Karnataka Assembly Session: ವಿಶ್ವಾಸವಿರದಿದ್ದರೆ ಉಪ ಚುನಾವಣೆಯಲ್ಲಿ ಜನ ನಮ್ಮನ್ನು ಗೆಲ್ಲಿಸುತ್ತಿರಲಿಲ್ಲ, ಅಶೋಕ್​ಗೆ ಶರತ್ ತಿರುಗೇಟು!

|

Updated on: Dec 13, 2024 | 4:08 PM

ಆಮೇಲೆ ಮಾತಾಡಿ ಎಂದು ವಕ್ಫ್ ಬಗ್ಗೆ ಮಾತಾಡುತ್ತಿದ್ದ ಅಶೋಕ ಅವರು ಶರತ್ ಗೆ ಹೇಳುತ್ತಾರೆ ಮತ್ತು ಬಿಜೆಪಿ ಅಧಿಕಾರದಲ್ಲಿದ್ದಾಗ ನಡೆದ ಉಪ ಚುನಾವಣೆಗಳಲ್ಲಿ ತಮ್ಮ ಪಕ್ಷದ ಅಭ್ಯರ್ಥಿಗಳು ಎಲ್ಲ 18ಸ್ಥಾನ ಗೆದ್ದಿದ್ದರು ಎನ್ನುತ್ತಾರೆ . ಅಶೋಕ ಅವರ ಸಮಸ್ಯೆಯೇ ಅದು, ಅವರು ವಿಷಯಗಳನ್ನು ಕೆದುಕುತ್ತಾರೆಯೇ ಹೊರತು ಅವುಗಳ ಮೇಲೆ ತಮ್ಮ ವಾದ ಮುಂದುವರಿಸಲಾಗದೆ ಅಥವಾ ವಾದಕ್ಕೆ ಸಮರ್ಥನೆ ನೀಡಲಾಗದೆ ಸೊರಗುತ್ತಾರೆ.

ಬೆಳಗಾವಿ: ಹೊಸಕೋಟೆ ಶಾಸಕ ಶರತ್ ಬಚ್ಚೇಗೌಡ ವಿರೋಧ ಪಕ್ಷದ ನಾಯಕ ಆರ್ ಅಶೋಕ ಅವರ ಮಾತಿಗೆ ಸಿಡಿದೆದ್ದ ಪ್ರಸಂಗ ಸದನದಲ್ಲಿ ನಡೆಯಿತು. ಸರ್ಕಾರದಿಂದ ಜನ ಬೇಸತ್ತಿದ್ದಾರೆ, ಯಾಕಾದರೂ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂತೋ ಅಂತ ತಲೆ ಚಚ್ಚಿಕೊಳ್ಳುತ್ತಿದ್ದಾರೆ ಅಂತ ಅಶೋಕ ಹೇಳಿದಾಗ, ಎದ್ದು ನಿಲ್ಲುವ ಶರತ್ ಜನಕ್ಕೆ ನಮ್ಮ ಸರ್ಕಾರದ ಮೇಲೆ ವಿಶ್ವಾಸವಿಲ್ಲ ಅಂತೆಲ್ಲ ಹೇಳಬೇಡಿ, ಮೊನ್ನೆ ನಡೆದ ಮೂರು ಉಪ ಚುನಾವಣೆಗಳಲ್ಲಿ ಜನ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳನ್ನು ಭಾರೀ ಬಹುಮತದಿಂದ ಗೆಲ್ಲಿಸಿದ್ದಾರೆ, ಅವರಿಗೆ ಸರ್ಕಾರದ ಮೇಲೆ ವಿಶ್ವಾಸವಿಲ್ಲದೆ ಹೋಗಿದ್ದರೆ ನಮ್ಮವರು ಗೆಲ್ಲುತ್ತಿರಲಿಲ್ಲ ಎಂದು ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:   ಮದವೇರಿದಾಗ ಸ್ಮಶಾನದಲ್ಲಿ ಸುತ್ತು ಹಾಕಬೇಕು: ಕಲಾಪದಲ್ಲಿ ಹೀಗೆಂದಿದ್ದೇಕೆ ಅಶೋಕ್? ಪಾಟೀಲ್ ಪ್ರತಿಕ್ರಿಯೆ ಏನಿತ್ತು ನೋಡಿ