ಚುನಾವಣೆಯಲ್ಲಿ ಗೆದ್ದ ಪವನ್ ಕಲ್ಯಾಣ್ಗೆ ಪತ್ನಿಯಿಂದ ವೀರತಿಲಕ
ಪವನ್ ಕಲ್ಯಾಣ್ ಮೊದಲ ಬಾರಿಗೆ ಚುನಾವಣೆಯಲ್ಲಿ ಗೆದ್ದು ಶಾಸಕರಾಗಿದ್ದಾರೆ. ಸಚಿವರೂ ಆಗುವ ಸಂಭವ ಇದೆ. ಗೆದ್ದ ಪವನ್ ಕಲ್ಯಾಣ್ಗೆ ಅವರ ಪತ್ನಿ ಅನ್ನಾ ಲೆಜ್ನೆವಾ ಆರತಿ ಬೆಳಗಿ ತಿಲಕವಿಟ್ಟಿದ್ದಾರೆ.
ಪವನ್ ಕಲ್ಯಾಣ್ಗೆ (Pawan Kalyan) ಇದು ಅತ್ಯಂತ ಯಶಸ್ವಿ ಚುನಾವಣೆ. ಜನಸೇನಾ ಪಕ್ಷ ಸ್ಥಾಪಿಸಿ ಕಳೆದ ಹತ್ತು ವರ್ಷದಿಂದಲೂ ರಾಜಕೀಯ ನೆಲೆಗಾಗಿ ಹೋರಾಡುತ್ತಿದ್ದ ಪವನ್ ಕಲ್ಯಾಣ್ಗೆ ಭಾರಿ ಭರವಸೆಯನ್ನು ಈ ಬಾರಿಯ ಆಂಧ್ರ ವಿಧಾನಸಭೆ ಚುನಾವಣೆ ನೀಡಿದೆ. ಟಿಡಿಪಿ ಹಾಗೂ ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡಿದ್ದ ಪವನ್ ಕಲ್ಯಾಣ್ಗೆ 21 ಕ್ಷೇತ್ರಗಳನ್ನು ನೀಡಲಾಗಿತ್ತು. ತಾವು ಪೀಠಾಪುರಂನಿಂದ ಸ್ಪರ್ಧಿಸಿ ಗೆದ್ದಿದ್ದು ಮಾತ್ರವೇ ಅಲ್ಲದೆ ತಮ್ಮ ಪಕ್ಷದ ಎಲ್ಲ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಂಡಿದ್ದಾರೆ. ಆ ಮೂಲಕ ಯಶಸ್ವಿಯಾಗಿ ಆಂಧ್ರ ವಿಧಾನಸಭೆ ಪ್ರವೇಶಿಸಿದ್ದಾರೆ. ಚುನಾವಣೆಯಲ್ಲಿ ಮೊದಲ ಬಾರಿಗೆ ಗೆದ್ದ ಪವನ್ ಕಲ್ಯಾಣ್ಗೆ ಅವರ ಪತ್ನಿ ಅನ್ನಾ ಲೆಜ್ನೇವಾ ಆರತಿ ಬೆಳಗಿ, ತಿಲವಿಟ್ಟಿದ್ದಾರೆ. ಈ ವೇಳೆ ಅನ್ನಾ ಲೆಜ್ವೇವಾ ಭಾವುಕಗೊಂಡಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ