‘ಕಾಲಿಗೆ ಬಿದ್ದು ಕೇಳ್ಕೋತೀನಿ’; ಅಭಿಮಾನಿಗಳ ಬಳಿ ಡಿ ಬಾಸ್ ವಿಶೇಷ ಮನವಿ

‘ಕಾಲಿಗೆ ಬಿದ್ದು ಕೇಳ್ಕೋತೀನಿ’; ಅಭಿಮಾನಿಗಳ ಬಳಿ ಡಿ ಬಾಸ್ ವಿಶೇಷ ಮನವಿ

ರಾಜೇಶ್ ದುಗ್ಗುಮನೆ
|

Updated on: Mar 28, 2024 | 8:21 AM

ಮಾರ್ಚ್ 27ರಂದು ನೀನಾಸಂ ಸತೀಶ್ ಹಾಗೂ ರಚಿತಾ ರಾಮ್ ನಟನೆಯ ‘ಮ್ಯಾಟ್ನಿ’ ಸಿನಿಮಾದ ಟ್ರೇಲರ್ ಲಾಂಚ್ ಬೆಂಗಳೂರಲ್ಲಿ ನಡೆದಿದೆ. ಇದಕ್ಕೆ ದರ್ಶನ್ ಅವರು ವಿಶೇಷ ಅತಿಥಿ ಆಗಿ ಆಗಮಿಸಿದ್ದರು. ಅವರು ವೇದಿಕೆ ಏರುತ್ತಿದ್ದಂತೆ ಫ್ಯಾನ್ಸ್ ಕಿರುಚೋಕೆ ಆರಂಭಿಸಿದರು.

ನಟ ದರ್ಶನ್ (Darshan) ಅವರಿಗೆ ಇರೋ ಅಭಿಮಾನಿ ಬಳಗ ತುಂಬಾನೇ ದೊಡ್ಡದು. ಅವರು ಯಾವುದೇ ವೇದಿಕೆ ಏರಿದರೂ ಅಭಿಮಾನಿಗಳ ಕೂಗಾಟ ಜೋರಿರುತ್ತದೆ. ಮಾರ್ಚ್ 27ರಂದು ನೀನಾಸಂ ಸತೀಶ್ ಹಾಗೂ ರಚಿತಾ ರಾಮ್ ನಟನೆಯ ‘ಮ್ಯಾಟ್ನಿ’ ಸಿನಿಮಾದ ಟ್ರೇಲರ್ ಲಾಂಚ್ ಬೆಂಗಳೂರಲ್ಲಿ ನಡೆದಿದೆ. ಇದಕ್ಕೆ ದರ್ಶನ್ ಅವರು ವಿಶೇಷ ಅತಿಥಿ ಆಗಿ ಆಗಮಿಸಿದ್ದರು. ಅವರು ವೇದಿಕೆ ಏರುತ್ತಿದ್ದಂತೆ ಫ್ಯಾನ್ಸ್ ಕಿರುಚೋಕೆ ಆರಂಭಿಸಿದರು. ಈ ವೇಳೆ ಅಭಿಮಾನಿಗಳ ಬಳಿ ವಿಶೇಷ ಮನವಿ ಮಾಡಿಕೊಂಡಿದ್ದಾರೆ. ‘ಮೊದಲು ನಾನು ಮಾತನಾಡುತ್ತೇನೆ. ಆ ಬಳಿಕ ನೀವು ಕಿರುಚಿ. ಕಾಲಿಗೆ ಬಿದ್ದು ಕೇಳ್ಕೋತಿನಿ’ ಎಂದು ಅಭಿಮಾನಿಗಳ ಬಳಿ ಅವರು ಕೋರಿದರು.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ