ಬೆಂಗಳೂರು: ಬ್ಯಾಗ್ ರಸ್ತೆಬದಿ ಇಟ್ಟು ಶೌಚಾಲಯ ತೆರಳಿ  ಸ್ವಲ್ಪಹೊತ್ತು ಆತಂಕ ಸೃಷ್ಟಿಸಿದ ಮಹಿಳೆ!

ಅರುಣ್​ ಕುಮಾರ್​ ಬೆಳ್ಳಿ

Updated on: May 30, 2024 | 11:24 AM

ಪೊಲೀಸ್ ಒಬ್ಬರು ಬ್ಯಾಗ್ ಓಪನ್ ಮಾಡಿ ನೋಡಿದಾಗ ಒಂದಷ್ಟು ಬಟ್ಟೆ ಮತ್ತು ತಿಂಡಿ ಪದಾರ್ಥಗಳು ಪತ್ತೆಯಾಗಿವೆ. ಅಸಲಿಗೆ ಮಹಿಳೆಯೊಬ್ಬರು ತಮ್ಮ ಬ್ಯಾಗನ್ನು ಹೀಗೆ ಸರ್ಕಲ್ ನಲ್ಲಿ ಇಟ್ಟು ಶೌಚಾಲಯಕ್ಕೆ ಹೋಗಿದ್ದರಂತೆ. ಬ್ಯಾಗನ್ನು ಸ್ಟೇಶನ್ ಗೆ ತಂದಿದ್ದ ಪೋಲೀಸರು ನಂತರ ಅದನ್ನು ಮಹಿಳೆಗೆ ಹಿಂತಿರುಗಿಸಿದ್ದಾರೆ.

ಬೆಂಗಳೂರು: ರಾಮೇಶ್ವರಂ ಕೆಫೆಯಲ್ಲಿ (Rameshwaram Café) ನಡೆದ ಸ್ಫೋಟ ಪ್ರಕರಣದ ತನಿಖೆ ಇನ್ನೂ ಜಾರಿಯಲ್ಲಿರುವಾಗಲೇ ನಗರದ ಬೇರೆ ಪ್ರದೇಶದ ಜಂಕ್ಷನ್ ವೊಂದರಲ್ಲಿ ಅನಾಥ ಬ್ಯಾಗ್ ಪತ್ತೆಯಾದರೆ ಸಹಜವಾಗೇ ಆತಂಕ ಸೃಷ್ಟಿಯಾಗುತ್ತದೆ. ರಾಮಮೂರ್ತಿನಗರದ ಸರ್ಕಲ್ ನಲ್ಲಿ (Ramamurthynagar junction) ಅನಾಥ ಬ್ಯಾಗ್ (suspicious bag) ಕಂಡಾಗ ಪೊಲೀಸರು ದಿಗಿಲುಗೊಂಡಿದ್ದು ನಿಜ. ರಾಮಮೂರ್ತಿನಗರ ಪೊಲೀಸ್ ಠಾಣೆಯ ಸಿಬ್ಬಂದಿ ಬ್ಯಾಗನ್ನು ವಶಕ್ಕೆ ತೆಗೆದುಕೊಂಡು ಪರಿಶೀಲನೆ ನಡೆಸಿದಾಗ ಅದರಲ್ಲಿ ಅನುಮಾನಾಸ್ಪದ ವಸ್ತುಗಳು ಪತ್ತೆಯಾಗಿಲ್ಲ ಅನ್ನೋದು ಸಮಾಧಾನಕರ ಸಂಗತಿ. ಪೊಲೀಸ್ ಒಬ್ಬರು ಬ್ಯಾಗ್ ಓಪನ್ ಮಾಡಿ ನೋಡಿದಾಗ ಒಂದಷ್ಟು ಬಟ್ಟೆ ಮತ್ತು ತಿಂಡಿ ಪದಾರ್ಥಗಳು ಪತ್ತೆಯಾಗಿವೆ. ಅಸಲಿಗೆ ಮಹಿಳೆಯೊಬ್ಬರು ತಮ್ಮ ಬ್ಯಾಗನ್ನು ಹೀಗೆ ಸರ್ಕಲ್ ನಲ್ಲಿ ಇಟ್ಟು ಶೌಚಾಲಯಕ್ಕೆ ಹೋಗಿದ್ದರಂತೆ. ಬ್ಯಾಗನ್ನು ಸ್ಟೇಶನ್ ಗೆ ತಂದಿದ್ದ ಪೋಲೀಸರು ನಂತರ ಅದನ್ನು ಮಹಿಳೆಗೆ ಹಿಂತಿರುಗಿಸಿದ್ದಾರೆ. ಪೊಲೀಸರು ನಿರಾಳ, ಬ್ಯಾಗನ್ನು ನೋಡಿ ಅತಂಕಗೊಂಡಿದ್ದ ಜನ ಸಹ ನಿರಾಳ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಸ್ಫೋಟ ಕೇಸ್​: ಜೈಲಿನಲ್ಲಿದ್ದ ಆರೋಪಿಯನ್ನ ವಶಕ್ಕೆ ಪಡೆದ ಎನ್​ಐಎ

Follow Us
Arun Belly

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.