Kolar | ಚೆಡ್ಡಿ ಧರಿಸಿದ ವ್ಯಕ್ತಿಯೂ ನನ್ನನ್ನು ನೇರವಾಗಿ ಭೇಟಿಯಾಗಬಹುದು!: ಸಿದ್ದರಾಮಯ್ಯ
ತಾವು ಸ್ಪರ್ಧಿಸಿದ ಕ್ಷೇತ್ರಗಳನ್ನೆಲ್ಲ ಅಭಿವೃದ್ಧಿ ಮಾಡಿರುವುದಾಗಿ ಹೇಳಿದ ಸಿದ್ದರಾಮಯ್ಯ ಕಳೆದೈದು ವರ್ಷಗಳಲ್ಲಿ ಬಾದಾಮಿ ಸಹ ಸಾಕಷ್ಟು ಅಭಿವೃದ್ಧಿ ಕಂಡಿದೆ ಎಂದು ಹೇಳಿದರು.
Kolar: ಮಾಜಿ ಮುಖ್ಯಮಂತ್ರಿ ಮತ್ತು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರು (Siddaramaiah) ಕೋಲಾರ (Kolar) ಜಿಲ್ಲೆಯ ಮತಕ್ಷೇತ್ರವೊಂದರಿಂದ 2023ರ ವಿಧಾನ ಸಭೆ ಚುನಾವಣೆಯಲ್ಲಿ ಸ್ಪರ್ಧಿಸುವುದು ಹೆಚ್ಚು ಕಡಿಮೆ ಖಚಿತವಾಗಿದೆ. ಅವರು ಕೋಲಾರದಲ್ಲಿ ಸಾರ್ವಜನಿಕ ಸಭೆಯೊಂದನ್ನು ಮಾಡಿದ ಭಾಷಣ ಚುನಾವಣಾ ಪ್ರಚಾರದಂತಿತ್ತು. ಎಲ್ಲ ಜನ ಕಷ್ಟಗಳಿಗೆ ಸ್ಪಂದಿಸುವುದಾಗಿ ಹೇಳಿದ ಅವರು ಚೆಡ್ಡಿ ಧರಿಸಿದ ವ್ಯಕ್ತಿಯೂ ಅಂದರೆ ಆರೆಸ್ಸೆಸ್ ನವರೂ ತಮ್ಮನ್ನು ನೇರವಾಗಿ ಭೇಟಿಯಾಗಬಹುದೆಂದು ಹೇಳಿದರು. ತಾವು ಸ್ಪರ್ಧಿಸಿದ ಕ್ಷೇತ್ರಗಳನ್ನೆಲ್ಲ ಅಭಿವೃದ್ಧಿ ಮಾಡಿರುವುದಾಗಿ ಹೇಳಿದ ಸಿದ್ದರಾಮಯ್ಯ ಕಳೆದೈದು ವರ್ಷಗಳಲ್ಲಿ ಬಾದಾಮಿ (Badami) ಸಹ ಸಾಕಷ್ಟು ಅಭಿವೃದ್ಧಿ ಕಂಡಿದೆ ಎಂದು ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ