Bengaluru Bandh: ನಗರದ ಐಕಾನಿಕ್ ಕೆ ಆರ್ ಮಾರ್ಕೆಟ್ ನಲ್ಲಿ ವ್ಯಾಪಾರಸ್ಥರಿದ್ದಾರೆ, ಆದರೆ ಕೊಳ್ಳುವವರಿಲ್ಲ!
Bengaluru Bandh: ಕೆಲ ವ್ಯಾಪಾರಿಗಳು ಎರಡೆರಡು ಬಂದ್ ಗಳಿಗೆ ಕರೆ ನೀಡಿರುವುದರಿಂದ ಗೊಂದಲದಲ್ಲಿದ್ದಾರೆ. ತರಕಾರಿ ಕೊಳ್ಳಲು ಜನ ಬರುತ್ತಿಲ್ಲ ವ್ಯಾಪಾರ ತುಂಬಾ ಡಲ್ ಆಗಿದೆ ಅಂತ ಒಬ್ಬ ವ್ಯಾಪಾರಿ ಹೇಳುತ್ತಾರೆ. ಒಂದೆರಡು ಗಂಟೆಗಳ ಬಳಿಕ ತಾವು ಸಹ ಅಂಗಡಿಗಳನ್ನು ಮುಚ್ಚಿಕೊಂಡು ಹೋಗುತ್ತೇವೆ ಅಂತ ಅವರು ಹೇಳುವ ವ್ಯಾಪಾರಸ್ಥರಿಗೆ ಬಂದ್ ಗೆ ಯಾಕೆ ಕರೆ ನೀಡಲಾಗಿದೆ ಅಂತ ಸ್ಪಷ್ಟವಾಗಿ ಗೊತ್ತಿಲ್ಲ.
ಬೆಂಗಳೂರು: ಕಾವೇರಿ ವಿವಾದ ಹಿನ್ನೆಲೆಯಲ್ಲಿ ರೈತ ಮತ್ತು ವಿವಿಧ ಸಂಘಟನೆಗಳು ನೀಡಿರುವ ಬೆಂಗಳೂರು ಬಂದ್ ಕರೆಯಿಂದಾಗಿ (Bengaluru Bandh) ಸದಾ ಗಿಜಿಗಿಡುವ ಕೆಆರ್ ಮಾರ್ಕೆಟ್ ನಲ್ಲಿ (KR Market) ವ್ಯಾಪಾರಸ್ಥರಿದ್ದಾರೆ ಅದರೆ ಗ್ರಾಹಕರು (buyers) ಬಹಳ ಕಡಿಮೆ ಸಂಖ್ಯೆಯಲ್ಲಿದ್ದಾರೆ. ಟಿವಿ9 ಕನ್ನಡ ವಾಹಿನಿಯ ಬೆಂಗಳೂರು ವರದಿಗಾರ್ತಿ ಮಾರ್ಕೆಟ್ ವ್ಯಾಪಾರಸ್ಥರೊಂದಿಗೆ ಬೆಳಗಿನ ಸಮಯದಲ್ಲಿ ಮಾತಾಡಿದ್ದಾರೆ. ತರಕಾರಿ ಅಗತ್ಯ ವಸ್ತುಗಳ ಕೆಟೆಗಿರಿಯಲ್ಲಿ ಎಣಿಕೆಯಾಗುವುದರಿಂದ ಅಂಗಡಿಗಳನ್ನು ಓಪನ್ ಮಾಡಿದ್ದಾಗಿ ಅವರು ಹೇಳುತ್ತಾರೆ. ಕೆಲವರು ಎರಡೆರಡು ಬಂದ್ ಗಳಿಗೆ ಕರೆ ನೀಡಿರುವುದರಿಂದ ಗೊಂದಲದಲ್ಲಿದ್ದಾರೆ. ತರಕಾರಿ ಕೊಳ್ಳಲು ಜನ ಬರುತ್ತಿಲ್ಲ ವ್ಯಾಪಾರ ತುಂಬಾ ಡಲ್ ಆಗಿದೆ ಅಂತ ಒಬ್ಬ ವ್ಯಾಪಾರಿ ಹೇಳುತ್ತಾರೆ. ಒಂದೆರಡು ಗಂಟೆಗಳ ಬಳಿಕ ತಾವು ಸಹ ಅಂಗಡಿಗಳನ್ನು ಮುಚ್ಚಿಕೊಂಡು ಹೋಗುತ್ತೇವೆ ಅಂತ ಅವರು ಹೇಳುವ ವ್ಯಾಪಾರಸ್ಥರಿಗೆ ಬಂದ್ ಗೆ ಯಾಕೆ ಕರೆ ನೀಡಲಾಗಿದೆ ಅಂತ ಸ್ಪಷ್ಟವಾಗಿ ಗೊತ್ತಿಲ್ಲ. ಅದೇನೋ ನೀರಿಗಾಗಿ ಅಂತ ಒಬ್ಬರು ಹೇಳಿದರೆ ಮತ್ತೊಬ್ಬರು ಅಯ್ಯೋ ಅದೆಲ್ಲ ಗೊತ್ತಿಲ್ಲ ಮೇಡಂ ಅನ್ನುತ್ತಾರೆ. ಅದೇನೇ ಇರಲಿ, ಬೆಂಗಳೂರು ಬಂದ್ ಹಿನ್ನೆಲೆಯಲ್ಲಿ ಕೆ ಆರ್ ಮಾರ್ಕೆಟ್ ನಲ್ಲಿ ವ್ಯಾಪಾರಸ್ಥರಿದ್ದಾರೆ, ಗ್ರಾಹಕರಿಲ್ಲ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ