ಚಿರತೆ ಹಿಡಿಯುವ ಕಾರ್ಯಾಚರಣೆ ಯಶ ಕಂಡಿದ್ದು ನಿಜ, ಆದರೆ ಅದನ್ನು ಜೀವಂತ ಹಿಡಿಯುವುದು ಸಾಧ್ಯವಾಗಲಿಲ್ಲ!

|

Updated on: Nov 01, 2023 | 7:13 PM

ಬನ್ನೇರುಘಟ್ಟ ಅನಿಮಲ್ ರೆಸ್ಕ್ಯೂ ಸೆಂಟರ್ ನಲ್ಲಿರುವ ಪೋಸ್ಟ್ ಮಾರ್ಟಂ ರೂಮಲ್ಲಿ ಚಿರತೆಯ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ಮೃತ ಚಿರತೆ ಇಂದು ಬೆಳಗ್ಗೆ ಕಾರ್ಯಾಚರಣೆ ತಂಡದ ಭಾಗವಾಗಿದ್ದ ಅರವಳಿಕೆ ಡಾ ಕಿರಣ್ ಹಾಗೂ ಒಬ್ಬ ಅರಣ್ಯ ಸಿಬ್ಬಂದಿಯ ಮೇಲೆ ಹಲ್ಲೆ ನಡೆಸಿತ್ತು. ಅಕ್ಟೋಬರ್ 28 ರಂದು ಬೆಳಗಿನ ಜಾವ ಈ ಚಿರತೆ ಸಿಂಗಸಂದ್ರದ ಅಪಾರ್ಟ್ಮೆಂಟ್ ಒಂದರಲ್ಲಿ ಓಡಾಡಿದ ದೃಶ್ಯ ಅಲ್ಲಿನ ಸಿಸಿಟಿವಿ ಗಳಲ್ಲಿ ಸೆರೆಯಾಗಿತ್ತು.

ಬೆಂಗಳೂರು: ಆಪರೇಶನ್ ಸಕ್ಸಸ್ ಫುಲ್ ಬಟ್ ಪೇಶೆಂಟ್ ಈಸ್ ಡೆಡ್ ಅಂತಾರಲ್ಲ? ಹಾಗಾಗಿದೆ ಆನೇಕಲ್​ನಲ್ಲಿ ನಡೆದ ಚಿರತೆ ಕಾರ್ಯಾಚರಣೆ (operation leopard)! ನಗರದ ಹೊರವಲಯ ಆನೇಕಲ್ ಬಳಿ ಕೂಡ್ಲು ಮತ್ತು ಸಿಂಗಸಂದ್ರದಲ್ಲಿರುವ (Singasandra) ಅಪಾರ್ಟ್ಮೆಂಟ್ ಗಳ ಬಳಿಯ ಅರಣ್ಯ ಮತ್ತು ಕೈಗಾರಿಕಾ ಪ್ರದೇಶದಲ್ಲಿ ಮೂರು ದಿನಗಳಿಂದ ನಡೆಯುತ್ತಿದ್ದ ಚಿರತೆ ಹಿಡಿಯುವ ಕಾರ್ಯಾಚರಣೆ ಅದರ ಮೇಲೆ ಗುಂಡು ಹಾರಿಸಿ ಸಾಯಿಸುವುದರೊಂದಿಗೆ (shot at) ಕೊನೆಗೊಂಡಿದೆ. ಟಿವಿ9 ಕನ್ನಡ ವಾಹಿನಿ ಪ್ರತಿನಿಧಿಯೊಂದಿಗೆ ಮಾತಾಡಿರುವ ಹಿರಿಯ ಅರಣ್ಯಾಧಿಕಾರಿಯೊಬ್ಬರು ಚಿರತೆ ಭಯಂಕರ ವಾಯ್ಲೆಂಟ್ ಅಗತೊಡಗಿದ್ದರಿಂದ ವಿಧಿಯಿಲ್ಲದೆ ಗುಂಡು ಹಾರಿಸಬೇಕಾಯಿತು ಎಂದು ಹೇಳಿದರು. ಗುಂಡಿಗೆ ಬಲಿಯಾಗಿರುವ ಗಂಡು ಚಿರತೆ ಸುಮಾರು 13 ವರ್ಷ ಪ್ರಾಯದ್ದು ಎಂದು ಹೇಳಲಾಗಿದೆ. ಬನ್ನೇರುಘಟ್ಟ ಅನಿಮಲ್ ರೆಸ್ಕ್ಯೂ ಸೆಂಟರ್ ನಲ್ಲಿರುವ ಪೋಸ್ಟ್ ಮಾರ್ಟಂ ರೂಮಲ್ಲಿ ಚಿರತೆಯ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ಮೃತ ಚಿರತೆ ಇಂದು ಬೆಳಗ್ಗೆ ಕಾರ್ಯಾಚರಣೆ ತಂಡದ ಭಾಗವಾಗಿದ್ದ ಅರವಳಿಕೆ ಡಾ ಕಿರಣ್ ಹಾಗೂ ಒಬ್ಬ ಅರಣ್ಯ ಸಿಬ್ಬಂದಿಯ ಮೇಲೆ ಹಲ್ಲೆ ನಡೆಸಿತ್ತು. ಅಕ್ಟೋಬರ್ 28 ರಂದು ಬೆಳಗಿನ ಜಾವ ಈ ಚಿರತೆ ಸಿಂಗಸಂದ್ರದ ಅಪಾರ್ಟ್ಮೆಂಟ್ ಒಂದರಲ್ಲಿ ಓಡಾಡಿದ ದೃಶ್ಯ ಅಲ್ಲಿನ ಸಿಸಿಟಿವಿ ಗಳಲ್ಲಿ ಸೆರೆಯಾಗಿತ್ತು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published on: Nov 01, 2023 07:13 PM