‘ಪವಿತ್ರಾ ಕೊಲೆ ಮಾಡುವಂಥ ವ್ಯಕ್ತಿ ಅಲ್ಲ’: ಮಾಜಿ ಪತ್ನಿ ಬಗ್ಗೆ ಸಂಜಯ್​ ಸಿಂಗ್​ ಹೇಳಿಕೆ

Edited By:

Updated on: Jun 13, 2024 | 5:21 PM

ಸಂಜಯ್​ ಸಿಂಗ್​ ಮತ್ತು ಪವಿತ್ರಾ ಗೌಡ ವಿಚ್ಛೇದನ ಪಡೆದು ಅನೇಕ ವರ್ಷಗಳು ಕಳೆದಿವೆ. ಬಳಿಕ ಪವಿತ್ರಾ ಗೌಡ ಹಾಗೂ ದರ್ಶನ್​ ನಡುವೆ ಆಪ್ತತೆ ಬೆಳೆಯಿತು. ಈಗ ಇಬ್ಬರೂ ಕೊಲೆ ಕೇಸ್​ನಲ್ಲಿ ಬಂಧಿತರಾಗಿದ್ದಾರೆ. ಮಾಜಿ ಪತ್ನಿಯ ಈ ಪ್ರಕರಣದ ಕುರಿತು ಸಂಜಯ್​ ಸಿಂಗ್​ ಈಗ ಮಾತನಾಡಿದ್ದಾರೆ. ಈ ಸಂದರ್ಭದಲ್ಲೂ ಅವರು ಮಾಜಿ ಪತ್ನಿಯ ಪರವಾಗಿ ಹೇಳಿಕೆ ನೀಡಿದ್ದಾರೆ.

ನಟಿ ಪವಿತ್ರಾ ಗೌಡ ಹಾಗೂ ನಟ ದರ್ಶನ್​ (Darshan) ಈಗ ಪೊಲೀಸರ ಅತಿಥಿ ಆಗಿದ್ದಾರೆ. ಚಿತ್ರದುರ್ಗದ ರೇಣುಕಾ ಸ್ವಾಮಿ ಹತ್ಯೆಯಲ್ಲಿ ಮುಖ್ಯ ಆರೋಪಿಗಳಾಗಿ ಅವರು ಪೊಲೀಸರ ಬಲೆಗೆ ಬಿದ್ದಿದ್ದಾರೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಪವಿತ್ರಾ ಗೌಡ (Pavithra Gowda) ಅವರ ಮಾಜಿ ಪತಿ ಸಂಜಯ್​ ಸಿಂಗ್​ (Sanjay Singh) ಪ್ರತಿಕ್ರಿಯೆ ನೀಡಿದ್ದಾರೆ. ‘ಟಿವಿ9 ಕನ್ನಡ’ ಜೊತೆ ಮಾತನಾಡಿದ ಅವರು ಮಾಜಿ ಪತ್ನಿಯ ಬಗ್ಗೆ ತಮ್ಮ ಅನಿಸಿಕೆ ತಿಳಿಸಿದ್ದಾರೆ. ‘ವಿಚ್ಛೇದನ ಪಡೆಯುವಾಗ ಪವಿತ್ರಾ ಗೌಡ ಅವರನ್ನು ನಾನು ಕೊನೆಯ ಬಾರಿ ನೋಡಿದ್ದು ಕೋರ್ಟ್​ನಲ್ಲಿ. ಕೊಲೆ ಪ್ರಕರಣದಲ್ಲಿ ಆಕೆಯ ಹೆಸರು ಬಂದಿದೆ. ಆದರೆ ಆಕೆ ಅಂಥ ವ್ಯಕ್ತಿ ಅಲ್ಲ. ಅವರು ತೆಗೆದುಕೊಂಡ ಕ್ರಮಕ್ಕೆ ನಾನು ಬೆಂಬಲ ನೀಡುತ್ತಿಲ್ಲ. ಅವರು ಆ ರೀತಿಯ ಮಹಿಳೆ ಅಲ್ಲ ಅಂತ ನಾನು ಹೇಳುತ್ತೇನೆ. ನಾನು ತುಂಬ ಪ್ರಾಕ್ಟಿಕಲ್​ ಮನುಷ್ಯ. ಈ ಪ್ರಕರಣದಲ್ಲಿ ಮುಖ್ಯ ವಿಚಾರವನ್ನು ಜನರು ಬಿಟ್ಟಿದ್ದಾರೆ. ಯಾರು ಸಾಯಿಸಿದ್ದಾರೋ ಆ ಬಗ್ಗೆ ಕಾನೂನು ವಿಚಾರ ಮಾಡುತ್ತದೆ’ ಎಂದು ಸಂಜಯ್​ ಸಿಂಗ್​ ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Loading...
Unable to load recommendations.
Follow Us
ಮಾಲತೇಶ ಜಗ್ಗೀನ್

ಮಾಲತೇಶ ಜಗ್ಗೀನ್. Tv9 ಕನ್ನಡ ವಾಹಿನಿ ಫಿಲಂ ಬ್ಯೂರೋ ಮುಖ್ಯಸ್ಥನಾಗಿ ಕೆಲಸ ಮಾಡ್ತಿದ್ದಾರೆ. ಮಾಲತೇಶ ವಿಜಯನಗರ ಜಿಲ್ಲೆ ಹೂವಿನ ಹಡಗಲಿ ತಾಲ್ಲೂಕು ಹೊಳಲು ಗ್ರಾಮದವರು. ಕಳೆದ 15 ವರ್ಷಗಳಲ್ಲಿ ಮಾಧ್ಯಮ ಲೋಕದ ವಿವಿಧ ವಿಭಾಗಗಳಲ್ಲಿ ವರದಿಗಾರಿಕೆ ಮಾಡಿದ ಅನುಭವ ಇದೆ. ಸಿನಿಮಾ ವಿಭಾಗದ ಜೊತೆ ರಾಜಕೀಯ, ಮೆಟ್ರೋ, ಕ್ರೈಂ ವಿಭಾಗದಲ್ಲೂ ಕೆಲವು ಸನ್ನಿವೇಶಗಳಲ್ಲಿ ವರದಿಗಾರಿಕೆ ಮಾಡಿದ್ದಾರೆ. ಹಾವೇರಿಯ ಕೆಎಫ್ ಚಾನಲ್ , ನಂತರ ಬೆಂಗಳೂರಿನ ಸಮಯ ನ್ಯೂಸ್, ಜನಶ್ರಿ ನ್ಯೂಸ್, ಪಬ್ಲಿಕ್ ಟಿವಿ ಸೇರಿದಂತೆ ವಿವಿಧ ವಾಹಿನಿಗಳಲ್ಲಿ ಕೆಲಸ ಮಾಡಿದ ಅನುಭವ ಇದೆ. Tv9kannada ನ್ಯೂಸ್ ಚಾನಲ್ ನಲ್ಲಿ ಕಳೆದ 10 ವರ್ಷಗಳಿಂದ ಇದ್ದಾರೆ. ಕಲೆ, ಸಾಹಿತ್ಯ, ಸಿನಿಮಾ, ಕ್ರಿಡೆ ಆಸಕ್ತಿ ವಿಷಯಗಳು.

Read More