DK Suresh Road Show Live: ನಾಮಪತ್ರ ಸಲ್ಲಿಕೆಗೂ ಮುನ್ನ ಡಿಕೆ ಸುರೇಶ್ ಭರ್ಜರಿ ರೋಡ್ ಶೋ
ರಾಮನಗರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಬೆಂಗಳೂರು ಗ್ರಾಮಾಂತರ ಕಾಂಗ್ರೆಸ್ ಅಭ್ಯರ್ಥಿಯಾಗಿ ಡಿ.ಕೆ. ಸುರೇಶ್ ನಾಮಪತ್ರ ಸಲ್ಲಿಸಿದ್ದಾರೆ. ಡಿಕೆ ಸುರೇಶ್ ನಿನ್ನೆ ಕನಕಪುರದಲ್ಲಿನ ಮಠ ಹಾಗೂ ದೇವಾಲಯ, ಅದರಲ್ಲೂ ಮನೆಯ ಶಕ್ತಿ ದೇವತೆ ಕಬ್ಬಾಳಮ್ಮ ವಿಶೇಷ ಪೂಜೆ ಸಲ್ಲಿಸಿದ್ದರು.
ಬೆಂಗಳೂರು, ಮಾರ್ಚ್.28: ಬೆಂಗಳೂರು ಗ್ರಾಮಾಂತರ ಲೋಕಸಭಾ ರಣಕಣ ರಂಗೇರಿದೆ (Lok Sabha Election). ಕಾಂಗ್ರೆಸ್ ಏಕೈಕ ಸಂಸದ ಡಿಕೆ ಸುರೇಶ್ (DK Suresh) ಇಂದು ನಾಮಿನೇಶನ್ ಫೈಲ್ ಮಾಡಿದ್ದಾರೆ. ನಿನ್ನೆ ಕನಕಪುರದಲ್ಲಿನ ಮಠ ಹಾಗೂ ದೇವಾಲಯ, ಅದರಲ್ಲೂ ಮನೆಯ ಶಕ್ತಿ ದೇವತೆ ಕಬ್ಬಾಳಮ್ಮ ವಿಶೇಷ ಪೂಜೆ ಸಲ್ಲಿಸಿದ್ದ ಡಿಕೆ ಸುರೇಶ್ ಅವರು ಇಂದು ನಾಮಪತ್ರ ಸಲ್ಲಿಸಿದ್ದಾರೆ. ರಾಮನಗರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಡಿ.ಕೆ. ಸುರೇಶ್ ನಾಮಪತ್ರ ಸಲ್ಲಿಸಿದ್ದಾರೆ.
ನಾಮಪತ್ರ ಸಲ್ಲಿಕೆಗೆ ಏಪ್ರಿಲ್ 4 ಕಡೇ ದಿನವಾಗಿದೆ. ಏಪ್ರಿಲ್ 5ರಂದು ನಾಮಪತ್ರ ಪರಿಶೀಲನೆ ನಡೆಯಲಿದ್ದು, ಏಪ್ರಿಲ್ 8 ನಾಮಪತ್ರ ವಾಪಸ್‌ಗೆ ಕಡೇ ದಿನವಾಗಿದೆ. ಇಂದಿನಿಂದ ನಾಮಪತ್ರ ಸಲ್ಲಿಕೆ ಶುರುವಾಗಿದ್ದು ಮೊದಲ ದಿನವೇ ಡಿಕೆ ಸುರೇಶ್ ನಾಪಮತ್ರ ಸಲ್ಲಿಸಿದ್ದಾರೆ. ಇನ್ನು ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಿಂದ ಬಿಜೆಪಿ – ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ಹೃದಯ ತಜ್ಞ ಡಾ ಸಿಎನ್ ಮಂಜುನಾಥ್ ಅವರು ಕಣಕ್ಕಿಳಿದಿದ್ದಾರೆ. ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರ ಅಳಿಯ ಹಾಗೂ ಜಯದೇವ ಹೃದ್ರೋಗ ಆಸ್ಪತ್ರೆಯನ್ನು ಬಡ ರೋಗಿಗಳ ಪಾಲಿನ ಭರವಸೆಯಾಗಿ ಬದಲಾಯಿಸಿದ ಡಾ.ಮಂಜುನಾಥ್ ಜನಪ್ರಿಯ ವ್ಯಕ್ತಿ. ಸದ್ಯ ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಜಿದ್ದಾಜಿದ್ದಿ ಜೋರಾಗಿದೆ.
2013ರ ಉಪ ಚುನಾವಣೆ ಸೇರಿ 3 ಬಾರಿ ಜಯಗಳಿಸಿರುವ ಸುರೇಶ್ ಮತ್ತು ಬಡರಾಗಿಗಳ ಆಸರೆದಾತ ಡಾ ಸಿಎನ್ ಮಂಜುನಾಥ್ ಇಬ್ಬರೂ ಪ್ರಬಲ ಅಭ್ಯರ್ಥಿಗಳಾಗಿದ್ದು ಕ್ಷೇತ್ರ ಹೈವೋಲ್ಟೇಜ್ ರಣಕಣವಾಗಿ ಬದಲಾಗಿದೆ.
ವಿಡಿಯೋ ಸುದ್ದಿಗಳನ್ನು ನೋಡಲು ಇದರ ಮೇಲೆ ಕ್ಲಿಕ್ ಮಾಡಿ
Published On - 12:06 pm, Thu, 28 March 24