ಅಮ್ಮ ಬೇರೆ, ಮಗ ಬೇರೆ, ಅವನ ಅನಿಸಿಕೆ ನನಗೆ ಬೇಕಿಲ್ಲ: ಖಡಕ್ ಆಗಿ ಹೇಳಿದ ಯಶ್ ತಾಯಿ ಪುಷ್ಪ
ಯಶ್ ತಾಯಿ ಪುಷ್ಪ ಅರುಣ್ಕುಮಾರ್ ಅವರು ‘ಕೊತ್ತಲವಾಡಿ’ ಚಿತ್ರವನ್ನು ನಿರ್ಮಾಣ ಮಾಡಿದ್ದು, ಅದರ ಪ್ರಚಾರಕ್ಕೆ ಚಾಲನೆ ನೀಡಿದ್ದಾರೆ. ಈ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಯಶ್ಗೆ ಸಿನಿಮಾ ತೋರಿಸಿ ಅನಿಸಿಕೆ ಪಡೆಯುತ್ತೀರಾ ಎಂಬ ಪ್ರಶ್ನೆಗೆ ಪುಷ್ಪ ಅವರು ಖಡಕ್ ಆಗಿ ಪ್ರತಿಕ್ರಿಯೆ ನೀಡಿದ್ದಾರೆ. ಆ ಸಂದರ್ಭದ ವಿಡಿಯೋ ಇಲ್ಲಿದೆ ನೋಡಿ.
ಯಶ್ (Yash) ತಾಯಿ ಪುಷ್ಪ ಅವರು ‘ಕೊತ್ತಲವಾಡಿ’ (Kothalavadi) ಸಿನಿಮಾ ನಿರ್ಮಾಣ ಮಾಡಿದ್ದು, ಪ್ರಚಾರ ಕಾರ್ಯಕ್ಕೆ ಚಾಲನೆ ನೀಡಿದ್ದಾರೆ. ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ. ಯಶ್ಗೆ ಸಿನಿಮಾ ತೋರಿಸಿ ಅಭಿಪ್ರಾಯ ಪಡೆಯುತ್ತೀರಾ ಎಂದು ಕೇಳಿದ್ದಕ್ಕೆ ಪುಷ್ಪ ಅವರು ಖಡಕ್ ಆಗಿ ಪ್ರತಿಕ್ರಿಯಿಸಿದ್ದಾರೆ. ‘ಯಶ್, ರಾಧಿಕಾ ಯಾರಿಗೂ ನಾನು ಸಿನಿಮಾ ತೋರಿಸಲ್ಲ. ಮಗ ಬೇರೆ, ಅಮ್ಮ ಬೇರೆ. ಮಗ ಎಂದಮಾತ್ರಕ್ಕೆ ನನ್ನ ಮಾತು ಕೇಳಬೇಕು ಅಂತ ಏನೂ ಇಲ್ಲ. ಅವನು ನನ್ನ ಸಿನಿಮಾ ನೋಡುತ್ತಾನೆ ಅಂತ ನಾನು ನಿರೀಕ್ಷಿಸಲ್ಲ. ಯಶ್ ನೋಡಿದ ತಕ್ಷಣ ಸಿನಿಮಾ ಓಡುತ್ತಾ? ನನ್ನ ದುಡ್ಡು ವಾಪಸ್ ಬರುತ್ತಾ? ಪ್ರೇಕ್ಷಕರು ನೋಡಬೇಕು. ಮಗನ ಅಭಿಪ್ರಾಯ ನನಗೆ ಬೇಕಿಲ್ಲ. ಜನರ ಅಭಿಪ್ರಾಯ ಬೇಕು’ ಎಂದು ಪುಷ್ಪ (Pushpa Arunkumar) ಅವರು ಹೇಳಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.