ಶಿವಕುಮಾರ್ ಆಯೋಜಿಸಿದ್ದ ಡಿನ್ನರ್ ಪಾರ್ಟಿಯಲ್ಲಿ ಪರಮೇಶ್ವರ್ ಬಿಟ್ಟು ಎಲ್ಲರೂ ಭಾಗಿಯಾಗಿದ್ದರು: ಎಂಬಿ ಪಾಟೀಲ್
ಗೃಹ ಸಚಿವ ಜಿ ಪರಮೇಶ್ವರ್ ಅವರೊಬ್ಬರನ್ನು ಹೊರತುಪಡಿಸಿ ಉಳಿದೆಲ್ಲ ಶಾಸಕರು ಮತ್ತು ಮಂತ್ರಿಗಳು ಡಿನ್ನರ್ ಪಾರ್ಟಿಯಲ್ಲಿ ಭಾಗಿಯಾಗಿದ್ದರು, ಪರಮೇಶ್ವರ್ ಅವರು ಹತ್ತಿರದ ಸಂಬಂಧಿಯೊಬ್ಬರು ಮರಣ ಹೊಂದಿದ್ದ ಕಾರಣ ಭಾಗವಹಿಸಲಾಗಲ್ಲ ಎಂದು ಮೊದಲೇ ಹೇಳಿದ್ದರು, ಔತಣಕೂಟ ಏರ್ಪಡಿಸುವುದು ಕಾಂಗ್ರೆಸ್ ಮಂತ್ರಿಗಳಿಗೆ ಹೊಸತೇನಲ್ಲ ಎಂದು ಪಾಟೀಲ್ ಹೇಳಿದರು.
ವಿಜಯಪುರ, 15 ಮಾರ್ಚ್: ಡಿಕೆ ಶಿವಕುಮಾರ್ (DK Shivakumar) ಅವರು ಕರ್ನಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾಗಿ 5 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಶಾಸಕರಿಗೆ ಔತಣಕೂಟವನ್ನೇರ್ಪಡಿಸಿದ್ದರು, ಅದಕ್ಕೆ ವಿಪರೀತ ಅರ್ಥ ಕಲ್ಲಿಸುವುದು ಬೇಡ ಎಂದು ಸಚಿವ ಎಂಬಿ ಪಾಟೀಲ್ ಹೇಳಿದರು. ಕೂಟದಲ್ಲಿ ಸತೀಶ್ ಜಾರಿಕಿಹೊಳಿ, ಕೆಎನ್ ರಾಜಣ್ಣ, ತಾನು ಮತ್ತು ಖುದ್ದು ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡ ಭಾಗವಹಿಸಿದ್ದರು ಎಂದು ಪಾಟೀಲ್ ಹೇಳಿದರು.
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಈ ಹಿಂದಿನ ಬಿಜೆಪಿ ಸರ್ಕಾರದ ತೀರ್ಮಾನದಂತೆ ಜಿಂದಾಲ್ಗೆ ಭೂಮಿ ನೀಡಲಾಗಿದೆ: ಎಂಬಿ ಪಾಟೀಲ್ ಸ್ಪಷ್ಟನೆ