ಜಿಮ್ ಟ್ರೇನರ್ ಅರುಣ್ ಸಾವಿಗೆ ದಾರಿಹೋಕರ ನಿರ್ಲಕ್ಷ್ಯ ಮತ್ತು ನಿರ್ದಯತೆಯೂ ಕಾರಣವಲ್ಲವೇ?
ಅರುಣ್ ಇಮೇಜುಗಳನ್ನು ಒಮ್ಮೆ ನೋಡಿ. ನಿಸ್ಸಂದೇಹವಾಗಿ ಸಿನಿಮಾ ನಟ ಮತ್ತು ಮಾಡೆಲ್ಗಳನ್ನು ಮೀರಿಸುವಷ್ಟು ಸ್ಫುರದ್ರೂಪಿ. ಜೊತೆಗೆ ಜಿಮ್ ನಲ್ಲಿ ಪ್ರತಿನಿತ್ಯ ಸಾಮುಗೊಳ್ಳುತ್ತಿದ್ದ ದೇಹದ ಒಡೆಯ. ಮೂವತ್ತನ್ನೂ ತಲುಪದ ಯುವಕ ದಾರುಣ ಸಾವನ್ನಪ್ಪುತ್ತಾನೆ ಅಂತ ಯಾರು ಅಂದುಕೊಂಡಿದ್ದರು? ರಸ್ತೆಯಲ್ಲಿ ಬಿದ್ದು ಒದ್ದಾಡುತ್ತಿದ್ದ ಅವರನ್ನು ಕೂಡಲೇ ಆಸ್ಪತ್ರೆಗೆ ಒಯ್ದಿದ್ದರೆ ಪ್ರಾಯಶಃ ಬದುಕುತ್ತಿದ್ದರೇನೋ?
ಬೆಂಗಳೂರು, ಫೆ 26: ಸಾವು ಕೆಲವು ಸಲ ಅದೆಷ್ಟು ನಿರ್ದಯಿ ಮತ್ತು ಆಕಸ್ಮಿಕ ಆಗಿರುತ್ತೆ ಅಂತ ಅರ್ಥಮಾಡಿಕೊಳ್ಳಲು ಯಶವಂತಪುರದ ಜಿಮ್ ಟ್ರೇನರ್ ಅರುಣ್ ನಿನ್ನೆ ರಾತ್ರಿ ಈ ಲೋಕದಿಂದ ನಿರ್ಗಮಿಸಿದ್ದು ಸಾಕ್ಷಿ. ಜಿಮ್ಮೊಂದರಲ್ಲಿ ಟ್ರೇನರ್ ಆಗಿದ್ದ ಅರುಣ್ ನಿನ್ನೆ ರಾತ್ರಿ ಕೆಲಸ ಮುಗಿಸಿಕೊಂಡು ಮನೆಗೆ ಬಂದಿದ್ದಾರೆ. ಸುಮಾರು 10.45 ಕ್ಕೆ ಊಟ ತರುತ್ತೇನೆಂದು ಮನೆಯಿಂದ ಅಚೆ ಹೋದವರು ವಾಪಸ್ಸು ಬಂದೇ ಇಲ್ಲ. ಬೈಕ್ ಅಪಘಾತಕ್ಕೀಡಾಗಿ ರಸ್ತೆಯಲ್ಲಿ ರಕ್ತದ ಮಡುವಿನಲ್ಲಿ ಬಿದ್ದಿದ್ದ ಅವರನ್ನು ಆಸ್ಪತ್ರೆಗೆ ಸಾಗಿಸಬೇಕೆಂದು ದಾರಿಹೋಕರಿಗೆ ಅನಿಸಿಲ್ಲ! ಕೊನೆಗೊಬ್ಬರು ಆಸ್ಪತ್ರೆಗೆ ಅರುಣ್ನನ್ನು ಒಯ್ದಾಗ ಪ್ರಾಣಪಕ್ಷಿ ಹಾರಿಹೋಗಿತ್ತಂತೆ ಎಂದು ಅವರ ನೆರೆಹೊರೆಯವರು ಹೇಳುತ್ತಾರೆ
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಬೈಕ್ ಸವಾರನಿಗೆ ಯಮನಾದ ರಸ್ತೆಯಲ್ಲಿ ಅಡ್ಡಲಾಗಿ ಕಟ್ಟಿದ್ದ ಹಗ್ಗ; ಭೀಕರ ಘಟನೆ ಸಿಸಿಟಿವಿಯಲ್ಲಿ ಸೆರೆ