ನಮಗಾಗಿ ಬೆವರು ಸುರಿಸಿ ದುಡಿಯುವ ಕಾರ್ಯಕರ್ತರ ಮನಸನ್ನು ನೋಯಿಸಬಾರದು: ಸಿಟಿ ರವಿ, ವಿ ಪ ಸದಸ್ಯ
ಬಸನಗೌಡ ಯತ್ನಾಳ್ ಮತ್ತು ಕೆಲ ಬಿಜೆಪಿ ನಾಯಕರು ನಿನ್ನೆ ದೆಹಲಿಗೆ ತೆರಳಿ ವಿ ಸೋಮಣ್ಣರನ್ನು ಭೇಟಿಯಾಗಿದ್ದಾರೆ. ಅವರೊಂದಿಗೆ ಮಾತುಕತೆ ನಡೆಸಿದ ಬಳಿಕವೂ ಯತ್ನಾಳ್ ಮಾಧ್ಯಮಗಳಿಗೆ ಹೇಳಿಕೆ ನೀಡಿ ವರಿಷ್ಠರು ಸೋಮಣ್ಣ ಮೂಲಕ ಸಂದೇಶ ನೀಡಿದ್ದಾರೆ ಅಂದಿದ್ದಾರೆ. ಅದಾದ ಬಳಿಕ ಬಿಜೆಪಿ ಕೇಂದ್ರೀಯ ಶಿಸ್ತು ಸಮಿತಿ ಯತ್ನಾಳ್ಗೆ ಶೋಕಾಸ್ ನೋಟೀಸ್ ಜಾರಿ ಮಾಡಿದೆ.
ನಗರದಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ವಿಧಾನ ಪರಿಷತ್ ಸದಸ್ಯ ಸಿಟಿ ರವಿ; ಸೋಮವಾರದಂದು ಬಸನಗೌಡ ಪಾಟೀಲ್ ಯತ್ನಾಳ್ ಅವರ ತಂಡ ದೆಹಲಿಯಲ್ಲಿ ಕೇಂದ್ರ ಸಚಿವ ವಿ ಸೋಮಣ್ಣ ಅವರ ಮನೆಯಲ್ಲಿ ಸಭೆ ನಡೆಸಿ, ವಿಜಯಂದ್ರರನ್ನು ಕೆಳಗಿಳಿಸುವ ಬಗ್ಗೆ ಹೇಳಿರುವುದಕ್ಕೆ ಪ್ರತಿಕ್ರಿಯೆ ನೀಡುತ್ತಾ, ತಾವು ಶಾಸಕ, ಮಂತ್ರಿಯಾಗುವುದರ ಹಿಂದೆ ಲಕ್ಷಾಂತರ ಕಾರ್ಯಕರ್ತರ ಪರಿಶ್ರಮ ಅಡಗಿರುತ್ತದೆ ಮತ್ತು ಕೋಟ್ಯಾಂತರ ಜನ ತಮ್ಮ ಪಕ್ಷದ ವಿಚಾರಧಾರೆ ಮೇಲೆ ನಂಬಿಕೆಯಿಟ್ಟು ತಮ್ಮನ್ನು ಅವರ ಪ್ರತಿನಿಧಿಯಾಗಿ ಆಯ್ಕೆ ಮಾಡಿರುತ್ತಾರೆ, ತಮ್ಮ ನಡೆ-ನುಡಿ ಯಾವ ಕಾರಣಕ್ಕೂ ಅವರಿಗೆ ನೋವನ್ನುಂಟು ಮಾಡಬಾರದು ಎಂದು ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಸದಾನಂದಗೌಡರ ಮನೆಯಲ್ಲಿ ಅಶೋಕ, ಬೊಮ್ಮಾಯಿ, ಅಶ್ವಥ್ ಮತ್ತು ಸಿಟಿ ರವಿ ಮೀಟಿಂಗ್!