ಉದ್ದೇಶಪೂರ್ವಕವಾಗಿ ಸಿದ್ದರಾಮಯ್ಯ ಮತ್ತು ನನ್ನ ಸಂಬಂಧ ಹಾಳುಮಾಡುವ ಪ್ರಯತ್ನ ನಡೆದಿದೆ: ಬಿಅರ್ ಪಾಟೀಲ್
ಸಿದ್ದರಾಮಯ್ಯ ಒಬ್ಬ ಮಾಸ್ ಲೀಡರ್, ಅವರ ನೇತೃತ್ವದಲ್ಲಿ 7-8 ಜನ ಜೆಡಿಎಸ್ ನಾಯಕರು ಪಕ್ಷ ಬಿಟ್ಟು ಕಾಂಗ್ರೆಸ್ ಸೇರಿದಾಗ ಅವರಿಗಿರುವ ಜನಮನ್ನಣೆ ಕಂಡು ಕಾಂಗ್ರೆಸ್ ಮುಖ್ಯಮಂತ್ರಿ ಮಾಡಿತು. ಅವರನ್ನು ಮುಖ್ಯಮಂತ್ರಿ ಮಾಡುವಷ್ಟು ಸಾಮರ್ಥ್ಯ ತನಗಿಲ್ಲ ,ಯಾರೋ ಉದ್ದೇಶಪೂರ್ವಕವಾಗಿ ತನ್ನ ಹೇಳಿಕೆಗಳನ್ನು ತಿರುಚುತ್ತಿದ್ದಾರೆ ಎಂದು ಬಿಆರ್ ಪಾಟೀಲ್ ಬೆಂಗಳೂರಲ್ಲಿ ಹೇಳಿದರು.
ಬೆಂಗಳೂರು, ಜುಲೈ 2: ಕಳೆದ ಮೂರ್ನಾಲ್ಕು ವಾರಗಳಿಂದ ಸುದ್ದಿಯಲ್ಲಿರುವ ಆಳಂದ್ ಶಾಸಕ ಬಿಅರ್ ಪಾಟೀಲ್ ನಿನ್ನೆ ತಾನು ಕೆಆರ್ ಪೇಟೆಯಲ್ಲಿ ಹೇಳಿದ್ದನ್ನು ತಿರುಚಿ ವರದಿ ಮಾಡಲಾಗಿದೆ ಎಂದು ಹೇಳಿದರು. ತನ್ನನ್ನು ತೇಜೋವಧೆ ಮಾಡುವ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಜೊತೆಗಿರುವ ಸಂಬಂಧವನ್ನು ಹಾಳು ಮಾಡುವ ಪ್ರಯತ್ನ ನಡೆದಿದೆ ಎಂದು ಹೇಳಿದ ಪಾಟೀಲ್, ತಾನು ಸಿಎಂ ಅವರ ಬಗ್ಗೆ ಮಾತಾಡಿದ್ದು ನಿಜ, ಲಕ್ಕಿ ಲಾಟರಿಯಲ್ಲಿ ಅವರು ಮುಖ್ಯಮಂತ್ರಿ ಆದರೆಂದು ಹೇಳಿದ್ದು ಸಹ ಸತ್ಯ, ಅದರೆ ಅವರು ತನ್ನನ್ನು ಕರೆದೊಯ್ದು ಸೋನಿಯಾ ಗಾಂಧಿವರನ್ನು ಭೇಟಿ ಮಾಡಿಸಿದ್ದು ಅಂತ ವರದಿಯಾಗಿರುವುದು ಶುದ್ಧ ಸುಳ್ಳು, ಶ್ರೀಮತಿ ಗಾಂಧಿಯವರನ್ನು ಭೇಟಿ ಮಾಡಿಸುವಂತೆ ಹಠ ಮಾಡಿದ್ದು ತಾನೇ ಎಂದರು.
ಇದನ್ನೂ ಓದಿ: ಸಚಿವ ಜಮೀರ್ ಆಡಿದ ಮಾತುಗಳಿಗೆ ಪ್ರತಿಕ್ರಿಯೆ ನೀಡಲೊಲ್ಲದ ಶಾಸಕ ಬಿಅರ್ ಪಾಟೀಲ್
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ