ಶಾಂತಿ ಮಂತ್ರ ಜಪಿಸಿದರೆ ಶಾಂತಿ ನೆಲೆಗೊಳ್ಳುವುದಿಲ್ಲ, ಯುದ್ಧದ ನಂತರವೇ ಅದರ ಸ್ಥಾಪನೆಯಾಗೋದು: ಪ್ರತಾಪ್ ಸಿಂಹ

Updated on: May 07, 2025 | 4:45 PM

ಇಂದು ಬೆಳಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸುದ್ದಿಗೋಷ್ಠಿ ನಡೆಸಲು ಹಣೆಗೆ ದೊಡ್ಡ ತಿಲಕವನ್ನಿಟ್ಟುಕೊಂಡು ಬಂದಿದ್ದನ್ನು ಗೇಲಿ ಮಾಡಿದ ಪ್ರತಾಪ್ ಸಿಂಹ, ಪಹಲ್ಗಾಮ್ ದಾಳಿಯ ನಂತರ ಯುದ್ಧ ಬೇಡ ಅನ್ನುತ್ತಿದ್ದ ಅವರು, ಜನ ತೆಗಳಲಾರಂಭಿಸಿದ ಬಳಿಕ ಟೋನ್ ಬದಲಿಸಿದರು, ಪಾಕಿಸ್ತಾನದ ಉಗ್ರರ ನೆಲೆಗಳ ಮೇಲೆ ಪ್ರಧಾನಿ ಮೋದಿಯವರು ದಾಳಿ ಮಾಡಿಸಿದ್ದನ್ನು ಸಮರ್ಥಿಸಿಕೊಳ್ಳಲು ಸಿದ್ದರಾಮಯ್ಯ ಹಣೆಗೆ ತಿಲಕವನ್ನಿಟ್ಟುಕೊಂಡು ಸಿಂಧೂರ ರಾಮಯ್ಯನಾಗಿ ಬಂದರು ಎಂದರು.

ಮೈಸೂರು, ಮೇ 7: ನಗರದಲ್ಲಿಂದು ಮಾಧ್ಯಮದವರೊಂದಿಗೆ ಮಾತಾಡಿದ ಮಾಜಿ ಸಂಸದ ಪ್ರತಾಪ್ ಸಿಂಹ, ಮಹಾತ್ಮಾ ಗಾಂಧಿ (Mahatma Gandhi) ಹೇಳಿದನ್ನು ಕೋಟ್ ಮಾಡುತ್ತ ಶಾಂತಿ ಮಂತ್ರ ಪಠಿಸುವ ಟ್ವೀಟ್ ಮಾಡಿದ ಕಾಂಗ್ರೆಸ್ ನಾಯಕರ ವಿರುದ್ಧ ಹರಿಹಾಯ್ದರು. ಕಾಂಗ್ರೆಸ್ ಹೇಳುವ ಪ್ರಕಾರ ಗಾಂಧೀಜಿಯವ ಶಾಂತಿ ತತ್ವದಿಂದಲೇ ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಿತಾ? ಭಗತ್ ಸಿಂಗ್, ಚಂದ್ರಶೇಖರ್ ಆಜಾದ್, ರಾಜಗುರು, ಸುಖದೇವ್, ವೀರಸಾರ್ವಕರ್ ಮೊದಲಾದವರೆಲ್ಲ ಯಾರಿಗಾಗಿ ತಮ್ಮ ಜೀವಗಳನ್ನು ಬಲಿದಾನ ಮಾಡಿದರು? ನಮ್ಮ ಪುರಾಣಗಳು, ಇತಿಹಾಸ ತಿಳಿಸುವ ಪ್ರಕಾರ ಶಾಂತಿ ಸ್ಥಾಪನೆಯಾಗೋದು ಯುದ್ಧದ ನಂತರವೇ ಹೊರತು ಸುಮ್ಮನೆ ಕೂತು ಶಾಂತಿ ಅಂತ ಹೇಳುವುದರಿಂದ ಅಲ್ಲ ಎಂದು ಪ್ರತಾಪ್ ಸಿಂಹ ಹೇಳಿದರು.

ಇದನ್ನೂ ಓದಿ:  ಬೆಂಗಳೂರಲ್ಲಿ ನಡೆಯುವ ಎಲ್ಲ ಘಟನೆಗಳಿಗೆ ಕನ್ನಡ-ಕನ್ನಡೇತರ ಹಣೆಪಟ್ಟಿ ಕಟ್ಟಲಾಗುತ್ತಿದೆ: ಪ್ರತಾಪ್ ಸಿಂಹ

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ