ಒಪ್ಪೊ ರಿನೋ 7 ಸರಣಿ ಪೋನ್​ಗಳು ಭಾರತದಲ್ಲಿ ಜನೆವರಿ ತಿಂಗಳು ಬಿಡುಗಡೆ ಆಗಲಿವೆ, ಇಲ್ಲಿದೆ ಮಾಹಿತಿ

ಒಪ್ಪೊ ರಿನೋ 7 ಸರಣಿ ಪೋನ್​ಗಳು ಭಾರತದಲ್ಲಿ ಜನೆವರಿ ತಿಂಗಳು ಬಿಡುಗಡೆ ಆಗಲಿವೆ, ಇಲ್ಲಿದೆ ಮಾಹಿತಿ

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Nov 19, 2021 | 1:24 AM

ರೆನೋ 7 ಸರಣಿಯಲ್ಲಿ ರೆನೋ 7 ಎಸ್ ಇ ಫೋನ್ ಅತ್ಯಂತ ಕಡಿಮೆ ಬೆಲೆಯದ್ದು ಅಂತ ಹೇಳಲಾಗಿದ್ದು ಚೀನಾದ ಮಾರ್ಕೆಟ್ ನಲ್ಲಿ ಇದರ ಬೆಲೆ ಹೆಚ್ಚು ಕಡಿಮೆ ರೂ. 35,100 ಆಗಿರಲಿದೆ.

ವಿಶ್ವದ ಪ್ರಮುಖ ಫೋನ್ ಉತ್ಪಾದಕ ಕಂಪನಿಗಳಲ್ಲಿ ಒಂದಾಗಿರುವ ಒಪ್ಪೊ ಸದ್ದಿಲ್ಲದೆ ಮುಂದಿನ ತಲೆಮಾರಿನ ಒಪ್ಪೊ ರಿನೋ 7 ಸರಣಿಯ ಫೋನ್​ಗಳನ್ನು  ತಯಾರಿಸಿ ಮಾರ್ಕೆಟ್ಗೆ ಬಿಡುಗಡೆ ಮಾಡುವ ಪ್ರಯತ್ನದಲ್ಲಿ ಮಗ್ನವಾಗಿದೆ. ಕಂಪನಿಯ ಮಾಹಿತಿ ಸೋರಿಕೆಯಿಂದಾಗಿ ಒಂದಷ್ಟು ಅಂಶಗಳು ನಮಗೆ ಲಭ್ಯವಾಗಿವೆ. ರೆನೋ 7 ಸರಣಿಯಲ್ಲಿ ಒಪ್ಪೊ ಕಂಪನಿಯು 4 ಬಗೆಯ ಫೋನ್ಗಳನ್ನು ಬಿಡುಗಡೆ ಮಾಡುವ ಹುನ್ನಾರದಲ್ಲಿದೆ-ರೆನೋ 7, ರೆನೋ 7 ಪ್ರೋ, ರೆನೋ 7 ಪ್ರೋ ಪ್ಲಸ್ ಮತ್ತು ರೆನೋ 7 ಎಸ್ ಇ. 91 ಮೊಬೈಲ್ಸ್ ನಿಂದ ಲಭ್ಯವಾಗಿರುವ ಮಾಹಿತಿಯ ಪ್ರಕಾರ ಈ ಫೋನ್​ಗಳು ಮುಂದಿನ ವರ್ಷ ಜನೆವರಿಯಲ್ಲಿ ಭಾರತದಲ್ಲಿ ಲಾಂಚ್ ಆಗಲಿವೆ. ಆದರೆ ಚೀನಾನಲ್ಲಿ ಇದೇ ನವೆಂಬರ್ ಇಲ್ಲವೇ ಡಿಸೆಂಬರ್ ನಲ್ಲಿ ರೆನೋ 7 ಸರಣಿ ಫೋನ್ಗಳು ಲಾಂಚ್ ಆಗಲಿವೆ.

ಹಾಗಾದರೆ, ಈ ಫೋನ್​ಗಳ ಬೆಲೆ ಎಷ್ಟಿರಬಹುದೆಂಬ ಕುತೂಹಲ ಮೂಡೋದು ಸಹಜವೇ. ರೆನೋ 7 ಸರಣಿಯಲ್ಲಿ ರೆನೋ 7 ಎಸ್ ಇ ಫೋನ್ ಅತ್ಯಂತ ಕಡಿಮೆ ಬೆಲೆಯದ್ದು ಅಂತ ಹೇಳಲಾಗಿದ್ದು ಚೀನಾದ ಮಾರ್ಕೆಟ್ ನಲ್ಲಿ ಇದರ ಬೆಲೆ ಹೆಚ್ಚು ಕಡಿಮೆ ರೂ. 35,100 ಆಗಿರಲಿದೆ. ಒಪ್ಪೊ ರೆನೋ 7 ಬೆಲೆ ಸುಮಾರು ರೂ. 46,800 ಆಗಿರಬಹುದಾದ ನಿರೀಕ್ಷೆಯಿದೆ. ಈ ಸರಣಿಯಲ್ಲಿ ಒಪ್ಪೊ ರೆನೋ 7 ಪ್ರೊ ಎಲ್ಲಕ್ಕಿಂತ ದುಬಾರಿ ಆಗಲಿದ್ದು ಅದರೆ ಬೆಲೆ ರೂ. 62,000 ಗಳ ಆಸುಪಾಸಿನಲ್ಲಿರಲಿದೆ.

ಒಪ್ಪೊ ರೆನೋ 7 ಪ್ರೋ ಫೋನಿನ ವಿಶೇಷತೆಗಳನ್ನು ನೋಡುವುದಾದರೆ ಡಿಸ್ಪ್ಲೇ ಮೇಲಿನ ಎಡ ಮೂಲೆಯಲ್ಲಿ ರಂಧ್ರ-ಪಂಚ್ ಕೆಮೆರಾದೊಂದಿಗೆ ಫ್ಲಾಟ್ ಪರದೆಯನ್ನು ಹೊಂದಿದೆ ಎಂದು ವರದಿಯಾಗಿದೆ. ಡಿಸ್ಪ್ಲೇ ಪ್ಯಾನೆಲ್ 1080X2400 ರೆಸುಲ್ಯೂಶನ್ ಹೊಂದಿರುವ 6.5-ಇಂಚಿನ ಪೂರ್ಣ-ಎಚ್ಡಿ+ ಒಎಲ್ ಇಡಿ ಅಂತ ತಿಳಿದುಬಂದಿದೆ.

ಪರದೆಯ ರಿಫ್ರೆಶ್ ರೇಟ್ 90 ಹರ್ಟ್ಜ್ ಆಗಿರಬಹುದು, 120 ಹರ್ಟ್ಜ್ ರಿಫ್ರೆಶ್ ಅನ್ನು ಸೂಚಿಸುವ ಹಿಂದಿನ ಸೋರಿಕೆಗಳಿಗೆ ತದ್ಬಿರುದ್ಧವಾಗಿ ಇತ್ತೀಚಿನ ಸೋರಿಕೆಯು ಫೋನ್ ಸ್ನ್ಯಾಪ್‌ಡ್ರಾಗನ್ 778ಜಿ ಪ್ರೊಸೆಸರ್ ಅನ್ನು ಹೊಂದಿದೆ ಎಂದು ಹೇಳುತ್ತದೆ. ಹಿಂದಿನ ಲೀಕ್ಡ್ ಮಾಹಿತಿಯು ಸ್ನ್ಯಾಪ್​ಡ್ರ್ಯಾಗನ್ 888 ಇದೆ ಎಂದು ಸೂಚಿಸಿತ್ತು.

ಇದನ್ನೂ ಓದಿ:    ಬೊಂಬೆ ಹೇಳುತೈತೆ ಹಾಡಿನ ಮುಖಾಂತರ ಪುನೀತ್​ಗೆ ನಮನ ಸಲ್ಲಿಸಿದ 50ಕ್ಕೂ ಹೆಚ್ಚು ಪುಟಾಣಿಗಳು; ವಿಡಿಯೋ ನೋಡಿ