ಚಿರು ಸರ್ಜಾ ಪೋಟೋ ಇರುವ ಜಾಕೆಟ್ ಧರಿಸಿ ಸೈಮಾದಲ್ಲಿ ಕಾಣಿಸಿಕೊಂಡ ಪನ್ನಗಭರಣ
ದಕ್ಷಿಣ ಭಾರತದ ಸಿನಿಮಾ ಚಿತ್ರರಂಗದಲ್ಲಿನ ಸಿನಿಮಾಗಳಿಗೆ ಸೈಮಾ ಅವಾರ್ಡ್ಸ್ ನೀಡಲಾಗುತ್ತದೆ. ಇತ್ತೀಚೆಗೆ ಈ ಕಾರ್ಯಕ್ರಮ ನಡೆದಿದೆ. ರಕ್ಷಿತ್ ಶೆಟ್ಟಿ, ರಶ್ಮಿಕಾ ಮಂದಣ್ಣ, ಡಾಲಿ ಧನಂಜಯ್ ಸೇರಿ ಸಾಕಷ್ಟು ಸ್ಯಾಂಡಲ್ವುಡ್ನ ನಟ, ನಟಿಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಚಿರಂಜೀವಿ ಸರ್ಜಾ ಹಾಗೂ ನಿರ್ದೇಶಕ ಪನ್ನಗಭರಣ ತುಂಬಾನೇ ಆಪ್ತರಾಗಿದ್ದರು. ಅವರ ನಡುವೆ ಒಳ್ಳೆಯ ಗೆಳೆತನ ಬೆಳೆದಿತ್ತು. ಆದರೆ, ಚಿರು ಅಕಾಲಿಕ ಮರಣ ಹೊಂದಿದರು. ಇದು ಅನೇಕರಿಗೆ ಬೇಸರ ಮೂಡಿಸಿತ್ತು. ಪನ್ನಗಭರಣ ಅವರು ತುಂಬಾನೇ ನೊಂದುಕೊಂಡರು. ಈಗ ಸೈಮಾ ಅವಾರ್ಡ್ಸ್ ಕಾರ್ಯಕ್ರಮದಲ್ಲಿ ಪನ್ನಗಭರಣ ಅವರು ಚಿರು ಸರ್ಜಾ ಫೋಟೋ ಇರುವ ಜಾಕೆಟ್ ಧರಿಸಿ ಕಾಣಿಸಿಕೊಂಡಿದ್ದಾರೆ.
ದಕ್ಷಿಣ ಭಾರತದ ಸಿನಿಮಾ ಚಿತ್ರರಂಗದಲ್ಲಿನ ಸಿನಿಮಾಗಳಿಗೆ ಸೈಮಾ ಅವಾರ್ಡ್ಸ್ ನೀಡಲಾಗುತ್ತದೆ. ಇತ್ತೀಚೆಗೆ ಈ ಕಾರ್ಯಕ್ರಮ ನಡೆದಿದೆ. ರಕ್ಷಿತ್ ಶೆಟ್ಟಿ, ರಶ್ಮಿಕಾ ಮಂದಣ್ಣ, ಡಾಲಿ ಧನಂಜಯ್ ಸೇರಿ ಸಾಕಷ್ಟು ಸ್ಯಾಂಡಲ್ವುಡ್ನ ನಟ, ನಟಿಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಈ ವೇಳೆ ಪನ್ನಗಭರಣ ಅವರ ಶರ್ಟ್ ಮೇಲಿನ ಚಿರು ಫೋಟೋ ಎಲ್ಲರ ಗಮನ ಸೆಳೆದಿದೆ.
ಇದನ್ನೂ ಓದಿ: ಚಿರಂಜೀವಿ ಸಿನಿಮಾ ರಿಜೆಕ್ಟ್ ಮಾಡಿದ್ದ ಸಾಯಿ ಪಲ್ಲವಿ; ಖುಷಿಯಿಂದ ಥ್ಯಾಂಕ್ಸ್ ಹೇಳಿದ ಮೆಗಾಸ್ಟಾರ್