Loading video

ರಾಜ್ಯ ಬಿಜೆಪಿಯಲ್ಲಿರುವ ಬಂಡಾಯವನ್ನು ಆದಷ್ಟು ಬೇಗ ಶಮನಗೊಳಿಸುವ ಸೂಚನೆ ವರಿಷ್ಠರು ನೀಡಿದ್ದಾರೆ: ಬಿವೈ ವಿಜಯೇಂದ್ರ

|

Updated on: Feb 14, 2025 | 7:05 PM

ಬಸನಗೌಡ ಯತ್ನಾಳ್ ಬಗ್ಗೆ ಮಾತಾಡಲು ವಿಜಯೇಂದ್ರ ಸುತಾರಾಂ ಇಷ್ಟಪಡಲಿಲ್ಲ. ನಿನ್ನೆ ದೆಹಲಿಗೆ ಹೋಗಿದ್ರಲ್ಲ, ಅಲ್ಲೇನಾಯಿತು ಅಂತ ಕೇಳಿದರೆ ದೆಹಲಿಗೂ ಹೋಗಿದ್ದೆ, ಅಲ್ಲಿಂದ ಮಹಾಕುಂಭಮೇಳಕ್ಕೂ ಹೋಗಿದ್ದೆ ಎಂದ ವಿಜಯೇಂದ್ರ ಹೇಳಿದರು. ರಾಜ್ಯ ಬಿಜೆಪಿ ಘಟಕದಲ್ಲಿರುವ ಬಿಕ್ಕಟ್ಟ್ಟು ಆದಷ್ಟು ಬೇಗ ಕೊನೆಗೊಳ್ಳಲಿವೆ ಅಂತ ಹೇಳಿದ್ದೆ ಅದರ ಸೂಚನೆಗಳನ್ನು ಪಕ್ಷದ ವರಿಷ್ಠರು ನೀಡಿದ್ದಾರೆ ಎಂದು ಅವರು ಹೇಳಿದರು.

ದಾವಣಗೆರೆ: ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಅವರ ಮುಖದಲ್ಲಿ ಅಪರೂಪದ ನಗು ದಾವಣಗೆರೆಯಲ್ಲ್ಲಿ ಕಂಡಿತು ಮಾರಾಯ್ರೇ. ಮುಖದಲ್ಲಿ ನಗು ಕೇಂದ್ರದ ಶಿಸ್ತು ಸಮಿತಿ ಬಸನಗೌಡ ಪಾಟೀಲ್ ಯತ್ನಾಳ್ ಅವರಿಗೆ ನೋಟೀಸ್ ಜಾರಿ ಮಾಡಿದ್ದಕ್ಕೋ ಅಥವಾ ನಿನ್ನೆ ದೆಹಲಿಯಲ್ಲಿ ವರಿಷ್ಠರನ್ನು ಭೇಟಿಯಾಗಿದ್ದಕ್ಕೋ ಅಂತ ವಿಜಯೇಂದ್ರ ಅವರೇ ಹೇಳಬೇಕು. ಬಂಡಾಯ ಶಮನ ಆಗೋ ಥರ ಕಾಣ್ತಿದೆಯಲ್ಲ ಅಂತ ಮಾಧ್ಯಮದವರು ಕೇಳಿದ್ದಕ್ಕೆ ಮಾಧ್ಯಮದವರಿಗೆ ಅದರಿಂದ ಬೇಜಾರಾಗಿರಬಹುದು ಎಂದು ನಗುತ್ತ ಹೇಳಿದರು. ಯತ್ನಾಳ್ ಗೆ ನೋಟೀಸ್ ನೀಡಿರುವ ಬಗ್ಗೆ ಕೆದಕಿದಾಗ ವಿಜಯೇಂದ್ರ, ಅದನ್ನು ಕೊಟ್ಟಿದ್ದು ನಾನಲ್ಲ, ಕೇಂದ್ರ ಶಿಸ್ತು ಸಮಿತಿ ಎಂದು ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಮಹಾಕುಂಭಮೇಳದಲ್ಲಿ ವಿಜಯೇಂದ್ರನೂ ಭಾಗಿ, ತ್ರಿವೇಣಿ ಸಂಗಮದಲ್ಲಿ ಪುಣ್ಯಸ್ನಾನ