ಚಿರಂಜೀವಿ ಸಿನಿಮಾ ರಿಜೆಕ್ಟ್ ಮಾಡಿದ್ದ ಸಾಯಿ ಪಲ್ಲವಿ; ಖುಷಿಯಿಂದ ಥ್ಯಾಂಕ್ಸ್ ಹೇಳಿದ ಮೆಗಾಸ್ಟಾರ್
ನಾಗ ಚೈತನ್ಯ ಹಾಗೂ ಸಾಯಿ ಪಲ್ಲವಿ ನಟನೆಯ ‘ಲವ್ ಸ್ಟೋರಿ’ ಸಿನಿಮಾ ಸೆಪ್ಟೆಂಬರ್ 24ರಂದು ತೆರೆಗೆ ಬರುತ್ತಿದೆ. ಈ ಸಿನಿಮಾಗೆ ಚಿತ್ರತಂಡ ದೊಡ್ಡ ಮಟ್ಟದಲ್ಲಿ ಪ್ರಚಾರ ನೀಡುತ್ತಿದೆ.
ಚಿರಂಜೀವಿ ನಟನೆಯ ಸಿನಿಮಾಗಳಿಗೆ ಟಾಲಿವುಡ್ನಲ್ಲಿ ಭಾರೀ ಬೇಡಿಕೆ ಇದೆ. ಅವರ ನಟಿಸುವ ಸಿನಿಮಾದಲ್ಲಿ ಅವಕಾಶ ಸಿಕ್ಕರೆ ಸಾಕು ಎಂದು ಸಾಕಷ್ಟು ಕಲಾವಿದರು ಕಾದು ಕುಳಿತಿದ್ದಾರೆ. ಅವರ ಚಿತ್ರದಲ್ಲಿ ನಟಿಸಿದ್ದಕ್ಕೆ ಸಾಕಷ್ಟು ಜನರ ಲಕ್ ಬದಲಾದ ಉದಾಹರಣೆ ಇದೆ. ಆದರೆ, ಖ್ಯಾತ ನಟಿ ಸಾಯಿ ಪಲ್ಲವಿ ಅವರು ಚಿರಂಜೀವಿ ಸಿನಿಮಾವನ್ನು ರಿಜೆಕ್ಟ್ ಮಾಡಿದ್ದರು. ಈ ವಿಚಾರಕ್ಕೆ ಅವರಿಗೆ ಥ್ಯಾಂಕ್ಸ್ ಹೇಳಿದ್ದಾರೆ ಚಿರಂಜೀವಿ!
ನಾಗ ಚೈತನ್ಯ ಹಾಗೂ ಸಾಯಿ ಪಲ್ಲವಿ ನಟನೆಯ ‘ಲವ್ ಸ್ಟೋರಿ’ ಸಿನಿಮಾ ಸೆಪ್ಟೆಂಬರ್ 24ರಂದು ತೆರೆಗೆ ಬರುತ್ತಿದೆ. ಈ ಸಿನಿಮಾಗೆ ಚಿತ್ರತಂಡ ದೊಡ್ಡ ಮಟ್ಟದಲ್ಲಿ ಪ್ರಚಾರ ನೀಡುತ್ತಿದೆ. ಇದರ ಭಾಗವಾಗಿ ಭಾನುವಾರ (ಸೆಪ್ಟೆಂಬರ್ 19) ಚಿತ್ರತಂಡ ಹೈದರಾಬಾದ್ನಲ್ಲಿ ಪ್ರೀರಿಲೀಸ್ ಕಾರ್ಯಕ್ರಮ ಹಮ್ಮಿಕೊಂಡಿತ್ತು. ಈ ಕಾರ್ಯಕ್ರಮಕ್ಕೆ ಆಮಿರ್ ಖಾನ್ ಹಾಗೂ ಚಿರಂಜೀವಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ಈ ಕಾರ್ಯಕ್ರಮದಲ್ಲಿ ಚಿರಂಜೀವಿ ಮಾತನಾಡಿದ್ದು ಎಲ್ಲರ ಗಮನ ಸೆಳೆದಿದೆ.
ಸಾಯಿ ಪಲ್ಲವಿ ‘ಫಿದಾ’ ಸಿನಿಮಾದಲ್ಲಿ ನಟಿಸಿದ್ದರು. ಆ ಸಿನಿಮಾದಲ್ಲಿ ಅದ್ಭುತವಾಗಿ ಡ್ಯಾನ್ಸ್ ಮಾಡಿದ್ದರು. ಈ ಮೂಲಕ ಅವರು ಎಲ್ಲರ ಗಮನ ಸೆಳೆದಿದ್ದರು. ಚಿರಂಜೀವಿ ಕೂಡ ಸಾಯಿ ಪಲ್ಲವಿ ಡ್ಯಾನ್ಸ್ ಇಷ್ಟಪಟ್ಟಿದ್ದರು. ನಂತರ ‘ಭೋಲಾ ಶಂಕರ್’ ಸಿನಿಮಾದಲ್ಲಿ ಚಿರಂಜೀವಿ ತಂಗಿ ಪಾತ್ರದಲ್ಲಿ ನಟಿಸೋಕೆ ಸಾಯಿ ಪಲ್ಲವಿಗೆ ಆಫರ್ ನೀಡಲಾಗಿತ್ತು. ಆದರೆ, ಅವರು ಈ ಆಫರ್ ತಿರಸ್ಕರಿಸಿದ್ದರು. ಈ ಬಗ್ಗೆ ಚಿರಂಜೀವಿ ಮಾತನಾಡಿದ್ದಾರೆ.
‘ಸಾಯಿ ಪಲ್ಲವಿ ಅವರನ್ನು ಅಪ್ರೋಚ್ ಮಾಡಿದ್ದೇವೆ. ಅವರು ನಿಮ್ಮ ತಂಗಿ ಪಾತ್ರ ಮಾಡಲಿದ್ದಾರೆ ಎಂದು ಚಿತ್ರತಂಡದವರು ಹೇಳಿದ್ದರು. ಸಾಯಿ ಪಲ್ಲವಿ ಈ ಆಫರ್ ರಿಜೆಕ್ಟ್ ಮಾಡಲಿ ಎಂದು ನಾನು ಕೋರಿಕೊಂಡಿದ್ದೆ. ಅಂತೆಯೇ ಅವರು ಆಫರ್ ರಿಜೆಕ್ಟ್ ಮಾಡಿದ್ದರು. ಅವರಿಗೆ ಥ್ಯಾಂಕ್ಸ್’ ಎಂದಿದ್ದಾರೆ ಚಿರಂಜೀವಿ.
ತಕ್ಷಣಕ್ಕೆ ಮೈಕ್ ಎತ್ತಿಕೊಂಡ ಸಾಯಿ ಪಲ್ಲವಿ, ‘ನನಗೆ ರಿಮೇಕ್ ಸಿನಿಮಾಗಳನ್ನು ಮಾಡೋಕೆ ಯಾವಾಗಲೂ ಭಯ. ಆ ಕಾರಣಕ್ಕೆ ನಾನು ಆ ಸಿನಿಮಾ ಆಫರ್ ರಿಜೆಕ್ಟ್ ಮಾಡಿದ್ದೆ. ಇದರ ಹೊರತು ಮತ್ತಾವುದೇ ಉದ್ದೇಶವಿಲ್ಲ’ ಎಂದಿದ್ದಾರೆ ಸಾಯಿ ಪಲ್ಲವಿ.
ಇದಕ್ಕೆ ನಗುತ್ತಲೇ ಉತ್ತರಿಸಿದ ಚಿರಂಜೀವಿ, ‘ನನ್ನ ಸಿನಿಮಾಗೆ ನೀವು ಹೀರೋಯಿನ್ ಆಗಿ ನಟಿಸಬೇಕೇ ಹೊರತು, ನನ್ನ ತಂಗಿ ಆಗಿ ಅಲ್ಲ’ ಎಂದರು. ಆಗ ಮುಂದಿನ ಸಿನಿಮಾದಲ್ಲಿ ಅವರ ಜತೆ ನಟಿಸೋಕೆ ಅವಕಾಶ ನೀಡುವಂತೆ ಚಿರು ಬಳಿ ಸಾಯಿ ಪಲ್ಲವಿಗೆ ಮನವಿ ಮಾಡಿಕೊಂಡರು.
ಇದನ್ನೂ ಓದಿ: ಚಿರಂಜೀವಿ ಅಳಿಯ ಸಾಯಿ ಧರಮ್ ತೇಜ್ ಆಕ್ಸಿಡೆಂಟ್ನ ಸಿಸಿಟಿವಿ ದೃಶ್ಯ; ಹೆಲ್ಮೆಟ್ನಿಂದ ಬಚಾವ್
‘ಮೆಗಾ ಸ್ಟಾರ್’ ಚಿರಂಜೀವಿ ಮತ್ತು ರವಿಚಂದ್ರನ್ ನಡುವಿನ ಸ್ನೇಹ ವಿವರಿಸಲು ಈ ಒಂದು ಘಟನೆ ಸಾಕು