ಬೇಸರದಿಂದ ಇನ್ನೂ ಹೊರಬರಲಾಗದ ಪ್ರತಾಪ್ ಸಿಂಹ ಬಿಜೆಪಿ-ಜೆಡಿಎಸ್ ಕಾರ್ಯಕರ್ತರ ಸಭೆಯಿಂದ ಅರ್ಧದಲ್ಲೇ ಎದ್ದುಹೋದರು!

ಬೇಸರದಿಂದ ಇನ್ನೂ ಹೊರಬರಲಾಗದ ಪ್ರತಾಪ್ ಸಿಂಹ ಬಿಜೆಪಿ-ಜೆಡಿಎಸ್ ಕಾರ್ಯಕರ್ತರ ಸಭೆಯಿಂದ ಅರ್ಧದಲ್ಲೇ ಎದ್ದುಹೋದರು!

ಅರುಣ್​ ಕುಮಾರ್​ ಬೆಳ್ಳಿ
|

Updated on: Mar 28, 2024 | 10:19 AM

ಅಸಲಿ ಸಂಗತಿಯೆಂದರೆ, ಪ್ರತಾಪ್ ಅವರು ಯದುವೀರ್ ಗೋಸ್ಕರ ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಂಡಿರುವುದು ನಿಜವಾದರೂ ಅವರಲ್ಲಿರುವ ಬೇಸರ, ಅನ್ಯಮನಸ್ಕತೆ ದೂರವಾಗಿಲ್ಲ. ಪ್ರಚಾರದ ಸಭೆಗಳಲ್ಲೂ ಅವರು ತಾವು ಮಾಡಿದ ಸಾಧನೆಗಳನ್ನೇ ಹೇಳುತ್ತಾ ತಮಗೆ ಟಿಕೆಟ್ ಸಿಗದಿರುವುದಕ್ಕೆ ವಿಕ್ಟಿಮ್ ಕಾರ್ಡ್ ಪ್ಲೇ ಮಾಡುತ್ತಾ ಸಹಾನುಭೂತಿ ಗಿಟ್ಟಿಸುವ ಪ್ರಯತ್ನ ಮಾಡುತ್ತಿದ್ದಾರೆ.

ಮೈಸೂರು: ಲೋಕಸಭಾ ಚುನಾವಣೆ (Lok Sabha polls) ಕಾವು ಕ್ರಮೇಣ ಹೆಚ್ಚುತ್ತಿದೆ. ಮೈಸೂರು ಲೋಕಸಭಾ ಕ್ಷೇತ್ರದಲ್ಲಿ ಇಂದು ಬಿಜೆಪಿ ಮತ್ತು ಜೆಡಿಎಸ್ ನಾಯಕರು ಉಭಯ ಪಕ್ಷಗಳ ಕಾರ್ಯಕರ್ತರ ಸಭೆ ನಡೆಸಿದರು. ವೇದಿಕೆಯ ಮೇಲೆಲ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ (BY Vijayendra) ಮತ್ತು ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್ ಡಿ ಕುಮಾರಸ್ವಾಮಿ (HD Kumaraswamy) ಅವರ ಜೊತೆ ಮೈಸೂರು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಯದುವೀರ್ ಕೃಷ್ಣದತ್ ಒಡೆಯರ್, ಚಾಮುಂಡೇಶ್ವರಿ ಜೆಡಿಎಸ್ ಶಾಸಕ ಜಿಟಿ ದೇವೇಗೌಡ, ಬಿಜೆಪಿ ಶಾಸಕ ಎಸ್ ಎ ರಾಮದಾಸ್ ಮತ್ತು ಸ್ಥಳೀಯ ನಾಯಕರನ್ನು ನೋಡಬಹುದು. ಕಾರ್ಯಕ್ರಮದ ಅರ್ಧಭಾಗದಲ್ಲೇ ಸಂಸದ ಪ್ರತಾಪ್ ಸಿಂಹ (Pratap Simha) ಎದ್ದು ಹೋಗುವುದು ಗಮನಿಸಬೇಕಾದ ಸಂಗತಿಯಾಗಿದೆ. ಅಸಲಿ ಸಂಗತಿಯೆಂದರೆ, ಪ್ರತಾಪ್ ಅವರು ಯದುವೀರ್ ಗೋಸ್ಕರ ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಂಡಿರುವುದು ನಿಜವಾದರೂ ಅವರಲ್ಲಿರುವ ಬೇಸರ, ಅನ್ಯಮನಸ್ಕತೆ ದೂರವಾಗಿಲ್ಲ. ಪ್ರಚಾರದ ಸಭೆಗಳಲ್ಲೂ ಅವರು ತಾವು ಮಾಡಿದ ಸಾಧನೆಗಳನ್ನೇ ಹೇಳುತ್ತಾ ತಮಗೆ ಟಿಕೆಟ್ ಸಿಗದಿರುವುದಕ್ಕೆ ವಿಕ್ಟಿಮ್ ಕಾರ್ಡ್ ಪ್ಲೇ ಮಾಡುತ್ತಾ ಸಹಾನುಭೂತಿ ಗಿಟ್ಟಿಸುವ ಪ್ರಯತ್ನ ಮಾಡುತ್ತಿದ್ದಾರೆ. ಇಲ್ಲಿ ಅವರು ವಿಜಯೇಂದ್ರ ಮತ್ತು ಕುಮಾರಸ್ವಾಮಿಗೆ ಅದ್ಯಾವ ಕಾರಣ ಹೇಳಿ ಅರ್ಧದಲ್ಲೇ ಎದ್ದು ಹೋದರೋ?

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:   ಲೋಕಸಭಾ ಚುನಾವಣೆ ಸನಿಹದಲ್ಲಿ ಬಿಜೆಪಿ-ಜೆಡಿಎಸ್​ಗೆ ಆಘಾತ: ಪ್ರಮುಖ ನಾಯಕರು ಕಾಂಗ್ರೆಸ್ ಸೇರ್ಪಡೆ