Karnataka Budget Session; ಉಪ ಚುನಾವಣೆಯಲ್ಲಿ ಭರ್ಜರಿ ಗೆಲುವು ನಮ್ಮ ಗ್ಯಾರಂಟಿ ಯೋಜನೆಗಳಿಗೆ ಸಂದಿರುವ ಮನ್ನಣೆ: ಸಿದ್ದರಾಮಯ್ಯ
ಶಕ್ತಿ ಯೋಜನೆ ಅಡಿ ಇದುವರೆಗೆ ಸುಮಾರು 410 ಕೋಟಿ ಮಹಿಳೆಯರು ಸರ್ಕಾರೀ ಬಸ್ಗಳಲ್ಲಿ ಉಚಿತ ಪ್ರಯಾಣ ಮಾಡಿದ್ದಾರೆ, ಬಿಜೆಪಿ ನಾಯಕರು ಹೇಳುವ ಸುಳ್ಳುಗಳನ್ನು ನಂಬಲು ಜನ ತಯಾರಿಲ್ಲ ಎಂದು ಸಿದ್ದರಾಮಯ್ಯ ಹೇಳಿದರು. ಗ್ಯಾರಂಟಿ ಯೋಜನೆಗಳ ಬಗ್ಗೆ ಅಷ್ಟೆಲ್ಲ ಆತ್ಮವಿಶ್ವಾಸ ಹೊಂದಿದ್ದರೆ ಬೇರೆ ರಾಜ್ಯಗಳಲ್ಲಿ ಯಾಕೆ ಕಾಂಗ್ರೆಸ್ ಗೆಲ್ಲಲಿಲ್ಲ ಅಂತ ಬಿಜೆಪಿ ನಾಯಕರು ಕೇಳಿದ್ದಕ್ಕೆ ಸಿಎಂ ಸಮರ್ಪಕ ಉತ್ತರ ನೀಡಲಿಲ್ಲ.
ಬೆಂಗಳೂರು, 17 ಮಾರ್ಚ್: ವಿಧಾನಸಭಾ ಅಧಿವೇಶನದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಇಂದು ಫಾರ್ಮ್ನಲ್ಲಿದ್ದ ಬ್ಯಾಟರ್ನಂತೆ ಗೋಚರಿಸಿದರು. ಲೋಕಸಭಾ ಚುನಾವಣೆಯ ಬಳಿಕ ಸಿದ್ದರಾಮಯ್ಯ ಸರ್ಕಾರ ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸಿಬಿಡುತ್ತದೆ, ಅಭಿವೃದ್ಧಿ ಕಾರ್ಯಗಳಿಗೆ ದುಡ್ಡಿಲ್ಲ, ಖಜಾನೆ ಬರಿದಾಗಿ ಹೋಗಿದೆ ಅಂತೆಲ್ಲ ಸರ್ಕಾರದ ವಿರುದ್ಧ ಅಪಪ್ರಚಾರವನ್ನು ಬಿಜೆಪಿ ನಾಯಕರು ಮಾಡಿದರು, ಆದರೆ ಜನ ಅವರ ಮಾತನ್ನು ನಂಬಲಿಲ್ಲ, ಅವರು ಹೇಳಿದ್ದೇ ನಿಜವಾಗಿದ್ದರೆ ಕಳೆದ ವರ್ಷ ನಡೆದ ಮೂರು ಉಪ ಚುನಾವಣೆಗಳನ್ನು ಬಿಜೆಪಿ ಅಥವಾ ಜೆಡಿಎಸ್ ಗೆಲ್ಲುತಿತ್ತು ಎಂದು ಸಿದ್ದರಾಮಯ್ಯ ಹೇಳಿದರು.
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಕೂಲಿ ನಾಲಿ ಮಾಡಿಕೊಂಡಿದ್ದ ಜನರಿಗೆ ಸಿದ್ದರಾಮಯ್ಯ ಸರ್ಕಾರ ಮೋಸ ಮಾಡಿದೆ: ಚಿತ್ರದುರ್ಗದ ಮಹಿಳೆಯರು