VIDEO: ಒಂದೇ ಓವರ್ನಲ್ಲಿ 35 ರನ್: ಬುಮ್ರಾ ವಿಶ್ವ ದಾಖಲೆ
ಟೆಸ್ಟ್ ಇತಿಹಾಸದಲ್ಲೇ ಒಂದೇ ಓವರ್ನಲ್ಲಿ ಅತ್ಯಧಿಕ ರನ್ ಕಲೆಹಾಕಿದ ದಾಖಲೆ ಜಸ್ಪ್ರೀತ್ ಬುಮ್ರಾ ಪಾಲಾಯಿತು. ಇದಕ್ಕೂ ಮುನ್ನ ಈ ದಾಖಲೆ ವೆಸ್ಟ್ ಇಂಡೀಸ್ ಲೆಜೆಂಡ್ ಬ್ರಿಯಾನ್ ಲಾರಾ ಹೆಸರಿನಲ್ಲಿತ್ತು. 2003 ರಲ್ಲಿ ಸೌತ್ ಆಫ್ರಿಕಾ ರಾಬಿನ್ ಪೀಟರ್ಸನ್ ಓವರ್ನಲ್ಲಿ ಲಾರಾ 28 ರನ್ ಬಾರಿಸಿ ದಾಖಲೆ ನಿರ್ಮಿಸಿದ್ದರು. ಈ ದಾಖಲೆಯನ್ನು ಮೂರು ವರ್ಷಗಳ ಹಿಂದೆ ಜಸ್ಪ್ರೀತ್ ಬುಮ್ರಾ ಮುರಿದಿದ್ದಾರೆ.
ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಒಂದೇ ಓವರ್ನಲ್ಲಿ ಅತ್ಯಧಿಕ ರನ್ ಕಲೆಹಾಕಿದ ವಿಶ್ವ ದಾಖಲೆ ಟೀಮ್ ಇಂಡಿಯಾದ ಜಸ್ಪ್ರೀತ್ ಬುಮ್ರಾ ಹೆಸರಿನಲ್ಲಿದೆ. ಈ ವಿಶ್ವ ದಾಖಲೆಗೆ ಇಂದು 3 ವರ್ಷ. ಜುಲೈ 02, 2022 ರಲ್ಲಿ ಬರ್ಮಿಂಗ್ಹ್ಯಾಮ್ನ ಎಡ್ಜ್ಬಾಸ್ಟನ್ನಲ್ಲಿ ನಡೆದ ಭಾರತ ಮತ್ತು ಇಂಗ್ಲೆಂಡ್ ನಡುವಣ 5ನೇ ಟೆಸ್ಟ್ ಪಂದ್ಯದಲ್ಲಿ ಸ್ಟುವರ್ಟ್ ಬ್ರಾಡ್ ಒಂದೇ ಓವರ್ನಲ್ಲಿ ಬರೋಬ್ಬರಿ 35 ರನ್ ನೀಡಿದ್ದರು.
ಬ್ರಾಡ್ ಎಸೆದ ಈ ಓವರ್ನ ಮೊದಲ ಎಸೆತದಲ್ಲಿ ಬುಮ್ರಾ ಫೋರ್ ಬಾರಿಸಿದ್ದರು. ದ್ವಿತೀಯ ಎಸೆತವು ವೈಡ್ ಆಗಿ ಬೌಂಡರಿ ಲೈನ್ ದಾಟಿತು. ಮೂರನೇ ಎಸೆತ ನೋಬಾಲ್, ಈ ಎಸೆತದಲ್ಲಿ ಬುಮ್ರಾ ಸಿಕ್ಸ್ ಸಿಡಿಸಿದ್ದರು. ಇನ್ನು ಮರು ಎಸೆತದಲ್ಲಿ ಮತ್ತೊಂದು ಫೋರ್ ಬಾರಿಸಿದರು. ಮೂರನೇ ಎಸೆತದಲ್ಲಿ ಬುಮ್ರಾ ಬ್ಯಾಟ್ನಿಂದ ಇನ್ನೊಂದು ಫೋರ್ ಮೂಡಿಬಂತು. ನಾಲ್ಕನೇ ಎಸೆತದಲ್ಲಿ ಫೋರ್ ಹಾಗೂ ಐದನೇ ಎಸೆತದಲ್ಲಿ ಸಿಕ್ಸ್ ಸಿಡಿಸಿದರು. ಕೊನೆಯ ಎಸೆತದಲ್ಲಿ ಒಂದು ರನ್ ಕಲೆಹಾಕಿದರು.
ಈ ಮೂಲಕ ಜಸ್ಪ್ರೀತ್ ಬುಮ್ರಾ ಒಂದೇ ಓವರ್ನಲ್ಲಿ 29 ರನ್ ಚಚ್ಚಿದ್ದರು. ಇದರೊಂದಿಗೆ ಟೆಸ್ಟ್ ಇತಿಹಾಸದಲ್ಲೇ ಒಂದೇ ಓವರ್ನಲ್ಲಿ ಅತ್ಯಧಿಕ ರನ್ ಕಲೆಹಾಕಿದ ದಾಖಲೆ ಜಸ್ಪ್ರೀತ್ ಬುಮ್ರಾ ಪಾಲಾಯಿತು. ಇದಕ್ಕೂ ಮುನ್ನ ಈ ದಾಖಲೆ ವೆಸ್ಟ್ ಇಂಡೀಸ್ ಲೆಜೆಂಡ್ ಬ್ರಿಯಾನ್ ಲಾರಾ ಹೆಸರಿನಲ್ಲಿತ್ತು. 2003 ರಲ್ಲಿ ಸೌತ್ ಆಫ್ರಿಕಾ ರಾಬಿನ್ ಪೀಟರ್ಸನ್ ಓವರ್ನಲ್ಲಿ ಲಾರಾ 28 ರನ್ ಬಾರಿಸಿ ದಾಖಲೆ ನಿರ್ಮಿಸಿದ್ದರು. ಈ ದಾಖಲೆಯನ್ನು ಮೂರು ವರ್ಷಗಳ ಹಿಂದೆ ಜಸ್ಪ್ರೀತ್ ಬುಮ್ರಾ ಮುರಿದಿದ್ದಾರೆ.
ಇನ್ನು ಈ ಓವರ್ನಲ್ಲಿ ಒಟ್ಟು 35 ರನ್ ನೀಡುವ ಮೂಲಕ ಸ್ಟುವರ್ಟ್ ಬ್ರಾಡ್ ಟೆಸ್ಟ್ ಇತಿಹಾಸದಲ್ಲೇ ಅತ್ಯಂತ ದುಬಾರಿ ಓವರ್ ಎಸೆದ ಕಳಪೆ ದಾಖಲೆಯೊಂದನ್ನು ಕೂಡ ತನ್ನದಾಗಿಸಿಕೊಂಡರು. ಅಂದರೆ ಈ ಓವರ್ನಲ್ಲಿ ಬುಮ್ರಾ 29 ರನ್ ಕಲೆಹಾಕಿದರೆ, ಬ್ರಾಡ್ ವೈಡ್+ಫೋರ್ ಹಾಗೂ ನೋಬಾಲ್ನೊಂದಿಗೆ ಹೆಚ್ಚುವರಿ 6 ರನ್ಗಳನ್ನು ನೀಡಿದ್ದರು. ಈ ಮೂಲಕ ಒಂದೇ ಓವರ್ನಲ್ಲಿ 35 ರನ್ ಬಿಟ್ಟುಕೊಟ್ಟಿದ್ದರು.