ಕೇವಲ ಅಕ್ಕಿಯಿಂದ ಮಾತ್ರ ಬಡವರ ಹೊಟ್ಟೆ ತುಂಬುತ್ತಾ? ಅವರಿಗೆ ದುಡಿಯುವುದು ತಪ್ಪಲ್ಲ: ಯತೀದ್ರ ಸಿದ್ದರಾಮಯ್ಯ

Updated on: Jul 10, 2025 | 10:29 AM

ಗ್ಯಾರಂಟಿ ಯೋಜನೆಗಳ ಬಗ್ಗೆ ಮುಖ್ಯಮಂತ್ರಿಯವರ ಆರ್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿ ನೀಡಿರುವ ಹೇಳಿಕೆಗಳಿಗೆ ಪ್ರತಿಕ್ರಿಯಿಸಿದ ಯತೀಂದ್ರ, ರಾಯರೆಡ್ಡಿ ನಂತರ ಸ್ಪಷ್ಟನೆ ನೀಡಿರುವ ವಿಷಯ ಯಾರೂ ಮಾತಾಡಲ್ಲ, ಸರ್ಕಾರ ರಚನೆಯಾದಾಗಿನಿಂದ ಯೋಜನೆಗಳು ನಿಲ್ಲುತ್ತವೆ ಅಂತ ಹೇಳುತ್ತಿದ್ದಾರೆ, ಆದರೆ ಅವು ಯಾವತ್ತೂ ನಿಲ್ಲಲ್ಲ ಎಂದು ಹೇಳಿದರು.

ಮೈಸೂರು, ಜುಲೈ 10: ವಿಧಾನ ಪರಿಷತ್ ಸದಸ್ಯ ಯತೀಂದ್ರ ಸಿದ್ದರಾಮಯ್ಯ ತಮ್ಮ ತಂದೆ ಸಿಎಂ ಸಿದ್ದರಾಮಯ್ಯ (CM Siddaramaiah) ಪರವಹಿಸಿಕೊಂಡು ಮಾತಾಡುವುದನ್ನು ನಿಲ್ಲಿಸುವುದಿಲ್ಲ. ಇವತ್ತು ಮೈಸೂರಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಅವರು, ಸಿದ್ದರಾಮಯ್ಯ ಪೂರ್ಣಾವಧಿಗೆ ಮುಖ್ಯಮಂತ್ರಿಗಳಾಗಿರುತ್ತಾರೆ ಅಂತ ಪುನರುಚ್ಛರಿಸಿದರು. ಗ್ಯಾರಂಟಿ ಯೋಜನೆಗಳಿಂದ ಜನ ಸೋಂಬೇರಿಗಳಾಗುತ್ತಿದ್ದಾರೆ ಎಂಬ ವಾದವನ್ನು ತಿರಸ್ಕರಿಸಿದ ಯತೀಂದ್ರ, ಸಿದ್ದರಾಮಯ್ಯ ಮೊದಲಾವಧಿಯಲ್ಲಿ ಭಾಗ್ಯಗಳನ್ನು ನೀಡಿದಾಗಲೂ ಹಾಗೆ ಹೇಳಲಾಗಿತ್ತು, ಆದರೆ ಯಾರೂ ಸೋಮಾರಿಗಳಾಗಲಿಲ್ಲ, ಬಡವರು ಹಸಿದ ಹೊಟ್ಟೆಯಲ್ಲಿ ಮಲಗಬಾರದು ಅಂತ ಗ್ಯಾರಂಟಿ ಯೋಜನೆಗಳನ್ನು ಸರ್ಕಾರ ನೀಡಿದೆ, ಕಾಂಗ್ರೆಸ್ ಯಾವತ್ತಿಗೂ ದೇಶದ ಬಡಜನರ ಪರ ಇದೆ ಎಂದು ಹೇಳಿದರು.

ಇದನ್ನೂ ಓದಿ:   ಸಂವಿಧಾನವನ್ನು ಬದಲಿಸುತ್ತೇವೆ ಅಂತ ಶಿವಕುಮಾರ್ ಹೇಳಿಲ್ಲ, ಅವರನ್ನು ಮಿಸ್ಕೋಟ್ ಮಾಡಲಾಗುತ್ತಿದೆ: ಯತೀಂದ್ರ ಸಿದ್ದರಾಮಯ್ಯ

ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ