ಸಂಡೂರು ಗಣಿಪ್ರದೇಶದಲ್ಲಿ ಕರಡಿ ಕಾಣಿಸಿಕೊಂಡಾಗ ಅದರ ಬೆನ್ನಟ್ಟಿ ವಿಡಿಯೋ ಸೆರೆ ಹಿಡಿದರು ದಾರಿಹೋಕರು!
ಸಂಡೂರಿನ ಸುತ್ತಮುತ್ತ ಪ್ರದೇಶಗಳಲ್ಲಿ ಕೇವಲ ಕರಡಿ ಮಾತ್ರ ಅಲ್ಲ, ಹುಲಿ, ಚಿರತೆಗಳು ಅಲ್ಲಿನ ಅರಣ್ಯ ಪ್ರದೇಶದಿಂದ ಆಚೆ ಬಂದು ರಸ್ತೆಗಳಲ್ಲಿ ಪ್ರತ್ಯಕ್ಷವಾಗುತ್ತವೆ. ಹಾಗಾಗೇ, ಅರಣ್ಯ ಇಲಾಖೆಯವರು ಅರಣ್ಯ ಪ್ರದೇಶ ಪ್ರವೇಶಿದಂತೆ ಎಚ್ಚರಿಸುವ ಫಲಕವನ್ನು ಅಲ್ಲಿ ನೆಟ್ಟಿದ್ದಾರೆ.
ಬಳ್ಳಾರಿ ಜಿಲ್ಲೆ ಸಂಡೂರಿನ ಗಣಿ ಪ್ರದೇಶದಲ್ಲಿ ಕಾಡುಪ್ರಾಣಿಗಳು ಆಗಾಗ ಕಾಣಿಸುತ್ತವೆ. ಸೋಮವಾರಂದು ಕೆಲ ದಾರಹೋಕರಿಗೆ ಕರಡಿಯೊಂದು ಕಂಡಿದೆ. ಕರಡಿಯನ್ನು ಕಂಡು ಅವರು ಹೆದರಬೇಕಿತ್ತು, ಅದರೆ ಇಲ್ಲಿ ಅದು ಉಲ್ಟಾ ಆಗಿದೆ! ಜನರನ್ನು ಕಂಡು ಕರಡಿಯೇ ಓಟಕಿತ್ತಿದೆ. ಅದು ರಾತ್ರಿಯ ಸಮಯವಾಗಿದ್ದರಿಂದ ಅದನ್ನು ನೋಡಿದವರು ತಮ್ಮ ಮೊಬೈಲ್ ಪೋನ್ಗಳ ಟಾರ್ಚ್ ಆನ್ ಮಾಡಿ ಅದರ ಹಿಂದೆ ಓಡಿದ್ದಾರೆ. ಕರಡಿ ಯಾವ ದೃಷ್ಟಿಯಿಂದಲೂ ನಿರುಪದ್ರವ ಜೀವಿ ಅಲ್ಲ ಮಾರಾಯ್ರೇ. ಅದು ಮಾನವರ ಮೇಲೆ ಆಕ್ರಮಣ ನಡೆಸಿದ ಎಷ್ಟೋ ಪ್ರಕರಣಗಳು ವರದಿಯಾಗಿವೆ. ಕರಡಿ ಮಾನವರನ್ನು ಕೊಂದ ಸಂದರ್ಭಗಳು ಸಹ ಬಹಳಷ್ಟಿವೆ. ಸಂಡೂರಿನ ಸುತ್ತಮುತ್ತ ಪ್ರದೇಶಗಳಲ್ಲಿ ಕೇವಲ ಕರಡಿ ಮಾತ್ರ ಅಲ್ಲ, ಹುಲಿ, ಚಿರತೆಗಳು ಅಲ್ಲಿನ ಅರಣ್ಯ ಪ್ರದೇಶದಿಂದ ಆಚೆ ಬಂದು ರಸ್ತೆಗಳಲ್ಲಿ ಪ್ರತ್ಯಕ್ಷವಾಗುತ್ತವೆ. ಹಾಗಾಗೇ, ಅರಣ್ಯ ಇಲಾಖೆಯವರು ಅರಣ್ಯ ಪ್ರದೇಶ ಪ್ರವೇಶಿದಂತೆ ಎಚ್ಚರಿಸುವ ಫಲಕವನ್ನು ಅಲ್ಲಿ ನೆಟ್ಟಿದ್ದಾರೆ.
ರೆಡ್ಡಿಗಳು ಗಣಿಗಾರಿಕೆ ನಡೆಸುತ್ತಿದ್ದ ದಿನಗಳಲ್ಲಿ ಸಂಡೂರು ಅರಣ್ಯಪ್ರದೇಶವನ್ನು ಕೆಂಪು ಬಣ್ಣದ ಧೂಳು ಅವರಿಸಿರುತ್ತಿತ್ತು. ಹಾಗೆ ನೋಡಿದರೆ, ಸಂಡೂರನ್ನು ಬಿಸಿಲುನಾಡು ಬಳ್ಳಾರಿಯ ಮಲೆನಾಡು ಪ್ರದೇಶ ಎಂದು ಕರೆಯುತ್ತಾರೆ.
ಉತ್ತರ ಕರ್ನಾಟಕದ ಸುಡುಬಿಸಿಲಿನಲ್ಲಿ ಮಲೆನಾಡಿನ ಫೀಲ್ ಅನುಭವಿಸಬೇಕಾದರೆ ಸಂಡೂರಿಗೆ ಹೋಗಬೇಕು ಅಂತ ಅಲ್ಲಿನ ಜನ ಹೇಳುತ್ತಾರೆ.
ಸಂಡೂರು ಮರಾಠರ ಘೋರ್ಪಡೆ ರಾಜಮನೆತನ ಆಳ್ವಿಕೆ ನಡೆಸಿದ ಪ್ರದೇಶವಾಗಿದೆ. ಈ ಮನೆತನದ ಎಮ್ ವೈ ಘೋರ್ಪಡೆ ಹಿಂದೆ ಕರ್ನಾಟಕ ಸರ್ಕಾರದಲ್ಲಿ ಮಂತ್ರಿಯಾಗಿದ್ದರು.
ಆಗಲೇ ಹೇಳಿದ ಹಾಗೆ ಸಂಡೂರು ಗಣಿಗಾರಿಕೆ ಸ್ಥಗಿತಗೊಂಡ ನಂತರ ಮೊದಲಿನ ಹಾಗೆ ಹಸಿರು ಸಸ್ಯರಾಶಿ ಮತ್ತು ಗುಡ್ಡಗಾಡು ಪ್ರದೇಶಗಳಲ್ಲೂ ಹಸಿರು ತುಂಬಿ ಕಣ್ಣಿಗೆ ಮುದ ನೀಡುವ ಹಾಗೆ ಕಂಗೊಳಿಸುತ್ತಿದೆ.
ಇದನ್ನೂ ಓದಿ: Viral Video: ಫುಡ್ ಡೆಲಿವರಿ ಕೊಡುವುದು ತಡವಾಗಿದ್ದಕ್ಕೆ ಬರ್ಗರ್ ಕಿಂಗ್ ಸಿಬ್ಬಂದಿ ಮೇಲೆ ಹಲ್ಲೆ; ವಿಡಿಯೋ ವೈರಲ್