ಧ್ವಜ ಸ್ತಂಭ ತೆರವು: ಕರವೇ ಕಾರ್ಯಕರ್ತರಿಂದ ಕನ್ನಡ ರಾಜ್ಯೋತ್ಸವ ದಿನದಂದೇ ಪ್ರತಿಭಟನೆ
ಕನ್ನಡ ಧ್ವಜ ಸ್ತಂಭ ತೆರವುಗೊಳಸಿದ್ದಕ್ಕೆ ಕನ್ನಡ ಪರ ಹೋರಾಟಗಾರರು ಕೆರಳಿದ್ದು, ಕನ್ನಡ ರಾಜ್ಯೋತ್ಸವ ದಿನದಂದೇ ಕರವೇ ಕಾರ್ಯಕರ್ತರಿಂದ ಹೋರಾಟ ಮಾಡಲಾಗಿದೆ. ಜಿಲ್ಲೆಯ ಸುರಪುರ ನಗರದಲ್ಲಿ ಬೀದರ್-ಶ್ರೀರಂಗಪಟ್ಟಣ ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟನೆ ಮಾಡಿದ್ದಾರೆ.
ಯಾದಗಿರಿ, ನವೆಂಬರ್ 01: ಕನ್ನಡ ಧ್ವಜ ಸ್ತಂಭ ತೆರವುಗೊಳಸಿದ್ದಕ್ಕೆ ಕನ್ನಡ ಪರ ಹೋರಾಟಗಾರರು ಕೆರಳಿದ್ದು, ಕನ್ನಡ ರಾಜ್ಯೋತ್ಸವ (Kannada Rajyotsava) ದಿನದಂದೇ ಕರವೇ ಕಾರ್ಯಕರ್ತರಿಂದ ಹೋರಾಟ ಮಾಡಲಾಗಿದೆ. ಜಿಲ್ಲೆಯ ಸುರಪುರ ನಗರದಲ್ಲಿ ಬೀದರ್-ಶ್ರೀರಂಗಪಟ್ಟಣ ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟನೆ ಮಾಡಿದ್ದಾರೆ. ಇಂದು ಧ್ವಜಾರೋಹಣ ಮಾಡುವುದ್ದಕ್ಕೆ ಕನ್ನಡ ಪರ ಸಂಘಟನೆ ಕಾರ್ಯಕರ್ತರು ನಿನ್ನೆ ಧ್ವಜ ಸ್ತಂಭ ನಿರ್ಮಾಣ ಮಾಡಿದ್ದರು. ರಸ್ತೆ ತಡೆದು ಪ್ರತಿಭಟನೆ ಮಾಡಿದ್ದರಿಂದ ಕೆಲ ಕಾಲ ವಾಹನ ಸವಾರರ ಪರದಾಟ ಉಂಟಾಗಿತ್ತು.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.
Published on: Nov 01, 2023 09:32 PM
Latest Videos