Loading video

ಮಗನಿಗಾಗಿ ಮುಡಿಕೊಟ್ಟು ತಿರುಪತಿಯಲ್ಲಿ ದೇವರ ದರ್ಶನ ಮಾಡಿದ ಪವನ್ ಕಲ್ಯಾಣ್ ಪತ್ನಿ

|

Updated on: Apr 14, 2025 | 10:53 AM

ಆಂಧ್ರ ಪ್ರದೇಶ ಉಪ ಮುಖ್ಯಮಂತ್ರಿ, ಟಾಲಿವುಡ್ ನಟ ಪವನ್ ಕಲ್ಯಾಣ್ ಪತ್ನಿ ಅನ್ನಾ ಲೆಜ್ನೆವಾ ಅವರು ತಿರುಪತಿಗೆ ತೆರಳಿ ಮುಡಿಕೊಟ್ಟಿದ್ದಾರೆ. ಇಂದು (ಏಪ್ರಿಲ್ 14) ಅವರು ದೇವಸ್ಥಾನ ದರ್ಶನ ಮಾಡಿ, ತೆಂಗಿನ ಕಾಯಿ ಒಡೆದಿದ್ದಾರೆ. ಈ ಸಂದರ್ಭದ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿ ಗಮನ ಸೆಳೆದಿವೆ.  

ಕೆಲವೇ ದಿನಗಳ ಹಿಂದೆ ಪವನ್ ಕಲ್ಯಾಣ್ (Pawan Kalyan) ಹಾಗೂ ಅನ್ನಾ ಲೆಜ್ನಾವಾ ದಂಪತಿಯ ಮಗ  ಮಾರ್ಕ್ ಶಂಕರ್ ಸಿಂಗಾಪುರದಲ್ಲಿ ಅಗ್ನಿ ಅವಘಡದಿಂದ ಪಾರಾಗಿದ್ದ. ಮಗನಿಗೆ ಯಾವುದೇ ತೊಂದರೆ ಆಗಿಲ್ಲ ಎಂಬ ವಿಚಾರ ಅವರ ಅಭಿಮಾನಿಗಳಿಗೆ ಖುಷಿ ನೀಡಿದೆ. ಮಗ ಚೇತರಿಕೆ ಕಂಡ ಹಿನ್ನೆಲೆಯಲ್ಲಿ ಪವನ್ ಕಲ್ಯಾಣ್ ಪತ್ನಿ ಅನ್ನಾ ಲೆಜ್ನೆವಾ ಅವರು ತಿರುಪತಿಯಲ್ಲಿ ಮುಡಿಕೊಟ್ಟಿದ್ದಾರೆ. ಇಂದು ಅವರು ಪೂಜೆ ಕೂಡ ಮಾಡಿದ್ದು, ಆ ಸಂದರ್ಭದ ವಿಡಿಯೋ ವೈರಲ್ ಆಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.