Odisha Train Accident: ರಕ್ಷಣಾ ಮತ್ತು ಪರಿಹಾರ ಕಾರ್ಯ ಜಾರಿಯಲ್ಲಿರುವಾಗಲೇ ಅಪಘಾತ ನಡೆದ ಸ್ಥಳದ ವಿಹಂಗಮ ದೃಶ್ಯ ಲಭ್ಯವಾಗಿದೆ

Odisha Train Accident: ರಕ್ಷಣಾ ಮತ್ತು ಪರಿಹಾರ ಕಾರ್ಯ ಜಾರಿಯಲ್ಲಿರುವಾಗಲೇ ಅಪಘಾತ ನಡೆದ ಸ್ಥಳದ ವಿಹಂಗಮ ದೃಶ್ಯ ಲಭ್ಯವಾಗಿದೆ

ಅರುಣ್​ ಕುಮಾರ್​ ಬೆಳ್ಳಿ
|

Updated on: Jun 03, 2023 | 11:28 AM

ಯಾವ ಪ್ರಮಾಣದಲ್ಲಿ ಅಪಘಾತ ನಡೆದಿದೆ ಅಂತ ಅರ್ಥಮಾಡಿಕೊಳ್ಳಲು ವಿಡಿಯೋ ನೆರವಾಗುತ್ತದೆ.

ಬಾಲಸೋರ್: ಒಡಿಷಾ ಬಾಲಸೋರ್ (Balasore) ಜಿಲ್ಲೆಯ ಬಹನಾಗ ಬಳಿ ಜರುಗಿದ ಹೃದಯವಿದ್ರಾವಕ ರೈಲು ದುರಂತದಲ್ಲಿ (train accident) ಬದುಕುಳಿದಿರುವ, ಬೋಗಿಗಳಲ್ಲಿ, ಅವುಗಳ ಮಧ್ಯೆ ಮತ್ತು ಅಡಿಯಲ್ಲಿ ಸಿಕ್ಕಿಬಿದ್ದಿರಬಹುದಾದ ಜನರನ್ನು ಹೊರತಂದು ಆಸ್ಪತ್ರೆಗಳಿಗೆ ಸಾಗಿಸುವ ಕೆಲಸ ಈಗಲೂ ಜಾರಿಯಲ್ಲಿದೆ. ರೇಲ್ವೇ ಸಚಿವ ಅಶ್ವಿನ್ ವೈಷ್ಣವ್ (Ashwini Vaishnaw) ಸ್ಥಳದಲ್ಲಿ ಹಾಜರಿದ್ದು ರಕ್ಷಣಾ ಮತ್ತು ಪರಿಹಾರ ಕಾರ್ಯಾಚರಣೆಯನ್ನು ನೋಡಿಕೊಳ್ಳುತ್ತಿದ್ದಾರೆ. ಎನ್ ಡಿಆರ್ ಎಫ್, ಎಸ್ ಡಿ ಆರ್ ಎಫ್, ಅರೆ ಮಿಲಿಟರಿ ಪಡೆ, ಅಸಂಖ್ಯಾತ ಆರೋಗ್ಯ ಸಿಬ್ಬಂದಿ ಮತ್ತು ಸ್ವಯಂಸೇವಕರು ದಣಿವರಿಯದೆ ಜನರ ಪ್ರಾಣವುಳಿಸಲು ಪ್ರಯತ್ನಿಸುತ್ತಿದ್ದಾರೆ. ಏತನ್ಮಧ್ಯೆ, ಡ್ರೋಣ್ ಕೆಮೆರಾದಲ್ಲಿ ಸೆರೆಯಾಗಿರುವ ಅಪಘಾತ ನಡೆದ ಸ್ಥಳದ ವಿಹಂಗಮ ದೃಶ್ಯ ಲಭ್ಯವಾಗಿದೆ. ಯಾವ ಪ್ರಮಾಣದಲ್ಲಿ ಅಪಘಾತ ನಡೆದಿದೆ ಅಂತ ಅರ್ಥಮಾಡಿಕೊಳ್ಳಲು ವಿಡಿಯೋ ನೆರವಾಗುತ್ತದೆ.

ವಿಶೇಷ ಸೂಚನೆ/Disclaimer

ಈ ವಿಡಿಯೋ ವೀಕ್ಷಣೆ ಅಘಾತಕಾರಿಯಾಗಿ ಪರಿಣಮಿಸಬಹುದು. ಆದರೆ ಕೇವಲ  ಮಾಹಿತಿ ನೀಡುವ ಉದ್ದೇಶದಿಂದ ಮಾತ್ರ ಇದನ್ನು ಪ್ರಕಟಿಸಲಾಗಿದೆಯೇ ಹೊರತು ಅದರ ಹಿಂದೆ ಯಾವುದೇ ದುರುದ್ದೇಶ ಇರುವುದಿಲ್ಲ.

This video contains shocking images. But  it is published for the sake of information only, no malicious intent involved

 

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ