Pavagada Bus Accident: ಟಾಪ್​ನಲ್ಲಿ ಜನರನ್ನು ಕೂರಿಸಿಕೊಂಡು ಬಂದ ಬಸ್; ಅಪಘಾತಕ್ಕೂ ಮೊದಲ ವಿಡಿಯೋ ಇಲ್ಲಿದೆ

| Updated By: ganapathi bhat

Updated on: Mar 20, 2022 | 12:59 PM

40 ಕ್ಕೂ ಹೆಚ್ಚು ಗಾಯಾಳುಗಳಿಗೆ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. 7 ಗಾಯಾಳುಗಳಿಗೆ ವಿಕ್ಟೋರಿಯಾ, ನಿಮ್ಹಾನ್ಸ್‌ನಲ್ಲಿ ಚಿಕಿತ್ಸೆ ಕೊಡಲಾಗುತ್ತಿದೆ. ದುರಂತ ಸಂಭವಿಸಿದ ಸ್ಥಳದಲ್ಲಿಯೇ ನಾಲ್ವರು ಮೃತಪಟ್ಟಿದ್ದರು, ಬಳಿಕ ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಒಬ್ಬರು ಮೃತಪಟ್ಟಿದ್ದರು.

ತುಮಕೂರು: ಇಲ್ಲಿನ ಪಾವಗಡದ ಪಳವಳ್ಳಿ ಕಟ್ಟೆ ಬಳಿ ಶನಿವಾರ ಭೀಕರ ಅಪಘಾತ ಸಂಭವಿಸಿದ್ದು ಕರ್ನಾಟಕದ ಜನತೆ ಮರುಗುವಂತೆ ಮಾಡಿದೆ. ಬಸ್​ನಲ್ಲಿದ್ದ ವಿದ್ಯಾರ್ಥಿಗಳು ಸಹಿತ ಹಲವು ಮಂದಿ ಅಪಘಾತದಲ್ಲಿ ಗಾಯಗೊಂಡಿದ್ದು 6 ಮಂದಿ ಸಾವನ್ನಪ್ಪಿದ್ದಾರೆ. ಖಾಸಗಿ ಬಸ್ ಪಲ್ಟಿ ದುರಂತದಲ್ಲಿ ಮೃತರ ಸಂಖ್ಯೆ 6 ಕ್ಕೆ ಏರಿಕೆ ಆಗಿದೆ. 40 ಕ್ಕೂ ಹೆಚ್ಚು ಗಾಯಾಳುಗಳಿಗೆ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. 7 ಗಾಯಾಳುಗಳಿಗೆ ವಿಕ್ಟೋರಿಯಾ, ನಿಮ್ಹಾನ್ಸ್‌ನಲ್ಲಿ ಚಿಕಿತ್ಸೆ ಕೊಡಲಾಗುತ್ತಿದೆ. ದುರಂತ ಸಂಭವಿಸಿದ ಸ್ಥಳದಲ್ಲಿಯೇ ನಾಲ್ವರು ಮೃತಪಟ್ಟಿದ್ದರು, ಬಳಿಕ ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಒಬ್ಬರು ಮೃತಪಟ್ಟಿದ್ದರು. ಚಿಕಿತ್ಸೆ ಫಲಿಸದೆ ರಾತ್ರಿ ವಿಕ್ಟೋರಿಯಾದಲ್ಲಿ ಮತ್ತೊಬ್ಬರು ಸಾವನ್ನಪ್ಪಿದ್ದಾರೆ. ಅಜಿತ್, ಕಲ್ಯಾಣ್, ಶಾನವಾಜ್, ಬಾಬು ವಲಿ ಹಾಗೂ ಒಂದೇ ಕುಟುಂಬದ ಅಮೂಲ್ಯ, ಹರ್ಷಿತಾ ಸಾವನ್ನಪ್ಪಿದ್ದಾರೆ. ಬಸ್​ನಲ್ಲಿ ಹೆಚ್ಚು ಜನರನ್ನು ತುಂಬಿದ್ದು, ಟಾಪ್​ನಲ್ಲಿಯೂ ಜನರನ್ನು ಕೂರಿಸಿ ವೇಗವಾಗಿ ಬಸ್ ಚಲಾಯಿಸಿದ್ದು ಅಪಘಾತಕ್ಕೆ ಪ್ರಮುಖ ಕಾರಣ ಎಂದು ಹೇಳಲಾಗಿದೆ. ಅಪಘಾತಕ್ಕೂ ಮುನ್ನ ಬಸ್ ಸಂಚರಿಸುವ ಸಿಸಿಟಿವಿ ದೃಶ್ಯ ಟಿವಿ9ಗೆ ಲಭಿಸಿದೆ.

ತುರ್ತು ಕೆಲಸ, ಅನಿವಾರ್ಯ ಆದಾಗ ಇರುವ ಬಸ್​ನಲ್ಲಿ ಹೋಗಲೇಬೇಕು

ವಾರದಲ್ಲಿ ಪ್ರತಿ ಶುಕ್ರವಾರ, ಶನಿವಾರ ತುಂಬಾ ರಷ್ ಇರುತ್ತೆ. ಶುಕ್ರವಾರ ಪಾವಗಡದ ಸಂತೆಗೆ ಜನ ಹೆಚ್ಚಾಗಿ ಖಾಸಗಿ ಬಸ್ ಬಳಕೆ ಮಾಡ್ತಾರೆ. ಪಾವಗಡದ ಶನಿಮಾಹತ್ಮ ದೇವಲಯಕ್ಕೂ ಜನ ಹೆಚ್ಚಾಗಿ ತೆರಳುತ್ತಾರೆ. ಬೆಳಗ್ಗೆ ಇರೋದು ಎರಡು ಖಾಸಗಿ ಬಸ್. ಒಂದು ಮಿಸ್ ಆಯಿತು ಅಂದ್ರೆ ಬಸ್ ರಷ್ ಇರುತ್ತದೆ. ಸರ್ಕಾರಿ ಬಸ್ ಹಳ್ಳಿಗಳಿಗೆ ಬರಲ್ಲ. ಹಳ್ಳಿಗಳ ಬಳಿ ಹಾದು ಹೋಗುವ ರಸ್ತೆಯಲ್ಲಿ ಬಸ್ ಸ್ಟಾಪ್ ಕೊಡಲ್ಲ. ತುರ್ತು ಕೆಲಸ ಇದ್ದಾಗ ನಾವು ಹೋಗಲೇಬೇಕು. ನಮ್ಮ ಕೆಲಸ ಕಾರ್ಯಗಳನ್ನು ಮಾಡಲೇ ಬೇಕು ಎಂದು ಅಪಘಾತಕ್ಕೆ ಒಳಗಾಗಿ ಚಿಕಿತ್ಸೆ ಪಡೆಯುತ್ತಿರುವವರು ತಿಳಿಸಿದ್ದಾರೆ.

ಇದನ್ನೂ ಓದಿ: ಪಾವಗಡ ಬಸ್ ಅಪಘಾತ: ವಿಧಿಯಾಟಕ್ಕೆ ಅಕ್ಕ- ತಂಗಿ ಇಬ್ಬರೂ ಬಲಿ; ಮೃತರ ಸಂಖ್ಯೆ 6ಕ್ಕೆ ಏರಿಕೆ

ಇದನ್ನೂ ಓದಿ: ಪಾವಗಡ ಬಸ್ ಅಪಘಾತ ಕೇಸ್: ಚಾಲಕ ವಶಕ್ಕೆ, FIR ದಾಖಲು, ಇತ್ತ ಬೆಂಗಳೂರಿನಲ್ಲಿ ರಂಗಭೂಮಿ ಕಲಾವಿದೆ ಮೇಲೆ ಆ್ಯಸಿಡ್ ದಾಳಿ

Published On - 12:56 pm, Sun, 20 March 22

Follow us on