ದಸರಾ ಮಹೋತ್ಸವ ಉದ್ಘಟನೆಗೆ ಒಸಾಮ ಬಿನ್ ಲಾಡೆನ್​ನನ್ನೇನೂ ಆಮಂತ್ರಿಸಿಲ್ಲ: ಶರಣಬಸಪ್ಪ ದರ್ಶನಾಪುರ

Updated on: Aug 26, 2025 | 3:45 PM

ಬಾನು ಮುಷ್ತಾಕ್ ಅವರು ಕನ್ನಡ ನಾಡು ನುಡಿಯ ಸೇವೆ ಮಾಡಿಕೊಂಡು ಬಂದಿದ್ದಾರೆ, ಕನ್ನಡ ಭಾಷೆ ಮತ್ತು ಸಂಸ್ಕೃತಿಯ ಬಗ್ಗೆ ಅವರು ಯಾವತ್ತೂ ಅವಹೇಳನಕಾರಿಯಾಗಿ ಮಾತಾಡಿಲ್ಲ, ನಮ್ಮ ಸರ್ಕಾರ ದಸರಾ ಮಹೋತ್ಸವ ಉದ್ಘಾಟನೆಗೆ ಒಸಾಮಾ ಬಿನ್ ಲಾಡೆನ್ ನಂಥ ಭಯೋತ್ಪಾದಕನನ್ನೇನೂ ಆಹ್ವಾನಿಸಿಲ್ಲ, ಸುಖಾಸುಮ್ಮನೆ ವಿವಾದ ಹುಟ್ಟುಹಾಕುವುದು ಸರಿಯಲ್ಲ ಎಂದು ದರ್ಶನಾಪುರ ಹೇಳಿದರು.

ಯಾದಗಿರಿ, ಆಗಸ್ಟ್ 26: ಈ ಬಾರಿಯ ಮೈಸೂರು ದಸರಾ ಮಹೋತ್ಸವ ಉದ್ಘಾಟನೆಯನ್ನು ಸಿದ್ದರಾಮಯ್ಯ ಸರ್ಕಾರ ಅಂತಾರಾಷ್ಟ್ರೀಯ ಬೂಕರ್ ಪ್ರಶಸ್ತಿ ವಿಜೇತೆ ಬಾನು ಮುಷ್ತಾಕ್ ಅವರಿಂದ ಮಾಡಿಸಲು ತೀರ್ಮಾನ ತೆಗೆದುಕೊಂಡಿರುವ ಬಗ್ಗೆ ಪರ ವಿರೋಧ ಚರ್ಚೆಗಳು ಮುಂದುವರಿದಿವೆ. ಯಾದಗಿರಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪ ದರ್ಶನಾಪುರ (Sharanabasappa Darshanapur), ಬಾನು ಮುಷ್ತಾಕ್ ಅವರಿಂದ ಉದ್ಘಾಟನೆ ಬೇಡವೆನ್ನುತ್ತಿರುವ ಬಿಜೆಪಿ ನಾಯಕರು ಒಂದು ಪರ್ಯಾಯ ಹೆಸರನ್ನು ಸೂಚಿಸಲಿ, ಚರ್ಚೆ ಮಾಡಲು ವಿವಾದ ಹುಟ್ಟುಹಾಕಲು ಅವರಿಗೆ ಒಂದು ವಿಷಯ ಬೇಕಿತ್ತು, ವಿನಾಕಾರಣ ಈ ವಿಷಯದ ಮೇಲೆ ಚರ್ಚೆ ಮಾಡುತ್ತಿದ್ದಾರೆ ಎಂದು ಸಚಿವ ಹೇಳಿದರು.

ಇದನ್ನೂ ಓದಿ:  ಬೂಕರ್ ಪ್ರಶಸ್ತಿ ಪುರಸ್ಕೃತೆ ಬಾನು‌ ಮುಷ್ತಾಕ್‌ರಿಂದ ಮೈಸೂರು ದಸರಾ ಉದ್ಘಾಟನೆ: ಸಿಎಂ ಘೋಷಣೆ

ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ