ಮೈಸೂರಿನ ತರಕಾರಿ ಮತ್ತು ಹಣ್ಣಿನ ಮಾರ್ಕೆಟ್ನಲ್ಲಿ ಜನ ಕೊರೋನಾ ಸೋಂಕನ್ನು ಆಹ್ವಾನಿಸುತ್ತಿದ್ದಾರೆ!
ಸೋಂಕು ತಾಕಿದರೆ, ಉಸಿರಾಡಲು ಆಗುವ ತೊಂದರೆಯನ್ನು ನಾವು ಯೋಚಿಸಬೇಕಿದೆ. ಸೋಂಕು ತಾಕಿದಾಗ ನೋಡಿದರಾಯ್ತು ಅನ್ನೋದು ಶುದ್ಧ ಉಡಾಫೆಯ ಮಾತು ಮತ್ತು ಹೊಣೆಗೇಡಿತನವನ್ನು ಅದು ಪ್ರದರ್ಶಿಸುತ್ತದೆ. ಎರಡನೇ ಅಲೆ ಎದ್ದಾಗ ಜನ ಹೇಗೆ ಒದ್ದಾಡಿದರು ಅನ್ನೋದು ನಮಗೆ ಗೊತ್ತಿದ್ದರೂ ಮೂರ್ಖರಂತೆ ವರ್ತಿಸುತ್ತಿದ್ದೇವೆ.
ನೀವೇನೇ ಹೇಳಿ ಮಾರಾಯ್ರೇ, ಕೋವಿಡ್-19 ಪೀಡೆಯ ಮೊದಲ ಮತ್ತು ಎರಡನೇ ಅಲೆ ಸೃಷ್ಟಿಸಿದ ಮರಣ ಮೃದಂಗ ನಮಗೆ ಪಾಠ ಕಲಿಸಿಲ್ಲ. ಅವು ಯಾವ ಪರಿ ನಮ್ಮನ್ನು ಕಾಡಿದವು, ಕಾಡುತ್ತಿವೆ ಅಂತ ಚೆನ್ನಾಗಿ ಗೊತ್ತಿದೆ. ಈ ಹಿನ್ನೆಲೆಯಲ್ಲಿ ನಾವು ಮೂರನೇ ಸೋಂಕು ಶುರುವಾಗುವ ಮೊದಲು ಜಾಗರೂಕರಾಗಬೇಕಿತ್ತು ಮತ್ತು ವಿವೇಚನೆಯನ್ನು ಬೆಳೆಸಿಕೊಳ್ಳಬೇಕಿತ್ತು ಇಲ್ಲವೇ ಯಾರಿಂದಾದರೂ ಎರವಲಾದರೂ ಪಡೆಯಬೇಕಿತ್ತು. ಆದರೆ ಅದ್ಯಾವುದನ್ನೂ ನಾವು ಮಾಡುತ್ತಿಲ್ಲ. ಇದನ್ನು ಯಾಕೆ ಹೇಳಬೇಕಾಗಿದೆಯೆಂದರೆ, ಮೈಸೂರಿನಿಂದ ಟಿವಿ9 ವರದಿಗಾರ ರಾಮ್ ಅವರು ಒಂದು ವರದಿಯನ್ನು ಕಳಿಸಿದ್ದಾರೆ. ಅಲ್ಲಿನ ತರಕಾರಿ ಮತ್ತು ಹಣ್ಣಿನ ಮಾರುಕಟ್ಟೆಯಲ್ಲಿ ಜನ ಮಾಸ್ಕ್ ಧರಿಸದೆ, ದೈಹಿಕ ಅಂತರ ಕಾಯ್ದುಕೊಳ್ಳದೆ, ನಿರ್ಭಿಡೆಯಿಂದ ಓಡಾಡುತ್ತಿರುವುದು ನಿಮಗೆ ಈ ವಿಡಿಯೋನಲ್ಲಿ ಕಾಣುತ್ತದೆ.
ಕೆಮೆರಾವನ್ನು ಅವರೆಡೆ ಪ್ಯಾನ್ ಮಾಡಿದಾಗ ಮಾತ್ರ ಜನ ಮಾಸ್ಕ್ ಮುಖಕ್ಕೆ ಹಾಕಿಕೊಳ್ಳುವ ಪ್ರಯತ್ನ ಮಾಡುತ್ತಾರೆ! ಅವರು ತಮ್ಮನ್ನು ತಾವು ವಂಚಿಸಿಕೊಳ್ಳುತ್ತಿದ್ದಾರೆ. ಒಂದು ಬಗೆಯ ಅತ್ಮವಂಚನೆ ಇದು. ಮಾಸ್ಕ್ ಧರಿಸಿದರೆ ಉಸಿರುಗಟ್ಟಿದಂತಾಗುತ್ತದೆಯೇ? ಇಲ್ಲವಲ್ಲ. ಆದನ್ನು ಸರಿಯಾಗಿ ಮುಖದ ಮೇಲೆ ಬಾಯಿ ಮತ್ತು ಮೂಗನ್ನು ಕವರ್ ಮಾಡುವಂತೆ ಧರಿಸಲು ಶ್ರಮಪಡಬೇಕಾಗುತ್ತದೆಯೇ. ಊಹೂಂ.
ಆದರೆ, ಸೋಂಕು ತಾಕಿದರೆ, ಉಸಿರಾಡಲು ಆಗುವ ತೊಂದರೆಯನ್ನು ನಾವು ಯೋಚಿಸಬೇಕಿದೆ. ಸೋಂಕು ತಾಕಿದಾಗ ನೋಡಿದರಾಯ್ತು ಅನ್ನೋದು ಶುದ್ಧ ಉಡಾಫೆಯ ಮಾತು ಮತ್ತು ಹೊಣೆಗೇಡಿತನವನ್ನು ಅದು ಪ್ರದರ್ಶಿಸುತ್ತದೆ. ಎರಡನೇ ಅಲೆ ಎದ್ದಾಗ ಜನ ಹೇಗೆ ಒದ್ದಾಡಿದರು ಅನ್ನೋದು ನಮಗೆ ಗೊತ್ತಿದ್ದರೂ ಮೂರ್ಖರಂತೆ ವರ್ತಿಸುತ್ತಿದ್ದೇವೆ.
ಇನ್ನಾದರೂ ಎಚ್ಚೆತ್ತುಕೊಳ್ಳೋಣ. ನಾವೇನೂ ಗುಡ್ಡ ಕಡಿದು ರಸ್ತೆ ಮಾಡಬೇಕಿಲ್ಲ. ಸರ್ಕಾರ ಜಾರಿಗೊಳಿಸಿರುವ ನಿಯಾಮಾವಳಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಿದರೆ ಸಾಕು.
ಇದನ್ನೂ ಓದಿ: Saif Ali Khan: ಕರೀನಾ ಕಪೂರ್ಗಿಂದ ಕತ್ರಿನಾ ಹೆಚ್ಚು ಹಾಟ್ ಎಂದಿದ್ದ ಸೈಫ್; ಹಳೇ ವಿಡಿಯೋ ಮತ್ತೆ ವೈರಲ್