವೇ? ಅವರು ಅಧಿಕಾರದ್ಲಲಿದ್ದಾಗ ಹೀಗೆಯೇ ಮಾಡಿದ್ದರು ಅಂತ ನಮ್ಮ ನಾಯಕರು ತಮ್ಮ ಪ್ರಮಾದಗಳನ್ನು ಮುಚ್ಚಿಕೊಳ್ಳಲು ನೀಡುವ ಸಮರ್ಥನೆಗಳು ಬಾಲಿಶ ಅನಿಸುತ್ತವೆ. ಅವರು ಹಾಗೆ ಮಾಡಿದ್ದರು ಅಂತ ಇವರೂ ಹಾಗೆ ಮಾಡಿದರೆ ಅವರ ಮತ್ತು ಇವರ ನಡುವೆ ಉಳಿಯುವ ವ್ಯತ್ಯಾಸವಾದರೂ ಏನು? ನಾಯಕರೆನಿಸಿಕೊಂಡವರು ಸ್ವಲ್ಪ ಯೋಚನೆ ಮಾಡಬೇಕು.
ಬೆಂಗಳೂರು: ತನ್ನ ಜನತಾ ದರ್ಶನ ಕಾರ್ಯಕ್ರಮಕ್ಕೆ ಅಧಿಕಾರಿಗಳು ಪಾಲ್ಗೊಳ್ಳದಂತೆ ತಡೆಯಲಾಗಿದೆ ಎಂದು ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿಯವರು ಮಂಡ್ಯದಲ್ಲಿ ಹೇಳಿರುವುದಕ್ಕೆ ಇಂದು ನಗರದಲ್ಲಿ ನಡೆಸಿದ ಪ್ರತಿಕಾ ಗೋಷ್ಠಿಯಲ್ಲಿ ಉತ್ತರ ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಅಸಲಿಗೆ ಕೇವಲ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಜಿಲ್ಲಾ ಉಸ್ತುವಾರಿ ಸಚಿವರಿಗೆ ಮಾತ್ರ ಜನತಾ ದರ್ಶನ ಕಾರ್ಯಕ್ರಮ ಅವಕಾಶವಿರುತ್ತದೆ, ಹಿಂದಿನ ಬಿಜೆಪಿ ಸರ್ಕಾರ ವಿರೋಧ ಪಕ್ಷದ ನಾಯಕ ಪರಿಶೀಲನಾ ಸಬೆ ನಡೆಸಕೂಡದು ಅಂತ ಆದೇಶ ಹೊರಡಿಸಿತ್ತು, ಅದು ಯಾರಿಗೂ ಜ್ಞಾಪಕ ಇಲ್ವಾ? ಇದರಲ್ಲಿ ಹೊಸತೇನೂ ಇಲ್ಲ, ಮೊದಲಿಂದ ಇದೇ ಪದ್ಧತಿ ನಡೆದುಕೊಂಡು ಬಂದಿದೆ ಎಂದು ಹೇಳಿದರು. ಇದು ಕೇವಲ ಕುಮಾರಸ್ವಾಮಿಯವರ ಜನತಾ ದರ್ಶನ ಸೀಮಿತವಾದ ವಿಷಯವಲ್ಲ ಮಿಕ್ಕೆಲ್ಲರಿಗೂ ಅನ್ವಯಿಸುತ್ತದೆ ಎಂದು ಮುಖ್ಯಮಂತ್ರಿ ಹೇಳಿದರು. ಸುದ್ದಿಗೋಷ್ಠಿ ನಡೆಯುವಾಗ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಸಿದ್ದರಾಮಯ್ಯ ಜೊತೆಗಿದ್ದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಮಹತ್ವದ ಘೋಷಣೆ: ಎಸ್ಸಿ, ಎಸ್ಟಿ ವಿದ್ಯಾರ್ಥಿಗಳಿಗೆ ಗುಡ್ನ್ಯೂಸ್ ನೀಡಿದ ಸಿಎಂ ಸಿದ್ದರಾಮಯ್ಯ