ನಿವಾಸಿಗಳನ್ನು ರಕ್ಷಣೆ ಮಾಡಿ: ಭಾರತದ ಏಟಿಗೆ ಗೋಳೋ ಅಂತ ಅತ್ತ ಪಾಕ್ ಎಂಪಿ, ವಿಡಿಯೋ ನೋಡಿ

Updated on: May 08, 2025 | 6:10 PM

ಆಪರೇಷನ್ ಸಿಂದೂರ ಎರಡನೇ ದಿನವೂ ಮುಂದುವರೆದಿದೆ. ಲಾಹೋರ್, ರಾವಲ್ಡಿಂಡಿ ಸೇರಿದಂತೆ ಪಾಕ್​ನ ವಿವಿರಧ ನಗರಗಳಲ್ಲಿ ಭಾರತ ಡ್ರೋನ್ ದಾಳಿ ನಡೆಸಿದ್ದು, ಇದಕ್ಕೆ ಪಾಕಿಸ್ತಾನ ತತ್ತರಿಸಿ ಹೋಗಿದೆ. ಇದಕ್ಕೆ ಪೂರಕವೆಂಬಂತೆ ಸಂಸದ ತಾಹಿರ್ ಇಕ್ಬಾಲ್‌ ಎನ್ನುವರು ಪಾಕಿಸ್ತಾನ ಸಂಸತ್​ನಲ್ಲಿ ಗೋಳೋ ಅಂತ ಅತ್ತಿದ್ದಾರೆ.

ಕರಾಚಿ, (ಮೇ 08): ಕಾಶ್ಮೀರದ ಪೆಹಲ್ಗಾಮ್​ನಲ್ಲಿ ಉಗ್ರರ ದಾಳಿಗೆ ಪ್ರತೀಕಾರವಾಗಿ ಭಾರತ ಮಂಗಳವಾರ ತಡರಾತ್ರಿ ಪಾಕಿಸ್ತಾನದ ಭಯೋತ್ಪಾದಕ ನೆಲಗಳ ಮೇಲೆ ದಾಳಿ ಮಾಡಿದೆ. ಒಟ್ಟು ಒಂಭತ್ತು ಕಡೆಗಳಲ್ಲಿ ದಾಳಿ ಮಾಡಿದ್ದು ಉಗ್ರರ ಅಡುಗು ತಾಣಗಳನ್ನು ಧ್ವಂಸ ಮಾಡಿದ್ದು, ಇದೀಗ ಆಪರೇಷನ್ ಸಿಂದೂರ ಎರಡನೇ ದಿನವೂ ಮುಂದುವರೆದಿದೆ. ಲಾಹೋರ್, ರಾವಲ್ಡಿಂಡಿ ಸೇರಿದಂತೆ ಪಾಕ್​ನ ವಿವಿರಧ ನಗರಗಳಲ್ಲಿ ಭಾರತ ಡ್ರೋನ್ ದಾಳಿ ನಡೆಸಿದ್ದು, ಇದಕ್ಕೆ ಪಾಕಿಸ್ತಾನ ತತ್ತರಿಸಿ ಹೋಗಿದೆ. ಇದಕ್ಕೆ ಪೂರಕವೆಂಬಂತೆ ಸಂಸದ ತಾಹಿರ್ ಇಕ್ಬಾಲ್‌ ಎನ್ನುವರು ಪಾಕಿಸ್ತಾನ ಸಂಸತ್​ನಲ್ಲಿ ಗೋಳೋ ಅಂತ ಅತ್ತಿದ್ದಾರೆ. ಪಾಕಿಸ್ತಾನದ ಸಂಸದ ಹಾಗೂ ಪಾಕಿಸ್ತಾನ ಸೇನೆಯ ನಿವೃತ್ತ ಮೇಜರ್ ಆಗಿರುವ ತಾಹಿರ್ ಇಕ್ಬಾಲ್‌, ಇಂದು (ಮೇ 08) ಪಾಕ್ ಸಂಸತ್​ನಲ್ಲಿ ಭಾರತದ ದಾಳಿ ಬಗ್ಗೆ ಮಾತನಾಡಿದ್ದು, ಈ ವಳೇ ಪಾಕಿಸ್ತಾನದ ನಿವಾಸಿಗಳನ್ನು ರಕ್ಷಿಸುವಂತೆ ಕಣ್ಣೀರಿಟ್ಟಿದ್ದಾರೆ.