AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Video: ತಾನು ರಕ್ಷಿಸಿದ ನಾಯಿಯಿಂದಲೇ ಪ್ರಾಣಬಿಟ್ಟ ಕಬಡ್ಡಿ ಆಟಗಾರ ಬ್ರಿಜೇಶ್

Video: ತಾನು ರಕ್ಷಿಸಿದ ನಾಯಿಯಿಂದಲೇ ಪ್ರಾಣಬಿಟ್ಟ ಕಬಡ್ಡಿ ಆಟಗಾರ ಬ್ರಿಜೇಶ್

ನಯನಾ ರಾಜೀವ್
|

Updated on: Jul 02, 2025 | 12:12 PM

Share

ತಾನು ರಕ್ಷಿಸಿದ ನಾಯಿಯಿಂದಲೇ ಕಬಡ್ಡಿ ಆಟಗಾರರೊಬ್ಬರು ಸಾವನ್ನಪ್ಪಿರುವ ಘಟನೆ ಉತ್ತರ ಪ್ರದೇಶದ ಬುಲಂದ್​ಶಹರ್​​ನಲ್ಲಿ ನಡೆದಿದೆ. ನಾಯಿ ಕಡಿತದಿಂದ ರಾಜ್ಯ ಮಟ್ಟದ ಕಬಡ್ಡಿ ಆಟಗಾರ ಬ್ರಿಜೇಶ್ ಸೋಲಂಕಿ ಸಾವನ್ನಪ್ಪಿದ್ದಾರೆ.ಬ್ರಿಜೇಶ್ ಬೀದಿ ನಾಯಿಯೊಂದನ್ನು ರಕ್ಷಿಸಿದ್ದರು. ಆ ನಾಯಿ ಅವರಿಗೆ ಕಚ್ಚಿತ್ತು. ಆದರೆ ಅದರ ಬಗ್ಗೆ ಅಷ್ಟಾಗಿ ತಲೆ ಕೆಡಿಸಿಕೊಂಡಿರಲಿಲ್ಲ. ಆದರೆ ರೇಬಿಸ್ ರೋಗಕ್ಕೆ ತುತ್ತಾಗಿ ಪ್ರಾಣಬಿಟ್ಟಿದ್ದಾರೆ.

ಬುಲಂದ್​ಶಹರ್, ಜುಲೈ 02: ತಾನು ರಕ್ಷಿಸಿದ ನಾಯಿಯಿಂದಲೇ ಕಬಡ್ಡಿ ಆಟಗಾರರೊಬ್ಬರು ಸಾವನ್ನಪ್ಪಿರುವ ಘಟನೆ ಉತ್ತರ ಪ್ರದೇಶದ ಬುಲಂದ್​ಶಹರ್​​ನಲ್ಲಿ ನಡೆದಿದೆ. ನಾಯಿ ಕಡಿತದಿಂದ ರಾಜ್ಯ ಮಟ್ಟದ ಕಬಡ್ಡಿ ಆಟಗಾರ ಬ್ರಿಜೇಶ್ ಸೋಲಂಕಿ ಸಾವನ್ನಪ್ಪಿದ್ದಾರೆ.ಬ್ರಿಜೇಶ್ ಬೀದಿ ನಾಯಿಯೊಂದನ್ನು ರಕ್ಷಿಸಿದ್ದರು. ಆ ನಾಯಿ ಅವರಿಗೆ ಕಚ್ಚಿತ್ತು. ಆದರೆ ಅದರ ಬಗ್ಗೆ ಅಷ್ಟಾಗಿ ತಲೆ ಕೆಡಿಸಿಕೊಂಡಿರಲಿಲ್ಲ. ಆದರೆ ರೇಬಿಸ್ ರೋಗಕ್ಕೆ ತುತ್ತಾಗಿ ಪ್ರಾಣಬಿಟ್ಟಿದ್ದಾರೆ.

ಅವರ ಕೊನೆಯ ಕ್ಷಣದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ರೇಬಿಸ್​ ರೋಗಕ್ಕೆ ತುತ್ತಾಗಿ ಹಾಸಿಗೆಯ ಮೇಲೆ ಮಲಗಿ ನೋವಿನಿಂದ ಒದ್ದಾಡುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು.ಮಾರ್ಚ್​​ನಲ್ಲಿ ನಾಯಿಯೊಂದು ಚರಂಡಿಗೆ ಬಿದ್ದಿತ್ತು. ಅದನ್ನು ರಕ್ಷಿಸುವ ಸಮಯದಲ್ಲಿ ಬಲಗೈಗೆ ಕಚ್ಚಿತ್ತು. ಅದನ್ನು ಸಣ್ಣ ಗಾಯವೆಂದು ಭಾವಿಸಿ, ನಿರ್ಲಕ್ಷಿಸಿದ್ದರು. ರೇಬಿಸ್ ಲಸಿಕೆಯನ್ನೂ ಪಡೆದಿರಲಿಲ್ಲ. ಕೊನೆಗೆ ಪ್ರಾಣಕ್ಕೆ ಮುಳುವಾಗಿದೆ.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Follow Us
Nayana Rajeev
Nayana Rajeev

ನಯನಾ ರಾಜೀವ್- ಮೂಲತಃ ಸಾಗರದ ಬಾಳೆಗೆರೆಯವಳು, ಹಿಂದಿಯಲ್ಲಿ ಎಂ.ಎ ಮಾಡಿದ್ದೇನೆ, ಮಾಧ್ಯಮದಲ್ಲಿ 9 ವರ್ಷಗಳ ಅನುಭವವಿದೆ, ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದೇನೆ, ಒನ್​ ಇಂಡಿಯಾ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದೇನೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಒಂದೂವರೆ ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್, ಸಂಗೀತ

Read More