Loading video

ಚಾಮರಾಜನಗರದ ಪಾಲಾರ್ ಹಾಡಿಗೆ ವಿದ್ಯುತ್ ಸಂಪರ್ಕ, ಇದು ಟಿವಿ9 ವರದಿಯ ಪ್ರತಿಫಲ

|

Updated on: Mar 03, 2025 | 11:10 AM

ಪಾಲಾರ್ ಹಾಡಿಯ ಜನ ಕೂಲಿ ನಾಲಿ ಮಾಡಿಕೊಂಡು ಬದುಕು ನಡೆಸುತ್ತಾರೆ, ತಮ್ಮಂತೆ ಮಕ್ಕಳಾಗೋದು ಬೇಡ ಅಂತ ಅವರಿಗೆ ಶಿಕ್ಷಣ ಕೊಡಿಸುವ ಪ್ರಯತ್ನ ಮಾಡುತ್ತಿದ್ದಾರೆ, ಅದರೆ ವಿದ್ಯಾಭ್ಯಾಸ ಮಾಡುವ ಮಕ್ಕಳಿಗೆ ಸರಿಯಾದ ಬೆಳಕಿನ ವ್ಯವಸ್ಥೆ ಇಲ್ಲದ ಕಾರಣ ಓದುವುದು ಕಷ್ಟವಾಗುತಿತ್ತು. ಆದರೆ ಇನ್ನು ಮುಂದೆ ಅಂಥ ಪರಿಸ್ಥಿತಿ ಇರಲ್ಲ ಎಂದು ಹಾಡಿಯ ಮಹಿಳೆಯೊಬ್ಬರು ಹೇಳುತ್ತಾರೆ.

ಚಾಮರಾಜನಗರ, ಮಾರ್ಚ್ 03: ಉತ್ತಮ ಸಮಾಜಕ್ಕಾಗಿ ಟಿವಿ9 ಕನ್ನಡ ವಾಹಿನಿಯ ಘೋಷವಾಕ್ಯ ಮತ್ತು ಆ ನಿಟ್ಟಿನೆಡೆ ಪ್ರತಿನಿತ್ಯ ಶ್ರಮಿಸುತ್ತಿದೆ. ರಾಜ್ಯದ ಎಲ್ಲ ಗ್ರಾಮಗಳಿಗೆ, ಹಾಡಿಗಳಿಗೆ ಮೂಲಭೂತ ಸೌಲಭ್ಯಗಳನ್ನು ಸರ್ಕಾರ ಒದಗಿಸುವುದು ಉತ್ತಮ ಸಮಾಜದ ತಳಹದಿಯಾಗಿದೆ. ಚಾಮರಾಜನಗರ ಜಿಲ್ಲೆಯ ಹನೂರು ತಾಲ್ಲೂಕಿನ ಪಾಲಾರ್ (Palar) ಹಾಡಿಗೆ ವಿದ್ಯುತ್ ಸಂಪರ್ಕ ಇಲ್ಲದಿರುವ ಕುರಿತು ಟಿವಿ9 ಒಂದು ವರ್ಷದ ಹಿಂದೆ ವರದಿ ಮಾಡಿತ್ತು. ತಡವಾದರೂ ಎಚ್ಚೆತ್ತುಕೊಂಡಿರುವ ಸರ್ಕಾರ ಹಾಡಿಗೆ ವಿದ್ಯುತ್ ಸೌಕರ್ಯ ಕಲ್ಪಿಸಿದೆ, ಜನ ತಮ್ಮ ಸಂತಸ ವ್ಯಕ್ತಪಡಿಸುತ್ತ ಟಿವಿ9ಗೆ ಧನ್ಯವಾದ ತಿಳಿಸಿದ್ದಾರೆ.

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:   ರೈತರ ವಿದ್ಯುತ್ ಸಂಪರ್ಕ ಕಡಿತಗೊಳಿಸುತ್ತಿರುವ ಅಧಿಕಾರಿಗಳು! ಉಚಿತ ವಿದ್ಯುತ್ ನೀಡುವ ಸಿದ್ದರಾಮಯ್ಯ ಸರ್ಕಾರದ ವಾಗ್ದಾನ ಏನಾಯಿತು?  

Published on: Mar 03, 2025 10:59 AM