ವಿಕ್ಟೋರಿಯ ಆಸ್ಪತ್ರೆಯಲ್ಲಿ ಸಿಗುತ್ತಿರುವ ಚಿಕಿತ್ಸೆ ಮತ್ತು ವ್ಯವಸ್ಥೆ ಬಗ್ಗೆ ರೋಗಿಗಳು ತೃಪ್ತಿ ವ್ಯಕ್ತಪಡಿಸಿದ್ದಾರೆ: ಸಿದ್ದರಾಮಯ್ಯ
ಸಿಎಂ ಸಿದ್ದರಾಮಯ್ಯ ಜೊತೆ ವೈದ್ಯಕೀಯ ಶಿಕ್ಷಣಗಳ ಸಚಿವ ಡಾ ಶರಣ್ ಪ್ರಕಾಶ್ ಪಾಟೀಲ್ ಇದ್ದರು. ವಿಕ್ಟೋರಿಯ ಅಸ್ಪತ್ರೆಯ ಹೊರರೋಗಿಗಳ ವಿಭಾಗದಲ್ಲಿ ಮುಖ್ಯಮಂತ್ರಿಯವರು ರೋಗಿಗಳೊಂದಿಗೆ ಮಾತಾಡುವಾಗ ಪಾಟೀಲ್, ರೋಗಿಗಳ ಮಾತನ್ನು ಅರ್ಧಕ್ಕೆ ತುಂಡರಿಸಿ ತಾವು ಮಾತಾಡುವ ಪ್ರಯತ್ನ ಮಾಡುತ್ತಿದ್ದಿದ್ದು ಸ್ಙಷ್ಟವಾಗಿ ಗೊತ್ತಾಗುತ್ತಿತ್ತು. ಆಸ್ಪತ್ರೆಯ ಸರ್ಜನ್ ಮಾತಾಡುವಾಗಲೂ ಡಾ ಪಾಟೀಲ್ ಅದನ್ನೇ ಮಾಡಿದರು. ಯಾಕೆ ಅಂತ ಅವರೇ ಹೇಳಬೇಕು.
ಬೆಂಗಳೂರು, ಆಗಸ್ಟ್ 6: ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು ನಗರದ ಖ್ಯಾತ ವಿಕ್ಟೋರಿಯ ಮತ್ತು ವಾಣಿವಿಲಾಸ್ ಸಾರ್ವಜನಿಕ ಆಸ್ಪತ್ರೆಗಳಿಗೆ ಭೇಟಿ ನೀಡಿ ಒಳರೋಗಿಗಳು, ಹೊರರೋಗಿಗಳು ಮತ್ತು ಅವರ ಸಹಾಯಕರೊಂದಿಗೆ ಮಾತಾಡಿದರು. ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಅವರು, ತಮ್ಮೊಂದಿಗೆ ಮಾತಾಡಿದ ರೋಗಿಗಳು ಮತ್ತು ಅವರು ಸಹಾಯಕರು ಆಸ್ಪತ್ರೆಗಳಲ್ಲಿ ಸಿಗುತ್ತಿರುವ ಸೇವೆ ಬಗ್ಗೆ ತೃಪ್ತಿ ವ್ಯಕ್ತಪಡಿಸಿದರು ಮತ್ತು ವೈದ್ಯರು ಹಾಗೂ ಬೇರೆ ಸಿಬ್ಬಂದಿ ಚೆನ್ನಾಗಿ ನೋಡಿಕೊಳ್ಳುತ್ತಿದ್ದಾರೆ ಅಂತ ಹೇಳಿದರು ಎಂದರು. ವಿಕ್ಟೋರಿಯ ಆಸ್ಪತ್ರೆಯಲ್ಲಿ ಲಿವರ್ ಟ್ರಾನ್ಸ್ಪ್ಲಾಂಟೇಷನ್ (liver transplantation) ಚಿಕಿತ್ಸೆ ಉಚಿತವಾಗಿ ಸಿಗುತ್ತದೆ, ಜನ ಹೊರಗಡೆ 30-40 ಲಕ್ಷ ಖರ್ಚು ಮಾಡುವ ಬದಲು ಇಲ್ಲಿ ಸಿಗುವ ಸೇವೆಯ ಸದುಪಯೋಗ ಮಾಡಿಕೊಳ್ಳಬೇಕು ಎಂದು ಹೇಳಿದರು.
ಇದನ್ನೂ ಓದಿ: ನಾಲ್ವಡಿ ಕೃಷ್ಣರಾಜ್ ಒಡೆಯರ್ ನಂತರ ಮೈಸೂರಿಗೆ ಅತಿಹೆಚ್ಚು ಕೊಡುಗೆ ನೀಡಿದ್ದು ಸಿದ್ದರಾಮಯ್ಯ: ಎಂ ಲಕ್ಷ್ಮಣ್
ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ
