ಧ್ವನಿವರ್ಧಕಗಳ ಮೂಲಕ ಅಜಾನ್ ಕೂಗುವುದನ್ನು ವಿರೋಧಿಸಿ ಹಿಂದೂ ಕಾರ್ಯಕರ್ತರು ದೇವಸ್ಥಾನದಲ್ಲಿ ಭಜನೆ ನುಡಿಸಿದರು
ಅವರು ಸುಪ್ರೀಮ್ ಕೋರ್ಟ್ ಆದೇಶವನ್ನು ಉಲ್ಲಂಘಿಸುತ್ತಿದ್ದಾರೆ. ಅವುಗಳನ್ನು ಕೂಡಲೇ ಕೆಳಗಿಳಿಸಬೇಕು ಮತ್ತು ಅವರು ಇಷ್ಟು ದಿನಗಳವರೆಗೆ ಅವರಿಂದು ನ್ಯಾಯಾಂಗ ನಿಂದನೆ ಆಗಿರುವುದಕ್ಕೆ ಕ್ರಮ ಜರುಗಿಸಬೇಕು ಎಂದು ಕಾರ್ಯಕರ್ತರು ಹೇಳುತ್ತಾರೆ.
ಬೆಂಗಳೂರು: ಮಸೀದಿಗಳ ಮೇಲೆ ಧ್ವನಿವರ್ಧಕಗಳನ್ನು (loudspeakers) ಕಟ್ಟಿ ಅಜಾನ್ ನೀಡುತ್ತಿರುವುದನ್ನು ಹಿಂದೂ ಸಂಘಟನೆಗಳು (Hindu organisations) ಪ್ರತಿಭಟನೆ ನಡೆಸುತ್ತಿರುವುದು ಮುಂದುವರಿದಿದೆ. ಬೆಂಗಳೂರಿನ ಚುಂಚಘಟ್ಟನಲ್ಲಿರುವ ವೀರಾಂಜನೇಯ ದೇವಸ್ಥಾನದ (Veeranjaneya temple) ಮುಂದೆ ಹಿಂದೂ ಕಾರ್ಯಕರ್ತರು ದೇವಾಲಯದಲ್ಲಿ ಲೌಡ್ ಸ್ಪೀಕರ್ ಗಳನ್ನು ಹಾಕಿ ಭಜನೆಗಳನ್ನು ನುಡಿಸಿದರು. ಅವರ ವಾದ ಸರಳವಾಗಿದೆ. ಸುಪ್ರೀಮ್ ಕೋರ್ಟ್ ಆದೇಶದ ಹೊರತಾಗಿಯೂ ಮುಸಲ್ಮಾನರು ಮಸೀದಿಗಳ ಮೇಲೆ ಧ್ವನಿವರ್ಧಕಗಳನ್ನು ಕಟ್ಟಿ ಅಜಾನ್ ಕೂಗುವುದನ್ನು ನಿಲ್ಲಿಸಿಲ್ಲ ಎಂದು ಅವರು ವಾದ ಮಾಡುತ್ತಾರೆ. ಹಾಗಾಗೇ, ಅವರು ದೇವಸ್ಥಾನದಲ್ಲಿ ಆಂಪ್ಲಿಪೈರ್ಗಳನ್ನು ಕಟ್ಟಿದ್ದಾರೆ.
ವಿಡಿಯೋನಲ್ಲಿ ಕಾಣುತ್ತಿರುವ ಕಾಯಕರ್ತರು ಹೇಳುವ ಪ್ರಕಾರ ಪೊಲೀಸರು ಸ್ಥಳಕ್ಕೆ ಬಂದು ಸ್ಪೀಕರ್ ಗಳನ್ನು ಬಿಚ್ಚಿಸಿದ್ದಾರೆ. ಧ್ವನಿವರ್ಧಕಗಳನ್ನು ಕಟ್ಟುವುದಕ್ಕೆ ಕಾನೂನನಲ್ಲಿ ಅವಕಾಶವಿಲ್ಲ ಅಂತ ಪೊಲೀಸರು ಹೇಳಿದ ಕಾರಣ, ಕಾನೂನನ್ನು ಗೌರವಿಸಿ ನಾವು ಹಾರ್ನ್ಗಳನ್ನು ಬಿಚ್ಚಿದ್ದೇವೆ ಅಂತ ಕಾರ್ಯಕರ್ತರು ಹೇಳುತ್ತಾರೆ.
ಹಾಗೇನೇ, ಕಾರ್ಯಕರ್ತರು ಪೊಲೀಸರ ಕ್ರಮ ಮತ್ತು ಇಬ್ಬಗೆ ನೀತಿಯನ್ನು ಪ್ರಶ್ನಿಸಿದ್ದಾರೆ. ನಾವು ಕಟ್ಟಿದ ಧ್ವನಿವರ್ಧಕಗಳನ್ನು ಇಳಿಸಿದ ಹಾಗೆ ಅವರು ಮಸೀದಿಗಳ ಮೇಲೆ ಕಟ್ಟಿರುವ ಧ್ವನಿವರ್ಧಕಗಳನ್ನು ಯಾಕೆ ಬಿಚ್ಟಿಸುತ್ತಿಲ್ಲ? ಅವರು ಸುಪ್ರೀಮ್ ಕೋರ್ಟ್ ಆದೇಶವನ್ನು ಉಲ್ಲಂಘಿಸುತ್ತಿದ್ದಾರೆ. ಅವುಗಳನ್ನು ಕೂಡಲೇ ಕೆಳಗಿಳಿಸಬೇಕು ಮತ್ತು ಅವರು ಇಷ್ಟು ದಿನಗಳವರೆಗೆ ಅವರಿಂದು ನ್ಯಾಯಾಂಗ ನಿಂದನೆ ಆಗಿರುವುದಕ್ಕೆ ಕ್ರಮ ಜರುಗಿಸಬೇಕು ಎಂದು ಕಾರ್ಯಕರ್ತರು ಹೇಳುತ್ತಾರೆ.
ದೇವಸ್ಥಾನಗಳಲ್ಲಿ ಧ್ವನಿವರ್ಧಕಗಳನ್ನು ಬಳಸುವುದಕ್ಕೆ ಮುಜರಾಯಿ ಇಲಾಖೆಯಿಂದ ಅನುಮತಿ ಪಡೆದರೆ ಪೊಲೀಸರು ಮಧ್ಯೆ ಪ್ರವೇಶಿಸುವ ಹಾಗಿಲ್ಲ ಎನ್ನುವುದನ್ನು ಕಾರ್ಯಕರ್ತರೇ ಹೇಳುತ್ತಾರೆ. ಹಾಗಾಗಿ, ಇಲಾಖೆ ಆದೇಶದ ಪ್ರತಿ ಕೈಯಲ್ಲಿ ಹಿಡಿದು ಪುನಃ ಧ್ವನಿವರ್ಧಕಗಳನ್ನು ಕಟ್ಟುತ್ತೇವೆ ಎಂದು ಹೇಳುವ ಕಾರ್ಯಕರ್ತರು ನಾವು ಯಾರ ವಿರೋಧಿಗಳೂ ಅಲ್ಲ, ಸಂವಿಧಾನ ನಮಗೆ ನೀಡಿರುವ ನಮ್ಮ ಹಕ್ಕನ್ನು ಬಳಸುತ್ತಿದ್ದೇವೆ ಎನ್ನುತ್ತಾರೆ.
ಇದನ್ನೂ ಓದಿ: ಅಜಾನ್ ನಿರ್ಬಂಧಿಸಲು ಏಪ್ರಿಲ್ 13ರವರೆಗೆ ಕರ್ನಾಟಕ ಸರ್ಕಾರಕ್ಕೆ ಡೆಡ್ಲೈನ್ ನೀಡಿದ ಪ್ರಮೋದ್ ಮುತಾಲಿಕ್