ಸಿದ್ದರಾಮಯ್ಯ ಲಕ್ಕಿ ಸಿಎಂ ಹೇಳಿಕೆ: ಬಿಆರ್ ಪಾಟೀಲ್ ಸ್ಪಷ್ಟನೆ ಹೀಗಿದೆ ನೋಡಿ
ವಸತಿ ಯೋಜನೆಯಲ್ಲಿ ಲಂಚದ ಆರೋಪ ಮಾಡಿ ಕಾಂಗ್ರೆಸ್ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿದ್ದ ಶಾಸಕ ಬಿಆರ್ ಪಾಟೀಲ್ ಅವರು ಸಿಎಂ ಸಿದ್ದರಾಮಯ್ಯ ಕುರಿತು ನೀಡಿದ್ದ ಹೇಳಿಕೆಯೊಂದರ ಆಡಿಯೋ ಮಂಗಳವಾರ ವೈರಲ್ ಆಗಿತ್ತು. ‘‘ಸಿದ್ದರಾಮಯ್ಯ ಲಕ್ಕಿ ಸಿಎಂ’’ ಎಂಬ ಮಾತು ಇದ್ದ ಆ ಆಡಿಯೋ ಬಗ್ಗೆ ಇದೀಗ ಬಿಆರ್ ಪಾಟೀಲ್ ಸ್ಪಷ್ಟನೆ ನೀಡಿ ವಿಡಿಯೋ ಬಿಡುಗಡೆ ಮಾಡಿದ್ದಾರೆ. ಆ ವಿಡಿಯೋ ಇಲ್ಲಿದೆ.
ಬೆಂಗಳೂರು, ಜುಲೈ 2: ಸಿದ್ದರಾಮಯ್ಯ ಲಕ್ಕಿ ಸಿಎಂ ಎಂಬ ಕಾಂಗ್ರೆಸ್ ಶಾಸಕ ಬಿಆರ್ ಪಾಟೀಲ್ ಹೇಳಿಕೆಯ ಆಡಿಯೋ ವೈರಲ್ ಆಗಿದ್ದು, ರಾಜ್ಯ ರಾಜಕೀಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಇದರ ಬೆನ್ನಲ್ಲೇ, ಆ ಹೇಳಿಕೆ ಕುರಿತು ಸ್ಪಷ್ಟನೆ ನೀಡಿ ಅವರು ವಿಡಿಯೋ ಬಿಡುಗಡೆ ಮಾಡಿದ್ದಾರೆ. ಸಿದ್ದರಾಮಯ್ಯ ಕುರಿತ ಹೇಳಿಕೆಯನ್ನು ತಿರುಚಲಾಗಿದೆ ಎಂದು ಅವರು ಹೇಳಿದ್ದು, ಸಿದ್ದರಾಮಯ್ಯರನ್ನು ಸೋನಿಯಾ ಗಾಂಧಿ ಜೊತೆ ಭೇಟಿ ಮಾಡಿಸಿದ್ದೇ ನಾನು ಎಂದು ಎಲ್ಲೂ ಹೇಳಿಲ್ಲ. ಅದು ಸಂಪೂರ್ಣ ತಪ್ಪು. ನಾವು ಜತೆಯಾಗಿ ಭೇಟಿಗೆ ಹೋಗಿದ್ದೆವು. ಈ ಸಲ ಬೇಡ ಎಂದು ಅವರು ಹೇಳಿದ್ದರು. ಆದರೆ, ನಾನು ಒತ್ತಾಯದಿಂದ ಅವರನ್ನು ಭೇಟಿಯಾಗುವಂತೆ ಮನವೊಲಿಸಿದೆ. ಸಿದ್ದರಾಮಯ್ಯ ಒಬ್ಬ ಮಾಸ್ ಲೀಡರ್ ಎಂದು ಹೇಳಿದ್ದಾರೆ. ಬಿಆರ್ ಪಾಟೀಲ್ ಸ್ಪಷ್ಟನೆಯ ವಿಡಿಯೋ ಇಲ್ಲಿದೆ.
ಇದನ್ನೂ ಓದಿ: ಸಿದ್ದರಾಮಯ್ಯ ಬಗ್ಗೆ ಇದೆಂಥಾ ಮಾತು: ಬಿಆರ್ ಪಾಟೀಲ್ ಸ್ಫೋಟಕ ಆಡಿಯೋ ವೈರಲ್