ಧಾರವಾಡದ ಶ್ರಮಿಕರ ಮತ್ತು ಕಾರ್ಮಿಕರ ಬಡಾವಣೆಗಳಲ್ಲಿ ಪೇಜಾವರ ಶ್ರೀಗಳ ಪಾದಯಾತ್ರೆ
ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಶ್ರೀಗಳು ಧಾರವಾಡದ ಕಾರ್ಮಿಕರ ಮತ್ತು ಶ್ರಮಿಕರ ಬಡಾವಣೆಗಳಿಗೆ ಭೇಟಿ ನೀಡಿ, ಸ್ಥಳೀಯರೊಂದಿಗೆ ಸಂವಾದ ನಡೆಸಿದರು. ದಲಿತ ಸಮುದಾಯದವರೊಂದಿಗೆ ಮಾತುಕತೆ ನಡೆಸಿ, ಹಿಂದೂ ಸಮಾಜದ ಏಕತೆ ಮತ್ತು ಸೌಹಾರ್ದತೆಯ ಸಂದೇಶವನ್ನು ರವಾನಿಸಿದರು. ದೌರ್ಜನ್ಯದ ಬಗ್ಗೆ ವರದಿಯಾದ ವಿಷಯದ ಕುರಿತು ಅಧಿಕೃತ ಮಾಹಿತಿ ಬಂದಲ್ಲಿ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.
ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಶ್ರೀಗಳು ಧಾರವಾಡ ನಗರದ ಶ್ರಮಿಕರ ಮತ್ತು ಕಾರ್ಮಿಕರ ಬಡಾವಣೆಗಳಿಗೆ ಭೇಟಿ ನೀಡಿದರು. ನಗರದ ಲಕ್ಷ್ಮೀಸಿಂಗನಕೆರೆ, ಮಾಳಮಡ್ಡಿ ಬಡಾವಣೆಗಳಲ್ಲಿ ಶ್ರೀಗಳು ಪಾದಯಾತ್ರೆ ನಡೆಸಿದರು. ಸ್ಥಳೀಯರು ದಾರಿಯುದ್ದಕ್ಕೂ ಹೂ ಹಾಕಿ ಅದ್ದೂರಿಯಾಗಿ ಸ್ವಾಗತಕೋರಿದರು. ಬಡಾವಣೆಯ ಯಲ್ಲಮ್ಮದೇವಿ, ಸಿದ್ದರಾಮೇಶ್ವರ ದೇವಸ್ಥಾನ ಸೇರಿದಂತೆ ವಿವಿಧ ದೇವಸ್ಥಾನಗಳಿಗೆ ಭೇಟಿ ನೀಡಿದರು. ಈ ವೇಳೆ ದಲಿತ ಸಮುದಾಯದವರೊಂದಿಗೆ ಶ್ರೀಗಳು ಮಾತುಕತೆ ನಡೆಸಿದರು. ಹಿಂದೂ ಸಮಾಜ ಒಗ್ಗೂಡಿಸುವ ಕುರಿತಂತೆ ಶ್ರೀಗಳ ಸಂದೇಶ ನೀಡಿದರು.
“ದಲಿತ ಯುವತಿಯರ ಮೇಲೆ ಮುಸ್ಲಿಂರಿಂದ ದೌರ್ಜನ್ಯ ಅಗುತ್ತಿವೆ, ಆಗ ಹಿಂದೂ ಸ್ವಾಮೀಜಿಗಳೆಲ್ಲ ನಮ್ಮ ಬೆಂಬಲಕ್ಕೆ ನಿಲ್ಲಬೇಕು” ಎಂದು ಕಾಂಗ್ರೆಸ್ ನಾಮನಿರ್ದೇಶಿತ ಪಾಲಿಕೆ ಸದಸ್ಯ ತುಳಸಪ್ಪ ಪೂಜಾರ ನೋವು ತೋಡಿಕೊಂಡರು. ಇದಕ್ಕೆ ಪ್ರತಿಕ್ರಿಯಿಸಿದ ಪೇಜಾವರ ಶ್ರೀಗಳು “ಅದು ನಮ್ಮ ಗಮನಕ್ಕೆ ಬರಬೇಕು. ಗಮನಕ್ಕೆ ಬಂದರೆ ನಾವು ಧ್ವನಿ ಎತ್ತುತ್ತೇವೆ. ಅಧಿಕೃತವಾಗಿ ನಮಗೆ ಮಾಹಿತಿ ಬರಬೇಕು. ವಿಹೆಚ್‌ಪಿ ಮೂಲಕ ಮಾಹಿತಿ ನೀಡಿ. ಆಗ ಅದು ಕೇಂದ್ರ ಮಟ್ಟಕ್ಕೂ ಹೋಗುತ್ತದೆ ಎಂದರು.