ನಂದಿ ಗಿರಿಧಾಮದಲ್ಲಿ ಇಂದು ಸಚಿವ ಸಂಪುಟ ಸಭೆ, ನಂದೀಶ್ವರ ದೇವಸ್ಥಾನದ ಬಳಿ ಮಾಧ್ಯಮಗಳೂ ಹೋಗುವಂತಿಲ್ಲ
ಪೊಲೀಸ್ ವರಿಷ್ಠಾಧಿಕಾರಿ ಕುಶಾಲ್ ಚೌಕ್ಸೀ ಹೇಳುವ ಪ್ರಕಾರ ಸಂಪುಟ ಸಭೆಯ ಕಾರಣ, ನಂದಿ ಬೆಟ್ಟಕ್ಕೆ ಪ್ರವಾಸಿಗರ ಪ್ರವೇಶವನ್ನು ನಿರ್ಬಂಧಿಸಲಾಗಿದೆ, ಅವರೂ ಸೇರಿದಂತೆ ಮತ್ತೊಬ್ಬ ಎಸ್ ಪಿ, ಮೂವರು ಹೆಚ್ಚುವರಿ ಎಸ್ಪಿ ಮತ್ತು 1,200 ಪೊಲೀಸ್ ಸಿಬ್ಬಂದಿಯನ್ನು ಭದ್ರತೆಗಾಗಿ ನಿಯೋಜಿಸಲಾಗಿದೆ, ಕೆಎಸ್ಆರ್ಪಿ ತುಕುಡಿಗಳ ಸೇವೆಯನ್ನೂ ಪಡೆದುಕೊಳ್ಳಲಾಗುತ್ತಿದೆ.
ಚಿಕ್ಕಬಳ್ಳಾಪುರ, ಜುಲೈ 2: ಇವತ್ತು ಚಿಕ್ಕಬಳ್ಳಾಪುರ ತಾಲೂಕಿನ ನಂದಿ ಗಿರಿಧಾಮದಲ್ಲಿ (Nandi Hills) ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಸಂಪುಟ ಸಭೆ ನಡೆಯಲಿದ್ದು ಅದಕ್ಕೂ ಮೊದಲು ಗಣ್ಯರು ಬೆಟ್ಟದ ಕೆಳಭಾಗದಲ್ಲಿರುವ ಶ್ರೀ ಭೋಗ ನಂದೀಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ದರ್ಶನ ಮಾಡಿಕೊಳ್ಳಲಿದ್ದಾರೆ. ನಮ್ಮ ಚಿಕ್ಕಬಳ್ಳಾಪುರ ವರದಿಗಾರ ನೀಡುವ ಮಾಹಿತಿಯ ಪ್ರಕಾರ ದೇವಸ್ಥಾನದ ಹತ್ತಿರ ಮಾಧ್ಯಮದವರೂ ಸೇರಿದಂತೆ ಯಾರನ್ನೂ ಬಿಡುತ್ತಿಲ್ಲ. ದೇವಸ್ಥಾನ ಪುರಾತತ್ವ ಇಲಾಖೆ ವ್ಯಾಪ್ತಿಗೆ ಒಳಪಟ್ಟಿರುವುದರಿಂದ ಅವರ ಅನುಮತಿ ಪಡೆಯಬೇಕು, ಮತ್ತು ಸ್ಥಳದ ಅಭಾವ ಕಾರಣ ಕ್ರೌಡ್ ಹೆಚ್ಚುವುದನ್ನು ತಪ್ಪಿಸಲು ಯಾರನ್ನೂ ದೇವಸ್ಥಾನದ ಬಳಿ ಬರಲು ಬಿಡುತ್ತಿಲ್ಲ ಎಂದು ಚಿಕ್ಕಬಳ್ಳಾಪುರ ಎಸ್ಪಿ ಕುಶಾಲ್ ಚೌಕ್ಸೀ ಹೇಳಿದರು.
ಇದನ್ನೂ ಓದಿ: ಉದ್ದೇಶಪೂರ್ವಕವಾಗಿ ಸಿದ್ದರಾಮಯ್ಯ ಮತ್ತು ನನ್ನ ಸಂಬಂಧ ಹಾಳುಮಾಡುವ ಪ್ರಯತ್ನ ನಡೆದಿದೆ: ಬಿಅರ್ ಪಾಟೀಲ್
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ