ರಾಮೇಶ್ವರಂ ಕೆಫೆಯಲ್ಲಿ ಬಾಂಬ್​ ಇಟ್ಟ ಶಂಕಿತ ಉಗ್ರನಿಗೆ ತೀರ್ಥಹಳ್ಳಿಯ ಲಿಂಕ್ ಇದೆ! ಪಿನ್​ ಟು ಪಿನ್ ಡೀಟೇಲ್ಸ್​ ಇಲ್ಲಿದೆ

ರಾಮೇಶ್ವರಂ ಕೆಫೆಯಲ್ಲಿ ಬಾಂಬ್​ ಇಟ್ಟ ಶಂಕಿತ ಆರೋಪಿ ತನ್ನ ಹೆಸರು ಬದಲಿಸಿಕೊಂಡು ಮುಸಾವೀರ್ ಹುಸೇನ್ ಶಬೀದ್ ಎಂದೂ ಮತ್ತು ಪ್ರಕರಣದ ಮಾಸ್ಟರ್ ಮೈಂಡ್ ಮತೀನ್ ಇಬ್ಬರೂ ತಮಿಳುನಾಡಿನಲ್ಲಿ ಇದ್ದರು. ಅಲ್ಲಿಯೇ ಪ್ಲ್ಯಾನ್ ಮಾಡಿಕೊಂಡು ಇಬ್ಬರೂ ಬೆಂಗಳೂರಿಗೆ ಬಂದು ಕೆಫೆಯಲ್ಲಿ ಬ್ಲಾಸ್ಟ್ ಮಾಡಿರುವುದನ್ನು ಎನ್ ಐಎ ಅಧಿಕಾರಿಗಳು ಪತ್ತೆಹಚ್ಚಿದ್ದಾರೆ. ಸದ್ಯ ತೀರ್ಥಹಳ್ಳಿಯಲ್ಲಿ ಚಾಲ್ತಿಯಲ್ಲಿರುವ ಐಸಿಸ್ ಉಗ್ರರ ನೆಟವರ್ಕ್ ಅನ್ನು ಎನ್ ಐಎ ಅಧಿಕಾರಿಗಳು ಜಾಲಾಡುತ್ತಿದ್ದಾರೆ.

ರಾಮೇಶ್ವರಂ ಕೆಫೆಯಲ್ಲಿ ಬಾಂಬ್​ ಇಟ್ಟ ಶಂಕಿತ ಉಗ್ರನಿಗೆ ತೀರ್ಥಹಳ್ಳಿಯ ಲಿಂಕ್ ಇದೆ! ಪಿನ್​ ಟು ಪಿನ್ ಡೀಟೇಲ್ಸ್​ ಇಲ್ಲಿದೆ
ರಾಮೇಶ್ವರಂ ಕೆಫೆಯಲ್ಲಿ ಬಾಂಬ್​ ಇಟ್ಟ ಶಂಕಿತ ಆರೋಪಿಗೆ ತೀರ್ಥಹಳ್ಳಿಯ ಲಿಂಕ್!
Follow us
Basavaraj Yaraganavi
| Updated By: ಸಾಧು ಶ್ರೀನಾಥ್​

Updated on:Mar 28, 2024 | 10:33 AM

ಶಿವಮೊಗ್ಗ ತುಂಗಾ ಟ್ರಯಲ್ ಬ್ಲಾಸ್ಟ್.. ಮಂಗಳೂರು ಕುಕ್ಕರ್ ಬ್ಲಾಸ್ಟ್ ಈಗ ಬೆಂಗಳೂರಿನಲ್ಲಿ ರಾಮೇಶ್ವರಂ ಕೆಫೆಯಲ್ಲಿ ಬ್ಲಾಸ್ಟ್ ಪ್ರಕರಣ (Rameswaram cafe bomb blast). ಈ ಮೂರು ಬ್ಲಾಸ್ಟ್ ಗಳ ನಂಟು ಮಲೆನಾಡು ಶಿವಮೊಗ್ಗಕ್ಕಿದೆ. ಈ ಎಲ್ಲ ಪ್ರಕರಣದ ಆರೋಪಿಗಳು ಮತ್ತು ಮಾಸ್ಟರ್ ಮೈಂಡ್ ಮಲೆನಾಡಿಗರು. ರಾಮೇಶ್ವರಂ ಕೆಫೆ ಬ್ಲಾಸ್ಟ್ ಟು ತೀರ್ಥಹಳ್ಳಿ ( Theerthahalli, Shivamogga) ಕುರಿತು ಒಂದು ವರದಿ ಇಲ್ಲಿದೆ.. ಕಳೆದ ವರ್ಷ ಶಿವಮೊಗ್ಗ ತುಂಗಾ ನದಿ ತೀರದಲ್ಲಿ ಮೊದಲು ಟ್ರಯಲ್ ಬ್ಲಾಸ್ಟ್ ಆಗಿತ್ತು. ಆ ಪ್ರಕರಣದ ಎ1 ಆರೋಪಿ ಶಾರೀಕ್ ಆಗಿದ್ದನು. ಮಾಜ್ ಮತ್ತು ಯಾಸೀನ್ ಇಬ್ಬರೂ ಈ ಬ್ಲಾಸ್ಟ್ ಪ್ರಕರಣದಲ್ಲಿ ಬಂಧಿತರವಾಗಿದ್ದರು. ಇದರ ಬಳಿಕ ಮಂಗಳೂರಿನಲ್ಲಿ ಕುಕ್ಕರ್ ಬ್ಲಾಸ್ಟ್ ಪ್ರಕರಣವು ನಡೆಯಿತು. ಅಲ್ಲಿ ಶಾರೀಕ್ ಸಿಕ್ಕಿಬಿದ್ದಿದ್ದನು. ಶಾರೀಕ್, ಮಾಜ್ ಇಬ್ಬರೂ ತೀರ್ಥಹಳ್ಳಿಯವರು ಮತ್ತು ಯಾಸೀನ್ ಶಿವಮೊಗ್ಗ ನಗರದ ನಿವಾಸಿ.

ಈ ನಡುವೆ ಕೆಲವು ತಿಂಗಳ ಹಿಂದೆ ಇವರಿಗೆ ಸಹಾಯ ಮಾಡುತ್ತಿದ್ದ ಅರಾಫತ್ ಅಲಿ ಬಂಧನವಾಗಿದೆ. ಈತ ಕೂಡಾ ತೀರ್ಥಹಳ್ಳಿ ಮೂಲದವನಾಗಿದ್ದಾನೆ. ಬೆಂಗಳೂರಿನಲ್ಲಿ ನಡೆದ ರಾಮೇಶ್ವರಂ ಕೆಫೆ ಬಾಂಬ್ ಬ್ಲಾಸ್ಟ್ ನ ಶಂಕಿತ ಆರೋಪಿ ಮುಸಾವೀರ್ ಹುಸೇನ್ ಶಬೀದ್ ಆಗಿದ್ದಾನೆ. ಈತನ ಜೊತೆ ಮತೀನ್ ಎಂಬ ವ್ಯಕ್ತಿಯೂ ಇದ್ದ ಎನ್ನುವುದು ಎನ್ ಐಎ (National Investigation Agency -NIA) ತನಿಖೆ ವೇಳೆ ಮಾಹಿತಿ ಸಿಕ್ಕಿದೆ. ಈ ಇಬ್ಬರೂ ಕೂಡಾ ತೀರ್ಥಹಳ್ಳಿಯವರಾಗಿದ್ದಾರೆ.

ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ನಿನ್ನೆ ಬುಧವಾರ ತೀರ್ಥಹಳ್ಳಿಯಲ್ಲಿ ಬೆಳ್ಳಂಬೆಳಗ್ಗೆ ಎನ್ ಐ ಎ ದಾಳಿ ನಡೆಸಿದೆ. ಪಟ್ಟಣದ 5ಕ್ಕೂ ಹೆಚ್ಚು ಕಡೆಗಳಲ್ಲಿ ಏಕಕಾಲಕ್ಕೆ ಎನ್ಐಎ ಟೀಂ ದಾಳಿ ನಡೆಸಿದ್ದು ತೀರ್ಥಹಳ್ಳಿಯ ಸೊಪ್ಪುಗುಡ್ಡೆ, ಇಂದಿರಾನಗರ, ಬೆಟಮಕ್ಕಿಯಲ್ಲಿ ಎನ್ಐಎ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಬೆಂಗಳೂರಿನಿಂದ 5 ಕ್ಕೂ ವಾಹನದಲ್ಲಿ ಬಂದಿರುವ 10 ಕ್ಕೂ ಹೆಚ್ಚು ಎನ್ಐಎ ಅಧಿಕಾರಿಗಳು ಸ್ಥಳೀಯ ಪೊಲೀಸರ ನೆರವಿನೊಂದಿಗೆ ದಾಳಿ ಮಾಡಿದ್ದಾರೆ.

ಕೆಲ ಶಂಕಿತರ ಮನೆಯ ಮೇಲೆ ದಾಳಿ ನಡೆಸಿ ಮಾಹಿತಿ ಕಲೆ ಹಾಕಿದ್ದಾರೆ. ತೀರ್ಥಹಳ್ಳಿ ಪಟ್ಟಣದ ಒಂದು ಮೊಬೈಲ್ ಅಂಗಡಿ ಮೇಲೆ ಕೂಡಾ ಎನ್ ಐ ಎ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಇನ್ನು ತೀರ್ಥಹಳ್ಳಿಯ ಮತೀನ್, ಮಾಜ್, ಶಾರೀಕ್, ಅರಾಫತ್ ಅಲಿ ಹಾಗೂ ಬೆಂಗಳೂರಿನ ಬ್ಲಾಸ್ಟ್ ಪ್ರಕರಣದ ಶಂಕಿತ ಆರೋಪಿ ಮುಸಾವೀರ್ ಹುಸೇನ್ ಶಬೀದ್ ಆಗಿದ್ದಾನೆ. ಈತನ ಮನೆ ಮೇಲೂ ಎನ್ ಐಎ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಹೀಗೆ ತೀರ್ಥಹಳ್ಳಿಯಲ್ಲಿ ದಾಳಿ ನಡೆಸಿದ ಎನ್ ಐಎ ಅಧಿಕಾರಿಗಳು ಮೊಬೈಲ್ ಸೇರಿದಂತೆ ಒಂದು ದಾಖಲೆಯನ್ನು ಸೀಜ್ ಮಾಡಿಕೊಂಡು ವಾಪಸ್ ತೆರಳಿದ್ದಾರೆ.

ಶಿವಮೊಗ್ಗ ಟ್ರಯಲ್ ಬ್ಲಾಸ್ಟ್ ಮತ್ತು ಮಂಗಳೂರು ಕುಕ್ಕರ್ ಬ್ಲಾಸ್ಟ್ ಮತ್ತು ಬೆಂಗಳೂರಿನ ರಾಮೇಶ್ವರಂ ಕೆಫೆ ಬ್ಲಾಸ್ಟ್ ಮೂರಕ್ಕೂ ಲಿಂಕ್ ಇದೆ. ಈ ಎಲ್ಲ ಬ್ಲಾಸ್ಟ್ ಗಳಲ್ಲಿ ಒಂದೇ ಮಾದರಿಯ ವಸ್ತುಗಳನ್ನು ಬಳಕೆ ಮಾಡಿರುವದು ಎನ್ ಐಎ ತನಿಖೆಯಿಂದ ಬೆಳಕಿಗೆ ಬಂದಿದೆ. ಈ ಎಲ್ಲ ಬ್ಲಾಸ್ಟ್ ಗಳ ಮಾಸ್ಟರ್ ಮೈಂಡ್ ಬೇರೆ ಯಾರೂ ಇಲ್ಲ ತೀರ್ಥಹಳ್ಳಿಯ ಮತೀನ್. ಈ ಮತೀನ್ ಕೆಲವು ವರ್ಷಗಳಿಂದ ಅಂಡರ್ ಗ್ರೌಂಡ್ ಆಗಿದ್ದನು.

ಕೊಯಮತ್ತೂರು ಬ್ಲಾಸ್ಟ್ ನಲ್ಲಿ ಮತೀನ್ ಪ್ರಮುಖ ಆರೋಪಿಯಾಗಿದ್ದನು. ಈಗ ಬೆಂಗಳೂರು ಬ್ಲಾಸ್ಟ್ ನಲ್ಲಿ ಶಂಕಿತ ಆರೋಪಿಗೆ ಸಾಥ್ ಮತ್ತು ಸಹಾಯ ಮಾಡಿದ್ದೇ ಮತೀನ್ ಆಗಿದ್ಧಾನೆ. ಎನ್ ಐಎ ಅಧಿಕಾರಿಗಳು ಈತನ ಮಾಹಿತಿ ಕೊಟ್ಟಿವರಿಗೆ 10 ಲಕ್ಷ ರೂಪಾಯಿ ಬಹುಮಾನ ಘೋಷಣೆ ಮಾಡಿದ್ದರು. ಈ ನಡುವೆ ಬೆಂಗಳೂರಿನಲ್ಲಿ ರಾಮೇಶ್ವರ ಕೆಫೆ ಬ್ಲಾಸ್ಟ್ ನಲ್ಲಿ ಮತೀನ್ ಪಾತ್ರ ಇರುವುದು ಕಂಡು ಬಂದಿದೆ.

ತಮಿಳುನಾಡಿನಲ್ಲಿ ಹೆಸರು ಬದಲಿಸಿ ಬಾಂಬರ್ ಮುಸಾವೀರ್ ಹುಸೇನ್ ಶಬೀದ್ ಮತ್ತು ಮಾಸ್ಟರ್ ಮೈಂಡ್ ಮತೀನ್ ಇದ್ದರು. ಅಲ್ಲಿ ಇದ್ದು ಪ್ಲ್ಯಾನ್ ಮಾಡಿಕೊಂಡು ಇಬ್ಬರು ಬೆಂಗಳೂರಿನಗೆ ಬಂದು ರಾಮೇಶ್ವರಂ ಕೆಫೆಯಲ್ಲಿ ಬ್ಲಾಸ್ಟ್ ಮಾಡಿರುವುದನ್ನು ಎನ್ ಐಎ ಅಧಿಕಾರಿಗಳು ಪತ್ತೆಹಚ್ಚಿದ್ದಾರೆ. ಸದ್ಯ ತೀರ್ಥಹಳ್ಳಿಯಲ್ಲಿ ಚಾಲ್ತಿಯಲ್ಲಿರುವ ಐಸಿಸ್ ಉಗ್ರರ ನೆಟವರ್ಕ್ ಅನ್ನು ಎನ್ ಐಎ ಅಧಿಕಾರಿಗಳು ಜಾಲಾಡುತ್ತಿದ್ದಾರೆ.

ರಾಮೇಶ್ವರ ಕೆಫೆ ಸ್ಫೋಟ ಪ್ರಕರಣದ ಬಾಂಬರ್ ಮತ್ತು ಆತನಿಗೆ ಸಹಾಯದ ಮಾಡಿದ ಮಾಸ್ಟರ್ ಮೈಂಡ್ ಇಬ್ಬರೂ ಎನ್ನುವುದು ಎನ್ ಐಎ ಅಧಿಕಾರಿಗಳಿಗೆ ತನಿಖೆಯ ವೇಳೆ ಬಹಿರಂಗವಾಗಿದೆ. ಸದ್ಯ ಎನ್ ಐಎ ಅಧಿಕಾರಿಗಳು ಈ ಮೊದಲು ನಡೆದ ಎರಡು ಬ್ಲಾಸ್ಟ್​​ ಮತ್ತು ಬೆಂಗಳೂರಿನ ಮೂರನೇ ಬ್ಲಾಸ್ಟ್ ಎಲ್ಲವೂ ಕೂಡಾ ಒಂದೇ ಮಾದರಿಯಲ್ಲಿವೆ. ಸದ್ಯ ಎನ್ ಐಎ ಅಧಿಕಾರಿಗಳು ಆರೋಪಿಯ ಪತ್ತೆಗಾಗಿ ತಮ್ಮ ಆಪರೇಶನ್ ಮುಂದುವರೆಸಿದ್ದಾರೆ.

ರಾಜ್ಯದ ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:32 am, Thu, 28 March 24

ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ