ಎಲ್ಲರಿಗೂ ಕ್ಲಬ್ ಇರಬೇಕಾದರೆ ಶಾಸಕರಿಗ್ಯಾಕೆ ಬೇಡ, ಅವರಿಗೂ ಒಂದನ್ನು ಮಾಡುತ್ತೇವೆ: ಯುಟಿ ಖಾದರ್, ಸ್ಪೀಕರ್
ಸದನದಲ್ಲಿ ಕಲಾಪ ನಡೆಯುವಾಗ ಶಾಸಕರಿಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿರುತ್ತದೆ, ಅದರೆ ಆವರು ಟೀ ಕಾಫಿಗೆ ಅಂತ ಎದ್ದು ಹೋಗುವುದರಿಂದ ಕಲಾಪದ ಸಮಯ ಹಾಳಾಗುತ್ತಿದೆ, ಹಾಗಾಗಿ ಟೀ ಕಾಫಿ ಸರಬರಾಜು ಮಾಡುವ ಬಗ್ಗೆ ಯೋಚಿಸಲಾಗುತ್ತಿದೆ ಎಂದು ಖಾದರ್ ಹೇಳಿದರು. ಟಿವಿ ಪ್ರಸರಣಕ್ಕೆ ಸಂಬಂಧಿಸಿದಂತೆ ಇದ್ದ ತಾಂತ್ರಿಕ ದೋಷಗಳನ್ನು ಸರಿಪಡಿಸಲಾಗಿದೆ ಎಂದು ಸ್ಪೀಕರ್ ಹೇಳಿದರು.
ಬೆಂಗಳೂರು, ಮಾರ್ಚ್ 6: ವಿಧಾನಮಂಡಲದ ಇಂದಿನ ಕಾರ್ಯಕಲಾಪ ಅರಂಭಿಸುವ ಮೊದಲು ಸ್ಪೀಕರ್ ಯುಟಿ ಖಾದರ್ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡುತ್ತ ಶಾಸಕರ ಕ್ಲಬ್ (MLAs Club) ಒಂದನ್ನು ಸ್ಥಾಪಿಸುವ ಅವಶ್ಯಕತೆಯ ಬಗ್ಗೆ ವಿವರಣೆ ನೀಡಿದರು. ಐಎಎಸ್ ಅಧಿಕಾರಿಗಳು ತಮ್ಮ ರಿಕ್ರಿಯೇಶನ್ಗಾಗಿ ಕ್ಲಬ್ ಮಾಡಿಕೊಂಡಿದ್ದಾರೆ, ಸರ್ಕಾರಿ ನೌಕರರು ಸಹ ತಾವು ಕೂತು ಹರಟೆ ಹೊಡೆಯಲು ಜಾಗ ಮಾಡಿಕೊಂಡಿದ್ದಾರೆ, ಹಾಗೆಯೇ ಶಾಸಕರಿಗೂ ಒಂದು ಕ್ಲಬ್ ನ ಅವಶ್ಯಕತೆಯಿದೆ, ಅದಷ್ಟು ಬೇಗ ಅದು ಅಸ್ತಿತ್ವಕ್ಕೆ ಬರಲಿದೆ ಎಂದು ಖಾದರ್ ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ರಾಷ್ಟ್ರದ ಭವಿಷ್ಯವನ್ನು ರೂಪಿಸುವಲ್ಲಿ ವಿದ್ಯಾರ್ಥಿಗಳ ಪಾತ್ರ ಬಹಳ ದೊಡ್ಡದು: ಯುಟಿ ಖಾದರ್