AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಟಿ20 ವೃತ್ತಿಜೀವನದಲ್ಲಿ ಅತ್ಯಂತ ದುಬಾರಿ ಓವರ್ ಎಸೆದ ಪ್ಯಾಟ್ ಕಮ್ಮಿನ್ಸ್

ಟಿ20 ವೃತ್ತಿಜೀವನದಲ್ಲಿ ಅತ್ಯಂತ ದುಬಾರಿ ಓವರ್ ಎಸೆದ ಪ್ಯಾಟ್ ಕಮ್ಮಿನ್ಸ್

ಪೃಥ್ವಿಶಂಕರ
|

Updated on: May 03, 2026 | 8:16 PM

Share

Pat Cummins' Costliest T20 Over: ಹೈದರಾಬಾದ್‌ನಲ್ಲಿ ನಡೆದ ಐಪಿಎಲ್ 2026 ರ 45ನೇ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಸುಲಭ ಗೆಲುವು ಸಾಧಿಸಿತು. ಕೆಕೆಆರ್ ಆರಂಭಿಕ ಆಟಗಾರ ಫಿನ್ ಅಲೆನ್, ಸನ್‌ರೈಸರ್ಸ್ ನಾಯಕ ಪ್ಯಾಟ್ ಕಮ್ಮಿನ್ಸ್ ಬೌಲ್ ಮಾಡಿದ ನಾಲ್ಕನೇ ಓವರ್‌ನಲ್ಲಿ ಬರೋಬ್ಬರಿ 27 ರನ್ ಕಲೆಹಾಕಿ ಮಿಂಚಿದರು. ಕಮ್ಮಿನ್ಸ್ ವೃತ್ತಿಜೀವನದಲ್ಲಿ ಇದು ಅತ್ಯಂತ ದುಬಾರಿ ಓವರ್ ಎನಿಸಿಕೊಂಡಿತು, ಇದು ಕೆಕೆಆರ್ ಗೆಲುವಿಗೆ ಪ್ರಮುಖ ಕಾರಣವಾಯಿತು.

ಹೈದರಾಬಾದ್‌ನಲ್ಲಿ ನಡೆದ ಸನ್‌ರೈಸರ್ಸ್ ಹೈದರಾಬಾದ್‌ ವಿರುದ್ಧದ ಐಪಿಎಲ್ 2026 ರ 45 ನೇ ಪಂದ್ಯದಲ್ಲಿ, ಕೋಲ್ಕತ್ತಾ ನೈಟ್ ರೈಡರ್ಸ್ 166 ರನ್‌ಗಳ ಗುರಿಯನ್ನು ಬೆನ್ನಟ್ಟಿ ಸುಲಭ ಗೆಲುವು ದಾಖಲಿಸಿತು. ಈ ಪಂದ್ಯದಲ್ಲಿ ಕೆಕೆಆರ್ ಆರಂಭಿಕ ಆಟಗಾರ ಫಿನ್ ಅಲೆನ್, ಸನ್‌ರೈಸರ್ಸ್ ನಾಯಕ ಪ್ಯಾಟ್ ಕಮ್ಮಿನ್ಸ್ ಬೌಲ್ ಮಾಡಿದ ನಾಲ್ಕನೇ ಓವರ್‌ನಲ್ಲಿ ಬರೋಬ್ಬರಿ 27 ರನ್ ಕಲೆಹಾಕಿದರು.

ಕಮ್ಮಿನ್ಸ್ ತಮ್ಮ ಮೊದಲ ಓವರ್‌ನಲ್ಲಿ ಕೇವಲ ಆರು ರನ್‌ಗಳನ್ನು ಬಿಟ್ಟುಕೊಟ್ಟರು, ಆದರೆ ಎರಡನೇ ಓವರ್‌ನಲ್ಲಿ ದುಬಾರಿಯಾದರು. ಆ ಓವರ್ ವೈಡ್‌ನೊಂದಿಗೆ ಪ್ರಾರಂಭವಾಯಿತು, ಅದು ಬೌಂಡರಿಗೆ ಹೋಯಿತು. ಇದರಿಂದ ಐದು ರನ್‌ ಬಂತು. ನಂತರದ ಎಸೆತವನ್ನು ಅಲೆನ್ ಸಿಕ್ಸರ್​ಗಟ್ಟಿದರು. ನಂತರದ ಎಸೆತದಲ್ಲಿ ಎರಡು ರನ್‌ ಬಂದವು.

ನಂತರ ಮೂರನೇ ಎಸೆತದಲ್ಲಿ ಮತ್ತೊಂದು ಸಿಕ್ಸರ್ ಬಾರಿಸಿದ ಅಲೆನ್ ಮುಂದಿನ ಎರಡು ಎಸೆತಗಳಲ್ಲಿ ಸತತ 2 ಬೌಂಡರಿಗಳನ್ನು ಬಾರಿಸಿದರು. ಹೀಗಾಗಿ, ಪ್ಯಾಟ್ ಕಮ್ಮಿನ್ಸ್ ಅವರ ಈ ಓವರ್‌ನಲ್ಲಿ ಕೆಕೆಆರ್ ಒಟ್ಟು 27 ರನ್‌ ಕಲೆಹಾಕಿತು. ಇದು ಪ್ಯಾಟ್ ಕಮ್ಮಿನ್ಸ್ ಅವರ 15 ವರ್ಷಗಳ, 174 ಪಂದ್ಯಗಳ ಟಿ20 ವೃತ್ತಿಜೀವನದ ಅತ್ಯಂತ ದುಬಾರಿ ಓವರ್ ಎನಿಸಿಕೊಂಡಿತು.

Follow Us