ನಾಲ್ಕೇ ದಿನದಲ್ಲಿ ಪವಿತ್ರಾ ಗೌಡ ಸಹೋದರ ಸೈಲೆಂಟ್​; ವಿಡಿಯೋ ನೋಡಿ..

| Updated By: ಮದನ್​ ಕುಮಾರ್​

Updated on: Jun 25, 2024 | 8:27 PM

ಚಿತ್ರದುರ್ಗದ ಮೂಲದ ರೇಣುಕಾ ಸ್ವಾಮಿ ಎಂಬ ವ್ಯಕ್ತಿಯ ಕೊಲೆ ಕೇಸ್​ನಲ್ಲಿ ಜೈಲು ಸೇರಿರುವ ಪವಿತ್ರಾ ಗೌಡ ಅವರನ್ನು ಭೇಟಿಯಾಗಲು ಕುಟುಂಬದವರು ಬಂದಿದ್ದಾರೆ. ಪವಿತ್ರಾ ಗೌಡ ತಮ್ಮ ನಾಲ್ಕು ದಿನಗಳ ಹಿಂದೆ ಸಖತ್​ ಕೋಪಗೊಂಡಿದ್ದರು. ಮಾಧ್ಯಮಗಳ ಕ್ಯಾಮೆರಾ ನೋಡಿ ಅವರು ಕೂಗಾಡಿದ್ದರು. ಆದರೆ ಈಗ ಅವರು ಸೈಲೆಂಟ್​ ಆಗಿದ್ದಾರೆ. ಇಂದು (ಜೂನ್​ 25) ಕೂಡ ಅವರು ಜೈಲಿಗೆ ಬಂದಿದ್ದಾರೆ.

ರೇಣುಕಾ ಸ್ವಾಮಿ (Renuka Swamy) ಕೊಲೆ ಪ್ರಕರಣದ ಪ್ರಮುಖ ಆರೋಪಿ ಆಗಿರುವ ನಟಿ ಪವಿತ್ರಾ ಗೌಡ ಪರಪ್ಪನ ಅಗ್ರಹಾರದಲ್ಲಿದ್ದಾರೆ. ಅವರನ್ನು ನೋಡಲು ಕುಟುಂಬದವರು ಆಗಮಿಸಿದ್ದಾರೆ. ನಾಲ್ಕು ದಿನಗಳ ಹಿಂದೆ ಜೈಲಿಗೆ ಬಂದಿದ್ದ ಪವಿತ್ರಾ ಗೌಡ ಸಹೋದರ (Pavithra Gowda Brother) ಸಿಕ್ಕಾಪಟ್ಟೆ ಗರಂ ಆಗಿದ್ದರು. ಮಾಧ್ಯಮಗಳ ಕ್ಯಾಮೆರಾ ಕಂಡು ಅವರು ಅಸಮಾಧಾನ ವ್ಯಕ್ತಪಡಿಸಿದ್ದರು. ಆದರೆ ನಾಲ್ಕು ದಿನ ಕಳೆಯುವುದರೊಳಗೆ ಅವರು ಫುಲ್​ ಸೈಲೆಂಟ್​ ಆಗಿದ್ದಾರೆ. ಮಾಧ್ಯಮದವರು ಕೇಳಿದ ಯಾವುದೇ ಪ್ರಶ್ನೆಗೆ ಅವರು ಉತ್ತರಿಸಿಲ್ಲ. ಮುಖಕ್ಕೆ ಮಾಸ್ಕ್​ ಹಾಕಿಕೊಂಡು, ಸಂಪೂರ್ಣ ಸೈಲೆಂಟ್​ ಆಗಿ ಅವರು ಕಾರು ಹತ್ತಿದ್ದಾರೆ. ಜೈಲಿನಲ್ಲಿ ಪವಿತ್ರಾ ಗೌಡ (Pavithra Gowda) ಕಷ್ಟದ ದಿನಗಳನ್ನು ಕಳೆಯುತ್ತಿದ್ದಾರೆ. ಅಲ್ಲಿನ ಊಟ, ವಾತಾವರಣಕ್ಕೆ ಹೊಂದಿಕೊಳ್ಳಲು ಸಾಧ್ಯವಾಗದೇ ಒದ್ದಾಡುತ್ತಿದ್ದಾರೆ ಎಂಬ ಮಾಹಿತಿ ಇದೆ. ದರ್ಶನ್​ ಪರವಾಗಿ ಅಭಿಮಾನಿಗಳು ಸೋಶಿಯಲ್​ ಮೀಡಿಯಾದಲ್ಲಿ ಪೋಸ್ಟ್​ ಮಾಡುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.