ಡಿಕೆ ಸುರೇಶ್ ವಿರುದ್ಧ ಸಿಎನ್ ಮಂಜುನಾಥ್ ಭರ್ಜರಿ ಗೆಲುವು: ಸೀಕ್ರೆಟ್ ಬಿಚ್ಚಿಟ್ಟ ವೈದ್ಯ
Bengaluru Rural Lok Sabha Election Results 2024: ಬೆಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಡಾ. ಸಿಎನ್ ಮಂಜುನಾಥ್, 50 ಸಾವಿರ ಅಥವಾ 2 ಲಕ್ಷ ರೇಂಜ್ನಲ್ಲಿ ಗೆಲ್ಲುತ್ತೇವೆ ಅಂತಾ ಇತ್ತು. 2 ಲಕ್ಷ ರೇಂಜ್ನಲ್ಲಿ ಗೆದ್ದಿದ್ದೇವೆ. ಇದಕ್ಕಾಗಿ ಕಾರ್ಯಕರ್ತರು ಕೆಲಸ ಮಾಡಿದ್ದಾರೆ. ಈ ಗೆಲುವು ಪ್ರಜ್ಞಾವಂತ ಹಾಗೂ ಮತದಾರರ ಗೆಲುವು. ಈ ಗೆಲುವು ಕಾರ್ಯಕರ್ತರಿಗೆ ಅರ್ಪಣೆ ಮಾಡುತ್ತೇನೆ ಎಂದು ಹೇಳಿದ್ದಾರೆ.
ಬೆಂಗಳೂರು, ಜೂನ್ 04: ಕಾಂಗ್ರೆಸ್ ಅಭ್ಯರ್ಥಿ ಡಿಕೆ ಸುರೇಶ್ (DK Suresh) ವಿರುದ್ಧ ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಡಾ. ಸಿಎನ್ ಮಂಜುನಾಥ್ (Dr.CN Manjunath) ಭರ್ಜರಿ ಗೆಲುವು ಸಾಧಿಸಿದ್ದಾರೆ. ಈ ಕುರಿತಾಗಿ ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಪ್ರತಿಷ್ಟಿತ ಹಾಗೂ ಹೈವೋಲ್ಟೆಜ್ ಕ್ಷೇತ್ರವಾಗಿತ್ತು. ಜನ ಪ್ರೀತಿಯಿಂದ ಅಭಿಮಾನದಿಂದ ಮತ ಕೊಟ್ಟಿದ್ದಾರೆ. ಜನ ಕೊಟ್ಟ ಪ್ರೀತಿಗೆ ಧನ್ಯವಾದಗಳು. 50 ಸಾವಿರ ಅಥವಾ 2 ಲಕ್ಷ ರೇಂಜ್ನಲ್ಲಿ ಗೆಲ್ಲುತ್ತೇವೆ ಅಂತಾ ಇತ್ತು. 2 ಲಕ್ಷ ರೇಂಜ್ನಲ್ಲಿ ಗೆದ್ದಿದ್ದೇವೆ. ಇದಕ್ಕಾಗಿ ಕಾರ್ಯಕರ್ತರು ಕೆಲಸ ಮಾಡಿದ್ದಾರೆ. ಈ ಗೆಲುವು ಪ್ರಜ್ಞಾವಂತ ಹಾಗೂ ಮತದಾರರ ಗೆಲುವು. ಈ ಗೆಲುವು ಕಾರ್ಯಕರ್ತರಿಗೆ ಅರ್ಪಣೆ ಮಾಡುತ್ತೇನೆ. ಎಲ್ಲಾ ಶಕ್ತಿಗಿಂತ ಜನಶಕ್ತಿ ದೊಡ್ಡದು. ಆರೋಗ್ಯ, ಶಿಕ್ಷಣ, ಮೂಲಭೂತ ಸೌಕರ್ಯಗಳ ಬಗ್ಗೆ ಕೆಲಸ ಮಾಡುತ್ತೇವೆ. ಮಾವ ಹಾಗೂ ಅತ್ತೆಯ ಆರ್ಶೀವಾದ ಪಡೆದವು. ನನ್ನ ಗೆಲುವಿಗೆ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ಜೆಡಿಎಸ್ ವಸಿಷ್ಟ ಹೆಚ್ಡಿ ದೇವೇಗೌಡ, ಮಾಜಿ ಸಿಎಂ ಹೆಚ್ಡಿ ಕುಮಾರಸ್ವಾಮಿ ಮತ್ತು ಎಲ್ಲಾ ಸದಸ್ಯರ ಪಾತ್ರವಿದೆ. ದೆಹಲಿಗೆ ಬರುವ ಬಗ್ಗೆ ಹೈಕಮಾಂಡ್ನಿಂದ 24 ಗಂಟೆಯಲ್ಲಿ ಕರೆ ಬರಬಹುದು ಎಂದು ಹೇಳಿದ್ದಾರೆ.
ವರದಿ: ಪ್ರದೀಪ್
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.
ಗ್ಯಾರಂಟಿ ಯೋಜನೆಗಳಿಗೆ ಮತ್ತೊಂದು ರೂಲ್ಸ್: ಮನೆಗೆ ಬಂದು ದಾಖಲೆ ಚೆಕ್ಕಿಂಗ್
‘ನಾನು ಇಲ್ಲಿ ನಿಂತಿದ್ದಕ್ಕೆ ಟೈಗರ್ ಪ್ರಭಾಕರ್ ಕಾರಣ’: ವಿನೋದ್ ಪ್ರಭಾಕರ್
ರಾಜ್ಯದ ಜನತೆಗೆ ಶೀಘ್ರದಲ್ಲೇ ಕಾದಿದ್ಯಾ ಬಸ್ ಪ್ರಯಾಣ ದರ ಏರಿಕೆ ಶಾಕ್?
ರಾಹುಲ್ ಗಾಂಧಿ ಫೋಟೋಗೆ ಹಾಲಿನ ಅಭಿಷೇಕ ಮಾಡಿದ ಅಭಿಮಾನಿಗಳು!

