AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಾಲ್ತುಳಿತದ ಬಳಿಕವೂ ಎಚ್ಚೆತ್ತುಕೊಳ್ಳದ ಜನ: ಆಫರ್​​ ಬಟ್ಟೆಗಾಗಿ ಹೇಗೆ ಮುಗಿಬಿದ್ರು ನೋಡಿ

ಕಾಲ್ತುಳಿತದ ಬಳಿಕವೂ ಎಚ್ಚೆತ್ತುಕೊಳ್ಳದ ಜನ: ಆಫರ್​​ ಬಟ್ಟೆಗಾಗಿ ಹೇಗೆ ಮುಗಿಬಿದ್ರು ನೋಡಿ

ಭಾವನಾ ಹೆಗಡೆ
|

Updated on: Sep 28, 2025 | 3:02 PM

Share

ತಮಿಳು ನಟ ವಿಜಯ್ ರ‍್ಯಾಲಿಯಲ್ಲಿ ನಡೆದ ಕಾಲ್ತುಳಿತದ ನಂತರವೂ ಎಚ್ಚೆತ್ತುಕೊಳ್ಳದ ಯುವಜನತೆ ಆಫರ್ ಬಟ್ಟೆಗಳಿಗಾಗಿ ಮುಗಿಬಿದ್ದಿದ್ದಾರೆ. ಕೊಪ್ಪಳದ ಲೇಬರ್ ಸರ್ಕಲ್​ನಲ್ಲಿ ಆಫರ್ ಟ್ರೆಂಡ್ಸ್ ಎನ್ನುವ ಬಟ್ಟೆ ಅಂಗಡಿ ಪ್ರಾರಂಭವಾಗಿದೆ. ಹೊಸ ಆಫರ್​ಗಾಗಿ ಯುವಕ ಯುವತಿಯರು ಮುಗಿಬಿದ್ದಿದ್ದಾರೆ. ಪ್ರಾರಂಭದ ಮೊದಲನೇ ದಿನದಲ್ಲಿ1 ಸಾವಿರ ರೂಪಾಯಿಗೆ 8 ಶರ್ಟ್, 1 ಸಾವಿರ ರೂಪಾಯಿಗೆ 4 ಪ್ಯಾಂಟ್, 1 ಸಾವಿರ ರೂಪಾಯಿಗೆ ಎರಡು ಜೊತೆ ಶೂ ಎಂದು ಭರ್ಜರಿ ಆಫರ್ ಕಂಡ ಜನ ಅಂಗಡಿಯೊಳಗೆ ಹೋಗಲು ಹರಸಾಹಸ ಪಡುತ್ತಿದ್ದಾರೆ. ಯುವಕರನ್ನು ನಿಯಂತ್ರಿಸಲು ಪೊಲೀಸರ ಹರಸಾಹಸ ಪಡುತ್ತಿದ್ದಾರೆ.

ಕೊಪ್ಪಳ, ಸೆಪ್ಟೆಂಬರ್ 28: ತಮಿಳುನಾಡಿನಲ್ಲಿ ಸಂಭವಿಸಿರುವ ಕಾಲ್ತುಳಿತದ ನಂತರವೂ ಜನರು ಎಚ್ಚೆತ್ತುಕೊಂಡಿಲ್ಲ ಎನ್ನಬಹುದು. ಏಕೆಂದರೆ ಕೊಪ್ಪಳದ ಲೇಬರ್ ಸರ್ಕಲ್​ನಲ್ಲಿ ಆಫರ್ ಟ್ರೆಂಡ್ಸ್ ಎಂಬ ಬಟ್ಟೆ ಅಂಗಡಿ ಪ್ರಾರಂಭವಾಗಿದ್ದು, ಆಫರ್ ಹಿನ್ನಲೆ ಯುವಕ, ಯುವತಿಯರು ಮುಗಿಬಿದ್ದಿದ್ದರು. ಅಂಗಡಿ ಬರುತ್ತಿದ್ದ ಜನರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸವೇ ಪಟ್ಟರು. ವಿಡಿಯೋ ನೋಡಿ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.