ಹಿಂದಿನ ಪಂಚಮಸಾಲಿ ಹೋರಾಟಗಳು ಶಾಂತಿಯುತವಾಗಿದ್ದವು, ಈಗ ದಾರಿತಪ್ಪಿಸುವ ಕೆಲಸ ನಡೆದಿದೆ: ಕಾಶಪ್ಪನವರ್

ಹಿಂದಿನ ಪಂಚಮಸಾಲಿ ಹೋರಾಟಗಳು ಶಾಂತಿಯುತವಾಗಿದ್ದವು, ಈಗ ದಾರಿತಪ್ಪಿಸುವ ಕೆಲಸ ನಡೆದಿದೆ: ಕಾಶಪ್ಪನವರ್

ಅರುಣ್​ ಕುಮಾರ್​ ಬೆಳ್ಳಿ
|

Updated on:Dec 11, 2024 | 4:16 PM

ವಿಜಯಾನಂದ್ ಕಾಶಪ್ಪನವರ್ ಮತ್ತು ಬಸನಗೌಡ ಪಾಟೀಲ್ ಯತ್ನಾಳ್ ನಡುವೆ ಹಾವು-ಮುಂಗುಸಿಯ ಸಂಬಂಧವಿದೆ. ಯತ್ನಾಳ್ ಹೆಸರು ಉಲ್ಲೇಖಿಸದೆ ಕಾಶಪ್ಪನವರ್, ನಾಯಿಕುರಿಗಳಿಗೆ ತಾನು ಉತ್ತರಿಸುವ ಅವಶ್ಯಕತೆಯಿಲ್ಲ, ತನ್ನನ್ನು ಹೆದರಿಸುವ ಪ್ರಯತ್ನ ನಡೆದಿದೆ, ಕಳೆದ 50 ವರ್ಷಗಳಿಂದ ತಮ್ಮ ಕುಟುಂಬ ರಾಜಕೀಯದಲ್ಲಿದೆ, ಇವರ ಗೊಡ್ಡು ಬೆದರಿಕೆಗಳಿಗೆ ಹೆದರಲ್ಲ ಎಂದರು.

ಬೆಳಗಾವಿ: ಪಂಚಮಸಾಲಿ ಸಮುದಾಯದ 2ಎ ಮೀಸಲಾತಿ ಹೋರಾಟದಲ್ಲಿ ಒಡಕುಂಟಾಗಿರುವುದು ಸ್ಪಷ್ಟವಾಗಿ ಕಾಣುತ್ತಿದೆ. ಶಾಸಕರು ಮತ್ತು ಪಂಚಮಸಾಲಿ ಸಮುದಾಯದ ಮುಖಂಡರೂ ಆಗಿರುವ ವಿಜಯಾನಂದ ಕಾಶಪ್ಪನವರ್ ಇಂದು ನಗರದಲ್ಲಿ ನಮ್ಮ ಪ್ರತಿನಿಧಿಯೊಂದಿಗೆ ಮಾತಾಡುತ್ತಾ ಮೊದಲಿಗೆ ನಿನ್ನೆ ಪಂಚಮಸಾಲಿ ಪ್ರತಿಭಟನೆ ಸಮಯದಲ್ಲಿ ನಡೆದ ಲಾಠಿ ಚಾರ್ಜ್ ಬಗ್ಗೆ ವಿಷಾದ ವ್ಯಕ್ತಪಡಿಸಿದರು. ಮುಂದುವರೆದು ಮಾತಾಡಿದ ಅವರು, ಹಿಂದೆ ಪಂಚಮಸಾಲಿ ಮೀಸಲಾತಿಗಾಗಿ ಹಿಂದೆ ನಡೆದ ಹೋರಾಟಗಳು ಶಾಂತಿಯುತವಾಗಿ ಸಂಪನ್ನಗೊಂಡಿದ್ದವು, ಅದರೆ ಈ ಬಾರಿ ಆಂದೋಳನದ ನೇತೃತ್ವ ವಹಿಸಿದವರು ಅಮಾಯಕರನ್ನು ಮುಂದೆ ಮಾಡಿ ಅವರು ಗಾಯಗೊಳ್ಳುವಂತೆ ಮಾಡಿದ್ದಾರೆ, ಅವರ ಚಿಕಿತ್ಸೆಯ ವೆಚ್ಚವನ್ನು ಯಾರು ಭರಿಸುತ್ತಾರೆ ಎಂದು ಪ್ರಶ್ನಿಸಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಪಂಚಮಸಾಲಿ ಹೋರಾಟಗಾರರ ಮೇಲೆ ಲಾಠಿ ಚಾರ್ಜ್ ಮಾಡಿದ್ಯಾಕೆ?​ ಸ್ಪಷ್ಟನೆ ಕೊಟ್ಟ ಡಿಸಿ, ಎಸ್ಪಿ

Published on: Dec 11, 2024 03:22 PM