ಕಂಠಮಟ್ಟ ಕುಡಿದು ಬಂದ ಬಸ್ ಡ್ರೈವರ್ ಗೆ ಪ್ರಯಾಣಿಕರು ತದುಕಿ ಮಲಗಿಸಿದರು!
ಅವನ ಸ್ಥಿತಿ ಕಂಡು ಬಸ್ ನಲ್ಲಿದ್ದ ಪ್ರಯಾಣಿಕರು ರೊಚ್ಚಿಗೆದ್ದು ಚೆನ್ನಾಗಿ ತದುಕಿದ್ದಾರೆ. ಅವನು ರಸ್ತೆ ಮೇಲೆ ಬಿದ್ದಿರುವುದನ್ನು ನೀವು ನೋಡಬಹುದು.
ಈ ಡ್ರೈವರ್ ನ ಅವಸ್ಥೆ ನೋಡಿ ಮಾರಾಯ್ರೇ. ಇವನು ಕುಂದಾಪುರದಿಂದ (Kondapur) ಬೆಂಗಳೂರಿಗೆ ಹೊರಟಿದ್ದ ಖಾಸಗಿ ಬಸ್ಸೊಂದರ ಚಾಲಕ. ಪ್ರಯಾಣದ ಮಧ್ಯೆ ರಾತ್ರಿಯೂಟಕ್ಕಾಗಿ (supper) ಬಸ್ಸನ್ನು ನಿಲ್ಲಿಸಿ ಇವನು ಕಂಠಮಟ್ಟದವರೆಗೆ ಮದ್ಯ ಸೇವಿಸಿದ್ದಾನೆ ಮತ್ತು ತೂರಾಡುತ್ತಾ ಬಸ್ಸಿನ ಬಳಿ ಬಂದಿದ್ದಾರೆ. ನೆಟ್ಟಗೆ ನಿಲ್ಲಲೂ ಅವನಿಗೆ ಸಾಧ್ಯವಾಗುತ್ತಿಲ್ಲ. ಅಂಥದರಲ್ಲಿ ರಾತ್ರಿಯಿಡೀ ಬಸ್ ಓಡಿಸಿಯಾನೇ? ಅವನ ಸ್ಥಿತಿ ಕಂಡು ಬಸ್ ನಲ್ಲಿದ್ದ ಪ್ರಯಾಣಿಕರು (passengers) ರೊಚ್ಚಿಗೆದ್ದು ಚೆನ್ನಾಗಿ ತದುಕಿದ್ದಾರೆ. ಅವನು ರಸ್ತೆ ಮೇಲೆ ಬಿದ್ದಿರುವುದನ್ನು ನೀವು ನೋಡಬಹುದು.