Karnataka budget 2025: ಅಧಿವೇಶನ ಆರಂಭಕ್ಕೆ ಮೊದಲು ಪ್ರತಿಭಟನೆ ನಡೆಸಿ ಸರ್ಕಾರದ ವಿರುದ್ಧ ವಿಪಕ್ಷ ಶಾಸಕರ ಘೋಷಣೆ
Karnataka budget 2025: ವಿಧಾನ ಮಂಡಲದಲ್ಲಿ ಈ ಸಲದ ಬಜೆಟ್ ಅಧಿವೇಶನ ಹೇಗಿರಲಿದೆ ಅನ್ನೋದಿಕ್ಕೆ ಸೂಚನೆಯನ್ನು ವಿರೋಧ ಪಕ್ಷದ ಶಾಸಕರು ನೀಡಿದ್ದಾರೆ. ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸುವ ಎಲ್ಲ ಪ್ರಯತ್ನಗಳನ್ನು ಅವರು ಮಾಡಲಿರುವುದು ನಿಶ್ಚಿತ. ವಿರೋಧ ಪಕ್ಷದ ನಾಯಕರಾದ ಅರ್ ಅಶೋಕ ಮತ್ತು ನಾರಾಯಣಸ್ವಾಮಿ ಚಲವಾದಿಯವರನ್ನು ಸರ್ಕಾರದ ಪ್ರತಿನಿಧಿಗಳು ಹೇಗೆ ಎದುರಿಸುತ್ತಾರೋ ಕಾದು ನೋಡಬೇಕು.
ಬೆಂಗಳೂರು: ವಿಧಾನಮಂಡಲದ ಬಜೆಟ್ ಅಧಿವೇಶನ ಇಂದು ಆರಂಭವಾಗಿದೆ. ವಿಧಾನಸಭೆಯೊಳಗೆ ಪ್ರವೇಶಿಸುವ ಮೊದಲು ಬಿಜೆಪಿ ಮತ್ತು ಜೆಡಿಎಸ್ ಶಾಸಕರು ವಿಧಾನಸಭೆಯ ಪಶ್ಚಿಮದ್ವಾರದ ಬಳಿ ಪ್ರತಿಭಟನೆ ನಡೆಸಿದರು. ಹೆಚ್ಚು ಕಡಿಮೆ ಎಲ್ಲ ಶಾಸಕರ ಕೈಗಳಲ್ಲಿ ಸರ್ಕಾರದ ವಿರುದ್ಧ ಧಿಕ್ಕಾರ ಹೇಳುವ ಪ್ಲಕಾರ್ಡ್ಗಳಿದ್ದವು. ಪ್ರಜಾಫ್ರಭುತ್ವ ವಿರೋಧಿ ಸರ್ಕಾರಕ್ಕೆ ಧಿಕ್ಕಾರ, ರಾಜ್ಯಪಾಲರ ಅಧಿಕಾರ ಹೈಕೋರ್ಟ್ ಎತ್ತಿಹಿಡಿದರೂ ಸಹಿಸದ ಕಾಂಗ್ರೆಸ್ ಸರ್ಕಾರ, ಸರ್ವಾಧಿಕಾರಿ ಸಿದ್ದರಾಮಯ್ಯಗೆ ಧಿಕ್ಕಾರ ಎಂಬ ಘೋಷಣೆಗಳನ್ನು ಶಾಸಕರು ಕೂಗಿದರು.
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: Karnataka Budget 2025: ವಿಧಾನಮಂಡಲ ಅಧಿವೇಶನ, ರಾಜ್ಯಪಾಲರ ಭಾಷಣ ಲೈವ್
Latest Videos